ಗ್ರಾಮದ ಯಜಮಾನರ ಮಾತು ಕೇಳದಕ್ಕೆ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರವನ್ನು ನೀಡಿದ್ದಾರೆ, ದಲಿತ ಸಮುದಾಯದ ಕುಟುಂಬಸ್ಥರಿಗೆ ಬಹುಷ್ಕಾರ ನೀಡಿದ್ದು, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರ ತವರೂರು ಸಿದ್ದರಾಮಯ್ಯ ಹುಂಡಿಯ ಪಕ್ಕದ ಗ್ರಾಮ ಶ್ರೀನಿವಾಸಪುರದಲ್ಲಿ ಅಮಾನವೀಯ ಘಟನೆ ನಡೆದಿದೆ.
ಯಜಮಾನರುಗಳಾದ ಚಿಕ್ಕಂಡಯ್ಯ, ಬಸವಯ್ಯ, ಮಹದೇವು, ಮೋಟಮಹದೇವಯ್ಯ ಮತ್ತು ಗ್ರಾಮ ಪಂಚಾಯತಿ ಮಾಜಿ ಸದಸ್ಯರಾದ ಮಹದೇವು ಹಾಗೂ ಬೊಮ್ಮಾಯಿ ಅವರಿಂದ ಗ್ರಾಮದ ಸುರೇಶ್ ಎಂಬುವರ ಕುಟುಂಬಕ್ಕೆ ನಾಲ್ಕು ವರ್ಷಗಳಿಂದ ಬಹಿಷ್ಕಾರವನ್ನು ಹಾಕಿದ್ದಾರೆ. ನಾಲ್ಕು ವರ್ಷಗಳ ಹಿಂದೆ ನಡೆದಿದ್ದ ಗಲಾಟೆ ಸಂಬಂಧ ನ್ಯಾಯ ಪಂಚಾಯತಿ ಮಾಡಲಾಗಿತ್ತು.
ರಂಗನಾಥಪುರ ಗ್ರಾಮದ ಪ್ರಮೋದ್ ಹಾಗೂ ಸುರೇಶ್ ನಡುವೆ ಗಲಾಟೆ ನಡೆದಿತ್ತು. ಪ್ರಮೋದ್ ಕಡೆಯವರು ಸುರೇಶ್ ಮನೆಗೆ ನುಗ್ಗಿ ಗಲಾಟೆ ಮಾಡಿ ಮನೆ ವಸ್ತುಗಳನ್ನು ಹಾಳು ಮಾಡಿದ್ದರು. ಇದರ ಬಗ್ಗೆ ನ್ಯಾಯ ಪಂಚಾಯತಿ ಮಾಡಿ ಇಬ್ಬರಿಗೂ ದಂಡ ಹಾಕಲಾಗಿತ್ತು.
ಪ್ರಮೋದ್ಗೆ 25 ಸಾವಿರ ಹಾಗೂ ಸುರೇಶ್ಗೆ 15 ಸಾವಿರ ದಂಡ ಹಾಕಿದ್ದರು. ತಮಗೆ ಅನ್ಯಾಯ ಆಗಿರುವ ಕಾರಣಕ್ಕೆ ದಂಡ ಕಟ್ಟಲ್ಲ ಎಂದಿದ್ದ ಸುರೇಶ್,
ಪಂಚಾಯಿತಿಯಲ್ಲಿ ತಮಗೆ ಮುಜುಗರ ಆಗಿದೆ ತಮ್ಮ ಮಾತು ಕೇಳಿಲ್ಲ ಎಂದು ಸುರೇಶ್ ಮೇಲೆ ಕೋಪಗೊಂಡಿದ್ದ ಯಜಮಾನರು ಅದೇ ಕೋಪದಲ್ಲಿ ತಪ್ಪು ಕಾಣಿಕ ಕಟ್ಟುವ ವರೆಗೂ ತಮ್ಮ ಕುಲಕ್ಕೆ ಸೇರಿಸಲ್ಲ ಎಂದು ಬಹಿಷ್ಕಾರ ಮಾಡಿದ್ದಾರೆ
ಬಹಿಷ್ಕಾರ ಸಂಬಂಧ ಜಿಲ್ಲಾಧಿಕಾರಿ, ಪೊಲೀಸರು, ತಹಸೀಲ್ದಾರ್ ಗೆ ದೂರು ನೀಡಿದರು. ಸಿಎಂ ಸಿದ್ದರಾಮಯ್ಯ, ಮಗ ಯತೀಂದ್ರ ಬಳಿ ಕಷ್ಟ ಹೇಳಿಕೊಂಡರೂ ಇವರಿಗೂ ಯಾವುದೇ ಪರಿಹಾರ ದೊರತಿಲ್ಲ.
ಹಬ್ಬ, ಸಾವು, ನೋವು, ಆಚರಣೆಗಳ ವಿಚಾರದಲ್ಲೂ ಕುಟುಂಬವನ್ನು ಗ್ರಾಮಸ್ಥರು ಹೊರಗೆ ಹೊರಗೆ ಇಟ್ಟಿದ್ದಾರೆ ಸುರೇಶ್ ಹಾಗೂ ಆತನ ತಾಯಿ ಮಹದೇವಮ್ಮ ಇಬ್ಬರನ್ನು ಗ್ರಾಮಸ್ಥರು ಹೊರಗಿಟ್ಟಿದ್ದಾರೆ.. ಪತಿ ಹಾಗೂ ಮಗ ತೀರಿಕೊಂಡಾಗಲೂ ಇವರ ಸಹಾಯಕ್ಕೆ ಯಾರು ಬಂದಿಲ್ಲ, ಕುಟುಂಬದ ಜೊತೆ ಯಾರೇ ಸಂಪರ್ಕಕ್ಕೆ ಬಂದರೂ 5 ಸಾವಿರ ದಂಡ ವಿಧಿಸಬೇಕು ಎಂದು ಊರಿನ ಯಜಮಾನರು ತಿಳಿಸಿದ್ದಾರೆ.
ಯುವ ರೈತರೇ ಇವರ ಟಾರ್ಗೆಟ್: ಉತ್ತರ ಕರ್ನಾಟಕದಲ್ಲಿ ಮದುವೆ ವಂಚನೆ.
ಬಾಗಲಕೋಟೆ : ಕನ್ಯೆ ಸಿಗದ ರೈತನಿಗೆ ಮೋಸದ ಮದುವೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಯುವ ರೈತನಿಗೆ ಮೋಸ ಮಾಡಿದವಳು ಎರಡು ಮದುವೆ, ಎರಡು ಹೆಣ್ಮಕ್ಕಳು, ಅಷ್ಟೇ ಅಲ್ಲ ಇಬ್ಬರು ಮೊಮ್ಮಕ್ಕಳು ಹೊಂದಿದ ಅಜ್ಜಿ ಎಂದು ಗೊತ್ತಾಗಿದೆ. ಮೇಲಾಗಿ ಮೋಸ ಹೋದ…