ಕಾಂಗ್ರೆಸ್ ನ ಭೈರತಿ : ಕುಲಕರ್ಣಿ ನಡುವೆ ವಾರ್ ಮೂಡಾ ಮೇಲೆ ಡೈರೆಕ್ಟ್ ಎಫೆಕ್ಟ್
ಮೈಸೂರು:-
ಇದರ ಮೊದಲ ಭಾಗವಾಗಿ BJP ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಪಟ್ಟಾ ಶಿಷ್ಯ ಮೈಸೂರಿನ ಬಿಜೆಪಿ ಮುಖಂಡ ಕೌಟಿಲ್ಯ ರಘು ಇಂದು ಖುದ್ದು ಅಖಾಡಕ್ಕೆ ಇಳಿದಿದ್ದಾರೆ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 50:50 ಅನುಪಾತದ ನಿವೇಶನ ಹಂಚಿಕೆಯಲ್ಲಿ ಬಹುಕೋಟಿ ಹಗರಣ ನಡೆದಿದೆ ಅಂತಾ ಪತ್ರಿಕಾಗೋಷ್ಠಿ ನಡೆಸಿ ಈ ಸುದ್ದಿ ಎಲ್ಲಾ ಪ್ರತಿಕೆಗಳಲ್ಲಿ ವರದಿ ಆಗುವಂತೆ ಪ್ಲಾನ್ ಮಾಡಲಾಗಿದೆ
ಈ ಪತ್ರಿಕಾ ವರದಿಗಳನ್ನ ಆದರಿಸಿ ಮುಂದೆ ನಡೆಯುವ ವಿಧಾನಸಭಾ ಅಧಿವೇಶನದಲ್ಲಿ ಮುಡಾ ಹಗರಣದ ಕುರಿತು ಧ್ವನಿ ಎತ್ತುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಇಕ್ಕಟ್ಟಿಗೆ ಸಿಲುಕಿಸುವ ಮಾಸ್ಟರ್ ಪ್ಲಾನ್ ಮಾಡಲಾಗಿದೆ
ಹೇಳಿ ಕೇಳಿ ಸಿಎಂ ಪರಮಾಪ್ತರಾಗಿರುವ ಭೈರತಿ ಸುರೇಶ್ ಅವರ ಇಲಾಖೆಯಲ್ಲಿ ಹಗರಣ ನಡೆದಿದೆ ಅದೂ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಬಹುಕೋಟಿ ಹಗರಣ ನಡೆದಿದ್ರು ಸಚಿವ ಮಾತ್ರ ಮೌನ ವಹಿಸಿದ್ದಾರೆ ಎಂದು ಆರೋಪಿಸಿ ಸಚಿವರ ರಾಜಿನಾಮೆಗೆ ಒತ್ತಾಯಿಸಿಸಲು ಮೈತ್ರಿ ಪಕ್ಷಗಳು ತೀರ್ಮಾನಿಸಿವೆ ಎನ್ನಲಾಗಿದೆ
ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಸಾಕಷ್ಟು ಭಾರಿ ಸಭೆ ನಡೆಸಿದ್ರು ಈ ಬಗ್ಗೆ ತನಿಖೆ ಮಾಡಿಸಿಲ್ಲ ಅಂತಾ ಆರೋಪಿಸಲಾಗಿದೆ. ಅಲ್ಲದೆ ಸಚಿವ ಭೈರತಿ ಸುರೇಶ್ ನೆರಳಿನಲ್ಲಿ ಈ ಪರಿ ಅವ್ಯವಹಾರ ನಡೆದಿದೆ ಅಂತಾ ವಾಗ್ದಾಳಿ ನಡೆಸಿದ್ದಾರೆ
ಸುಮಾರು 5000 ಸಾವಿರ ನಿವೇಶನಗಳನ್ನ ಪ್ರಭಾವಿಗಳು, ಉದ್ಯಮಿಗಳಿಗೆ ಬೇಕಾ ಬಿಟ್ಟಿ ಮಾರಾಟ ಮಾಡಲಾಗಿದೆ ಈ ಸಂಭಂದ ದಾಖಲೆ ಸಂಗ್ರಹಿಸಲಾಗುತ್ತಿದ್ದು ಅತೀ ಶ್ರೀಗ್ರದಲ್ಲಿ ಮುಡಾ ಆಯುಕ್ತರು ಹಾಗೂ ಸರ್ವ ಸದಸ್ಯರು ಮತ್ತು ಮಾಜಿ ಹಾಗೂ ಹಾಲಿ ಅಧ್ಯಕ್ಷರನ್ನ ಪಾರ್ಟಿ ಮಾಡುವ ಮೂಲಕ ನ್ಯಾಯಾಲಯದಲ್ಲಿ ದಾವೆ ಹೂಡುವುದಾಗಿ ಎಚ್ಚರಿಕೆ ನೀಡಿದ್ದಾರೆ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಿಎಂ ಡಿಸಿಎಂ ನಡೆವೆ ನಡೆಯುತ್ತಿದ್ದ ಆಂತರಿಕ ಯುದ್ದ, ಈಗ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಹಾಗೂ ಸಚಿವ ಭೈರತಿ ಸುರೇಶ್ ನಡುವೆ ಆರಂಭವಾಗಿದ್ದ, ಕೋಲ್ಡ್ ವಾರ್ ದಿನ ಕಳೆದಂತೆ ವೇಗ ಪಡೆದುಕೊಳ್ಳುತ್ತಿದೆ
ಕಳೆದ ವರ್ಷ ಬಿಜಿಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗಲೂ ಎಸ್ ಟಿ ಸೋಮಶೇಖರ್ ಉಸ್ತುವಾರಿ ಸಚಿವರಾದ್ದರು ಆಗ ಹೆಚ್. ವಿ. ರಾಜೀವ್ ಮುಡಾ ಅಧ್ಯಕ್ಷರಾಗಿದ್ರು ಆ ವೇಳಿಯೂ ಭಾರಿ ಭ್ರಷ್ಟಾಚಾರ ನಡೆದಿತ್ತು ಆಗ ಮೌನ ವಹಿಸಿದ ಬಿಜೆಪಿ ಮುಖಂಡರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮುಡಾ ಹಗರಣ ಕುರಿತು ತನಿಖೆಗೆ ಆಗ್ರಹಿಸುತ್ತಿರುವುದು ಭಾರಿ ಚರ್ಚೆಗೆ ಕಾರಣ ಆಗಿದೆ. ಈಗ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಹಾಗೂ ಸಚಿವ ಭೈರತಿ ಸುರೇಶ್ ನಡುವಿನ ಬಿಗ್ ಫೈಟ್ ಮೈತ್ರಿ ಪಕ್ಷಗಳಿಗೆ ಪ್ರಬಲ ಅಸ್ತ್ರ ದೊರೆತಂತೆ ಆಗಿದೆ