ಭಿಕ್ಷುಕನ ಜೊತೆ ಓಡಿ ಹೋದ ಆರು ಮಂದಿ ಮಕ್ಕಳ ತಾಯಿ.

ಈ ಸಮಾಜದಲ್ಲಿ ನಡೆಯುವ ಕೆಲವೊಂದು ಅಚ್ಚರಿಯ ಘಟನೆಗಳನ್ನು ನೋಡಿದಾಗ ತಲೆ ಗಿರ್ ಎನ್ನುತ್ತೆ. ಇದೀಗ ಇಲ್ಲೊಂದು ಅಂತಹದ್ದೇ ಪ್ರಕರಣ ಬೆಳಕಿಗೆ ಬಂದಿದ್ದು, ವಿವಾಹಿತ ಮಹಿಳೆಯೊಬ್ಬರು ಭಿಕ್ಷುಕನ ಜೊತೆ ಓಡಿ ಹೋಗಿದ್ದಾರೆ. ಹೌದು ಆಕೆ ಗಂಡ ಹಾಗೂ ತನ್ನ ಆರು ಮಕ್ಕಳನ್ನು ತೊರೆದು ಭಿಕ್ಷುಕನೊಂದಿಗೆ ಎಸ್ಕೇಪ್ ಆಗಿದ್ದಾರೆ. ಈ ಸುದ್ದಿ ಇದೀಗ ಸಖತ್ ವೈರಲ್ ಆಗುತ್ತಿದೆ.
ವಿವಾಹಿತ ಪುರುಷ ಬೇರೊಬ್ಬ ಮಹಿಳೆಯ ಜೊತೆ ಸಂಬಂಧ ಇಟ್ಟುಕೊಂಡಂತಹ, ಮದುವೆಯಾದ ಮಹಿಳೆ ಗಂಡ ಮಕ್ಳನ್ನು ಬಿಟ್ಟು ಹಣದಾಸೆಗೆ ಪ್ರೇಮಿಯೊಂದಿಗೆ ಓಡಿ ಹೋದಂತಹ ಘಟನೆಗಳ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಇದೀಗ ಇಲ್ಲೊಂದು ಅಂತಹದ್ದೇ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ವಿವಾಹಿತ ಮಹಿಳೆಯೊಬ್ಬರು ಭಿಕ್ಷುಕನ ಜೊತೆ ಓಡಿ ಹೋಗಿದ್ದಾರೆ. ಹೌದು ಆಕೆ ಗಂಡ ಹಾಗೂ ತನ್ನ ಆರು ಮಕ್ಕಳನ್ನು ತೊರೆದು ಭಿಕ್ಷುಕನೊಂದಿಗೆ ಎಸ್ಕೇಪ್ ಆಗಿದ್ದಾರೆ. ಈ ಸುದ್ದಿ ಇದೀಗ ಸಖತ್ ವೈರಲ್ ಆಗುತ್ತಿದೆ.
ಸಾಂದರ್ಭಿಕ ಚಿತ್ರ
ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ಈ ವಿಚಿತ್ರ ಪ್ರಕರಣ ನಡೆದಿದ್ದು, 36 ವರ್ಷ ವಯಸ್ಸಿನ ಮಹಿಳೆಯೊಬ್ಬರು ತನ್ನ ಪತಿ ಹಾಗೂ ಆರು ಮಕ್ಕಳನ್ನು ತೊರೆದು ಭಿಕ್ಷುಕನೊಂದಿಗೆ ಓಡಿ ಹೋಗಿದ್ದಾರೆ. ಈ ಬಗ್ಗೆ ಆಕೆಯ ಪತಿ ರಾಜು ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 87ರ ಅಡಿಯಲ್ಲಿ ಅಪಹರಣ ಸಂಬಂಧಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮಹಿಳೆ ಹಾಗೂ ಭಿಕ್ಷುಕನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ದೂರಿನಲ್ಲಿ, ಮಹಿಳೆಯ ಪತಿ 45 ವರ್ಷ ವಯಸ್ಸಿನ ರಾಜು, ತಮ್ಮ ಪತ್ನಿ ರಾಜೇಶ್ವರಿ ಮತ್ತು ಆರು ಮಕ್ಕಳೊಂದಿಗೆ ಹರ್ದೋಯ್ನ ಹರ್ಪಾಲ್ಪುರ ಪ್ರದೇಶದಲ್ಲಿ ನಾವು ವಾಸವಿದ್ದೆವು. ನಮ್ಮ ಊರಿಗೆ ಆಗಾಗ್ಗೆ ಸುಮಾರು 45 ವರ್ಷ ವಯಸ್ಸಿನ ನನ್ಹೆ ಪಂಡಿತ್ ಎಂಬ ಭಿಕ್ಷು ಭಿಕ್ಷೆ ಬೇಡಲು ಬರುತ್ತಿದ್ದನು. ಮತ್ತು ನನ್ನ ಪತ್ನಿಯೊಂದಿಗೆ ಮಾತುಕತೆಯನ್ನು ಕೂಡಾ ನಡೆಸುತ್ತಿದ್ದ. ನಂತರ ಇವರಿಬ್ಬರು ಫೋನ್ನಲ್ಲಿಯೂ ಸಂಪರ್ಕದಲ್ಲಿದ್ದರು ಎಂದು ಉಲ್ಲೇಖಿಸಿದ್ದಾರೆ.
ಜನವರಿ 3ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ನನ್ನ ಪತ್ನಿ ರಾಜೇಶ್ವರಿ, ನಮ್ಮ ಮಗಳು ಖುಷ್ಬೂಗೆ ಬಟ್ಟೆ, ತರಕಾರಿ ಖರೀದಿಸಲು ಮಾರುಕಟ್ಟೆಗೆ ಹೋಗುವುದಾಗಿ ಹೇಳಿ ಹೋದವಳು ವಾಪಸ್ ಬಂದೇ ಇಲ್ಲ. ನಂತರ ಆಕೆ ಓಡಿ ಹೋಗಿದ್ದಾಳೆ ಎಂಬುದು ಗೊತ್ತಾಗಿದೆ. ನಾನು ಎಮ್ಮೆ ಮಾರಿ ಕೂಡಿಟ್ಟ ಹಣವನ್ನು ಎಗರಿಸಿ ಭಿಕ್ಷುಕನೊಂದಿದೆ ಹೆಂಡ್ತಿ ಓಡಿ ಹೋಗಿರುವ ಶಂಕೆ ಇದೆ” ಎಂದು ರಾಜು ದೂರಿನಲ್ಲಿ ತಿಳಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 87 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದ್ದು, ಇದೀಗ ಪೊಲೀಸರು ಭಿಕ್ಷುಕ ಹಾಗೂ ಮಹಿಳೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Related Posts

ಹೆಂಡತಿ ಬದುಕಿರುವಾಗಲೇ ಇನ್ನೊಂದು ಮದುವೆಯ ಯತ್ನ;ಪೋಷಕರಿಂದ ಬ*ಯಾದ ಯುವಕ.

ಕೋಲಾರ:- ಕಳೆದ ಐದು ವರ್ಷಗಳ ಹಿಂದೆ ಉಸ್ಮಾನ್ ಎಂಬಾತ ಪ್ರೀತಿಸಿ ಮದುವೆಯಾಗಿದ್ದ .ಈತ ೨ನೇ ಮದುವೆಗೆ ಮುಂದಾಗಿದ್ದಾನೆ. ಪತ್ನಿ ಆರೋಗ್ಯ ವಿಚಾರಿಸಲು ಬಂದಿದ್ದ , ಆ ವೇಳೆ ಸಂಬAಧಿ ಯುವತಿ ಮೇಲೆ ಕಣ್ಣಾಕ್ಕಿದ್ದ ಉಸ್ಮಾನ್, ಹುಡುಗಿಯ ಮನೆಗೆ ಹೋಗಿ ಮಗಳನ್ನು ಕೊಟ್ಟು…

ದತ್ತು ಪಡೆದ ಮಗನನ್ನೇ ಮದುವೆಯಾದ ತಾಯಿ!

ನವದೆಹಲಿ:-ಮಕ್ಕಳಿಲ್ಲದ ದಂಪತಿ ಸಂಬಂಧಿಕರ ಮಕ್ಕಳನ್ನು ಅಥವಾ ಅನಾಥರನ್ನು ದತ್ತು ತೆಗೆದುಕೊಂಡು ‘ಅವರನ್ನು ಬೆಳೆಸುತ್ತಾರೆ. ಒಳ್ಳೆಯ ಸಂಬಂಧ ನೋಡಿ ಬೆಳೆಸಿ ಮದುವೆ ಮಾಡುತ್ತಾರೆ. ಆದರೆ ಯುವತಿಯೊಬ್ಬಳು ತಾನು ಬಾಲ್ಕದಿಂದ ಬೆಳೆಸಿದ ಮಗುವನ್ನು ಅವನು ಯುವಕನಾಗಿದ್ದಾಗ ಮದುವೆಯಾದಳು. ತಾಯಿ ತನ್ನ ಮಲಮಗನನ್ನು ಮದುವೆಯಾಗುವುದನ್ನು ನೀವು…

Leave a Reply

Your email address will not be published. Required fields are marked *

You Missed

ಹೆಂಡತಿ ಬದುಕಿರುವಾಗಲೇ ಇನ್ನೊಂದು ಮದುವೆಯ ಯತ್ನ;ಪೋಷಕರಿಂದ ಬ*ಯಾದ ಯುವಕ.

ಹೆಂಡತಿ ಬದುಕಿರುವಾಗಲೇ ಇನ್ನೊಂದು ಮದುವೆಯ ಯತ್ನ;ಪೋಷಕರಿಂದ ಬ*ಯಾದ ಯುವಕ.

ದತ್ತು ಪಡೆದ ಮಗನನ್ನೇ ಮದುವೆಯಾದ ತಾಯಿ!

ದತ್ತು ಪಡೆದ ಮಗನನ್ನೇ ಮದುವೆಯಾದ ತಾಯಿ!

ಬೀಚ್ಗೆ ಹೋಗಿದ್ದ ಮೂವರು ಸಮುದ್ರಪಾಲು, ಓರ್ವ ರಕ್ಷಣೆ : ಮಂಗಳೂರಿನಲ್ಲಿ ಘಟನೆ

ಬೀಚ್ಗೆ ಹೋಗಿದ್ದ ಮೂವರು ಸಮುದ್ರಪಾಲು, ಓರ್ವ ರಕ್ಷಣೆ : ಮಂಗಳೂರಿನಲ್ಲಿ ಘಟನೆ

ಜನ ಸಾಮಾನ್ಯರಿಗೆ ಭಯ ಮುಕ್ತ ವಾತಾವರಣ ನಿರ್ಮಿಸಿ: ಪೊಲೀಸರಿಗೆ ಸಿಎಂ‌ ಸೂಚನೆ.

ಜನ ಸಾಮಾನ್ಯರಿಗೆ ಭಯ ಮುಕ್ತ ವಾತಾವರಣ ನಿರ್ಮಿಸಿ: ಪೊಲೀಸರಿಗೆ ಸಿಎಂ‌ ಸೂಚನೆ.

ಇಂಧನ ದರ ಕೊಂಚ ಇಳಿಕೆ; ಇಲ್ಲಿದೆ ಸಂಪೂರ್ಣ ಮಾಹಿತಿ.

ಇಂಧನ ದರ ಕೊಂಚ ಇಳಿಕೆ; ಇಲ್ಲಿದೆ ಸಂಪೂರ್ಣ ಮಾಹಿತಿ.

2025ನೇ ಇಸವಿಯಲ್ಲಿ ಮದುವೆಗೆ ಯಾವ್ಯಾವ ದಿನ ಶುಭ ಮುಹೂರ್ತ; ಇಲ್ಲಿದೆ ಸಂಪೂರ್ಣ ಪಟ್ಟಿ..!

2025ನೇ ಇಸವಿಯಲ್ಲಿ ಮದುವೆಗೆ ಯಾವ್ಯಾವ ದಿನ ಶುಭ ಮುಹೂರ್ತ; ಇಲ್ಲಿದೆ ಸಂಪೂರ್ಣ ಪಟ್ಟಿ..!