ರಣವೀರ್ ಸಿಂಗ್ ಕನ್ನಡದಲ್ಲಿ ದೀಪಿಕಾಗೆ ಪ್ರಪೋಸ್ !

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರ ಪ್ರೇಮಕಥೆ, ವಿವಾಹ ಮತ್ತು ಮಗುವಿನ ಬಗ್ಗೆ ಈ ಸ್ಟೋರಿಯಲ್ಲಿ ಚರ್ಚೆ ಆಗುತ್ತಿದೆ. ರಣವೀರ್ ಅವರು ದೀಪಿಕಾಗೆ ಕನ್ನಡದಲ್ಲಿ ಪ್ರಪೋಸ್ ಮಾಡಿದ ವಿಡಿಯೋ ವೈರಲ್ ಆಗಿದೆ. ಅವರ ಪ್ರೀತಿಯ ಆರಂಭ, ಮದುವೆ ಮತ್ತು ಈಗ ಮಗುವಿನ ಜನ್ಮದ ಸಂತೋಷದ ಕುರಿತು ವಿವರಗಳಿವೆ. ದೀಪಿಕಾ ಅವರ ಜನ್ಮದಿನದ ಸಂದರ್ಭದಲ್ಲಿ ಈ ವಿಡಿಯೋಗಳು ಮತ್ತೆ ವೈರಲ್ ಆಗಿವೆ.
ದೀಪಿಕಾ ಹಾಗೂ ರಣವೀರ್ ಪ್ರೀತಿಸಿ ವಿವಾಹ ಆದವರು. ಒಂದೇ ಸಿನಿಮಾದಲ್ಲಿ ನಟಿಸಿದ ಇವರಿಗೆ ಸೆಟ್ನಲ್ಲೇ ಪ್ರೀತಿ ಮೂಡಿತು. ರಣವೀರ್ ಸಿಂಗ್ ಹಾಗೂ ದೀಪಿಕಾ ಈಗ ಪಾಲಕರೂ ಹೌದು. ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ದೀಪಿಕಾ ಕಳೆದ ವರ್ಷ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ರಣವೀರ್ ಹಾಗೂ ದೀಪಿಕಾ ಪ್ರೀತಿ ಶುರುವಾಗಿದ್ದು ದಶಕಗಳ ಹಿಂದೆ. ಈಗ ಇಬ್ಬರೂ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ದೀಪಿಕಾ ಪಡುಕೋಣೆ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಈ ವೇಳೆ ಅವರ ಹಳೆಯ ವಿಡಿಯೋಗಳು ವೈರಲ್ ಆಗುತ್ತಿವೆ.
ದೀಪಿಕಾ ಪಡುಕೋಣೆ ಅವರು ಕರ್ನಾಟಕದವರು. ಅವರಿಗೆ ಕನ್ನಡ ಬರುತ್ತದೆ. ಬೆಂಗಳೂರಲ್ಲಿ ದೀಪಿಕಾ ಶಿಕ್ಷಣ ಪಡೆದಿದ್ದರು. ಅವರು ನಟಿಸಿದ ಮೊದಲ ಸಿನಿಮಾ ‘ಐಶ್ವರ್ಯಾ’ ಕನ್ನಡದ್ದು. ಅವರಿಗೆ ಕನ್ನಡದ ಬಗ್ಗೆ ವಿಶೇಷ ಪ್ರೀತಿ ಇದೆ. ರಣವೀರ್ ಸಿಂಗ್ ಅವರದ್ದು ಪಂಜಾಬಿ ಕುಟುಂಬ. ಅವರು ಕೆಲವೊಮ್ಮೆ ಬೆಂಗಳೂರಿಗೆ ಬಂದ ಉದಾಹರಣೆ ಇದೆ. ಅವರಿಗೆ ಕನ್ನಡದ ಬರುವುದಿಲ್ಲ. ಅವರು ಈ ಮೊದಲು ಕನ್ನಡದಲ್ಲಿ ದೀಪಿಕಾಗೆ ಪ್ರಪೋಸ್ ಮಾಡಿದ್ದರು ಅನ್ನೋದು ವಿಶೇಷ.
ರಣವೀರ್ ಸಿಂಗ್ ಅವರು ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಾ ಇರುತ್ತಾರೆ. ಅದೇ ರೀತಿ ಅವರು ಅವಾರ್ಡ್ ಕಾರ್ಯಕ್ರಮಕ್ಕೆ ತೆರಳಿದ್ದರು. ಅಲ್ಲಿ ಯಶ್ ಸೇರಿದಂತೆ ಅನೇಕರು ಇದ್ದರು. ಈ ವೇಳೆ ಅವರ ಜೊತೆ ಇದ್ದಿದ್ದು, ಕನ್ನಡದ ಅಕುಲ್ ಬಾಲಾಜಿ. ಅವರು ಕನ್ನಡದ ಹಲವು ಶೋಗಳನ್ನು ನಡೆಸಿಕೊಟ್ಟಿದ್ದಾರೆ. ಆ ಶೋನ ಅಕುಲ್ ನಡೆಸಿಕೊಡುತ್ತಾ ಇದ್ದರು. ಈ ವೇಳೆ ರಣವೀರ್ ಸಿಂಗ್ಗೆ ಕನ್ನಡದಲ್ಲಿ ಪ್ರಪೋಸ್ ಮಾಡೋದನ್ನು ಹೇಗೆ ಎಂದು ಹೇಳಿಕೊಟ್ಟರು ಅಕುಲ್.

‘ದೀಪಿಕಾ, ಓ ನನ್ನ ದೀಪಿಕಾ’ ಎಂದರು ಅಕುಲ್. ರಣವೀರ್ ಸಿಂಗ್ಗೆ ತಪ್ಪಾಗಿ ಏನಾದರೂ ಹೇಳಿಕೊಟ್ಟರೆ ಎಂಬ ಭಯ ಅತಿಯಾಗಿ ಕಾಡಿತ್ತು. ಈ ಕಾರಣದಿಂದಲೇ ‘ನನಗೆ ಮನೆಗೆ ಹೋಗಬೇಕು, ನಾನು ಇದನ್ನು’ ಎಂದರು ರಣವೀರ್ ಸಿಂಗ್. ಆಗ, ಅಕುಲ್ ಅವರು ತಪ್ಪಾಗಿ ಏನನ್ನೂ ಹೇಳಿಕೊಡಲ್ಲ ಎಂದು ಪ್ರಾಮಿಸ್ ಮಾಡಿದರು. ಆ ಬಳಿಕ ‘ದೀಪಿಕಾ, ಓ ನನ್ನ ದೀಪಿಕಾ, ನೀನೆ ನನ್ನ ಜೀವನದ ದೀಪ’ ಎಂದು ಅಕುಲ್ ಹೇಳಿಕೊಟ್ಟರು. ದೀಪ ಎನ್ನುತ್ತಿದ್ದಂತೆ ‘ಯು ಆರ್ ದಿ ಲೈಟ್ ಆಫ್ ಮೈ ಲೈಫ್’ ಎಂದರು
ರಣವೀರ್ ಸಿಂಗ್ ..

Related Posts

2025ನೇ ಇಸವಿಯಲ್ಲಿ ಮದುವೆಗೆ ಯಾವ್ಯಾವ ದಿನ ಶುಭ ಮುಹೂರ್ತ; ಇಲ್ಲಿದೆ ಸಂಪೂರ್ಣ ಪಟ್ಟಿ..!

ಹಿಂದೂ ಪಂಚಾಂಗದ ಪ್ರಕಾರ 2025ನೇ ಇಸವಿಯಲ್ಲಿ ಮದುವೆಗೆ ಒಟ್ಟು 76 ಶುಭ ಮುಹೂರ್ತಗಳಿವೆ. ಜನವರಿ 14 ರಂದು ಸೂರ್ಯ ಮಕರ ಸಂಕ್ರಾಂತಿಯ ನಂತರ ಶುಭ ಕಾರ್ಯಗಳು ಆರಂಭವಾಗುತ್ತವೆ. ಹಿಂದೂ ಧರ್ಮದಲ್ಲಿ ಶುಭ ಮುಹೂರ್ತವನ್ನು ನೋಡದೆ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ. ಹಿಂದೂ…

ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಬೆಂಕಿ ಅವಘಡ: ಹೊತ್ತಿ ಉರಿದ ಗೋದಾಮು ಬಟ್ಟೆ ಕಾರ್ಖಾನೆ.

ಬೆಂಗಳೂರು: ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿನ ಬಟ್ಟೆ ಗೋದಾಮು ಕಾರ್ಖಾನೆಯೊಂದರಲ್ಲಿ ಗುರುವಾರ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಬೆಂಕಿಯ ಕೆನ್ನಾಲಿಗೆಗೆ ಲಕ್ಷಾಂತರ ರೂ. ಮೌಲ್ಯದ ವಸ್ತು ಹಾಗೂ ಬಟ್ಟೆಗಳು ಸುಟ್ಟು ಕರಕಲಾಗಿವೆ. ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಬೆಂಕಿ ಹೊತ್ತಿಕೊಂಡಿರುವ ಮಾಹಿತಿ…

Leave a Reply

Your email address will not be published. Required fields are marked *

You Missed

2025ನೇ ಇಸವಿಯಲ್ಲಿ ಮದುವೆಗೆ ಯಾವ್ಯಾವ ದಿನ ಶುಭ ಮುಹೂರ್ತ; ಇಲ್ಲಿದೆ ಸಂಪೂರ್ಣ ಪಟ್ಟಿ..!

2025ನೇ ಇಸವಿಯಲ್ಲಿ ಮದುವೆಗೆ ಯಾವ್ಯಾವ ದಿನ ಶುಭ ಮುಹೂರ್ತ; ಇಲ್ಲಿದೆ ಸಂಪೂರ್ಣ ಪಟ್ಟಿ..!

ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಬೆಂಕಿ ಅವಘಡ: ಹೊತ್ತಿ ಉರಿದ ಗೋದಾಮು ಬಟ್ಟೆ ಕಾರ್ಖಾನೆ.

ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಬೆಂಕಿ ಅವಘಡ: ಹೊತ್ತಿ ಉರಿದ ಗೋದಾಮು ಬಟ್ಟೆ ಕಾರ್ಖಾನೆ.

ಭಿಕ್ಷುಕನ ಜೊತೆ ಓಡಿ ಹೋದ ಆರು ಮಂದಿ ಮಕ್ಕಳ ತಾಯಿ.

ಭಿಕ್ಷುಕನ ಜೊತೆ ಓಡಿ ಹೋದ  ಆರು ಮಂದಿ ಮಕ್ಕಳ ತಾಯಿ.

ಟಾಕ್ಸಿಕ್’ ಚಿತ್ರದ ಗ್ಲಿಂಪ್ಸ್ ರಿಲೀಸ್ ಯಶ್ ಲುಕ್ ಹೇಗಿದೆ?

ಟಾಕ್ಸಿಕ್’ ಚಿತ್ರದ ಗ್ಲಿಂಪ್ಸ್ ರಿಲೀಸ್ ಯಶ್ ಲುಕ್ ಹೇಗಿದೆ?

ಫಿಟ್ ಅಂಡ್ ಫೈನ್ ಆಗಿದ್ದ ತಮಿಳು ನಟ ವಿಶಾಲ್ಗೆ ನಿಜಕ್ಕೂ ಆಗಿದ್ದೇನು ಗೊತ್ತಾ?

ಫಿಟ್ ಅಂಡ್ ಫೈನ್ ಆಗಿದ್ದ ತಮಿಳು ನಟ ವಿಶಾಲ್ಗೆ ನಿಜಕ್ಕೂ ಆಗಿದ್ದೇನು ಗೊತ್ತಾ?

ಯುವ ರೈತರೇ ಇವರ ಟಾರ್ಗೆಟ್: ಉತ್ತರ ಕರ್ನಾಟಕದಲ್ಲಿ ಮದುವೆ ವಂಚನೆ.

ಯುವ ರೈತರೇ ಇವರ ಟಾರ್ಗೆಟ್: ಉತ್ತರ ಕರ್ನಾಟಕದಲ್ಲಿ ಮದುವೆ ವಂಚನೆ.