ಮೀನು ಜಲಚರ ಜೀವಿ. ಆದರೆ ನೀರಿನಲ್ಲಿ ಈಜುವ ಜೊತೆಗೆ ಗಾಳಿಯಲ್ಲಿಯೂ ಹಾರಬಲ್ಲ ಮೀನುಗಳನ್ನು ನೋಡಿದ್ದೀರಾ? ಇವು 200 ಮೀಟರ್ವರೆಗೆ ಹಾರಬಲ್ಲವು. ಅವುಗಳ ಬದಿಗಳಲ್ಲಿರುವ ರೆಕ್ಕೆಗಳು ಹಾರಾಟಕ್ಕೆ ಸಹಾಯ ಮಾಡುತ್ತವೆ. ಪರಭಕ್ಷಕರಿಂದ ತಪ್ಪಿಸಿಕೊಳ್ಳಲು ಅವು ಹಾರಾಡುತ್ತವೆ. ನೀರಿನ ತಾಪಮಾನ ಕಡಿಮೆಯಾದಾಗ ಅವುಗಳ ಹಾರಾಟದ ಸಾಮರ್ಥ್ಯ ಕಡಿಮೆಯಾಗುತ್ತದೆ.
ಫ್ಲೈಯಿಂಗ್ ಫಿಶ್ ಫೆಸಿಪಿಕ್, ಅಟ್ಲಾಂಟಿಕ್ ಮತ್ತು ಹಿಂದೂ ಮಹಾಸಾಗರದಲ್ಲಿ ಹೆಚ್ಚು ಕಂಡುಬರುತ್ತವೆ. ಅರಬ್ಬೀ ಸಮುದ್ರದ ಆಳದಲ್ಲಿಯೂ ವಿಸ್ತರಿಸಿವೆ. ನೀರೊಳಗಿನ ಪರಭಕ್ಷಕಗಳಿಂದ ತಪ್ಪಿಸಿಕೊಳ್ಳಲು ತಮ್ಮ ರೆಕ್ಕೆಗಳು ಮತ್ತು ಕವಲೊಡೆದ ಬಾಲವನ್ನು ಬಳಸಿಕೊಂಡು ನೆಗೆಯುತ್ತವೆ.
ಎಕ್ಸೊಕೊಯೆಟಿಡೆ ಕುಟುಂಬಕ್ಕೆ ಸೇರಿರುವ ಇದು ಬಾರ್ಬಡೋಸ್ ದೇಶವಾಸಿಗಳ ನೆಚ್ಚಿನ ಖಾದ್ಯ. ಬಾರ್ಬಡೋಸ್ ಹಾರುವ ಮೀನುಗಳ ಭೂಮಿ ಎಂದೇ ಪ್ರಸಿದ್ಧಿ ಪಡೆದಿದೆ. ಹಾರುವ ಮೀನುಗಳು ದೊರಕುವುದು ಆಶೀರ್ವಾದ ಶುಭದ ಸಂಕೇತ ಎಂಬ ನಂಬಿಕೆ ಬಾರ್ಬಡೋಸ್ ಮತ್ತು ಜಪಾನ್ ದೇಶದಲ್ಲಿದೆ. ಪಕ್ಷಿಯಂತೆ ಹಾರಲು ಸಾಧ್ಯವಾಗದಿದ್ದರು ನೀರಿನಿಂದ ಶಕ್ತಿಯುತವಾದ ಸ್ವಯಂಚಾಲಿತ ಜಿಗಿತ ಹೊಂದಿರುವ ಇವು ಗಣನೀಯ ದೂರದವರೆಗೆ ಗ್ಲೆತ್ರೖಡಿಂಗ್ ಮಾಡುತ್ತವೆ.
ನೀರಿನಲ್ಲಿ ಈಜುವುದರ ಜೊತೆಗೆ ಗಾಳಿಯಲ್ಲಿಯೂ ಹಾರಬಲ್ಲ ಮೀನು ಇದೆ ಎಂದು ನಿಮಗೆ ತಿಳಿದಿದೆಯೇ? ಹೌದು, ಇಂದು ಅಂತಹ ಒಂದು ಮೀನಿನ ಬಗ್ಗೆ ಇಲ್ಲಿ ತಿಳಿದುಕೊಳ್ಳಿ. ಮಾಹಿತಿಯ ಪ್ರಕಾರ, ಈ ಮೀನುಗಳು 200 ಮೀಟರ್ ವರೆಗೆ ಮಾತ್ರ ಹಾರಬಲ್ಲವು. ಈ ಮೀನನ್ನು ಗ್ಲೈಡರ್ ಎಂದು ಕರೆಯಲಾಗುತ್ತದೆ. ಈ ಮೀನುಗಳ ಬದಿಗಳಲ್ಲಿ ರೆಕ್ಕೆಗಳಿರುತ್ತವೆ. ಈ ರೆಕ್ಕೆಗಳ ಸಹಾಯದಿಂದ ಈ ಮೀನುಗಳು ಹಾರಲು ಸಾಧ್ಯವಾಗುತ್ತದೆ.
ಫ್ಲೈಯಿಂಗ್ ಫಿಶ್
ಸಾಮಾನ್ಯವಾಗಿ ಈ ಮೀನುಗಳ ಉದ್ದವು 17 ರಿಂದ 30 ಸೆಂಟಿಮೀಟರ್ಗಳಷ್ಟಿರುತ್ತದೆ. ಮಾಹಿತಿಯ ಪ್ರಕಾರ, ಈ ಮೀನುಗಳು ಸಮುದ್ರದಲ್ಲಿ ಪರಭಕ್ಷಕ ಮೀನುಗಳಿಂದ ತಪ್ಪಿಸಿಕೊಳ್ಳಬೇಕಾದಾಗ, ಗಾಳಿಯಲ್ಲಿ ಹಾರುತ್ತದೆ. ಆದರೆ, ಒಮ್ಮೆ ನೀರಿನಿಂದ ಹೊರ ಬಂದ ಮೇಲೆ ಗಾಳಿಗೆ ಹಾರಿ ಮತ್ತೆ ನೀರಿಗೆ ಬರುತ್ತವೆ. ನೀರಿನಿಂದ ಹೊರಬಂದ ನಂತರ, ಈ ಮೀನುಗಳು ತಮ್ಮ ರೆಕ್ಕೆಗಳನ್ನು ಹರಡುತ್ತವೆ.
ಫ್ಲೈಯಿಂಗ್ ಫಿಶ್ 200 ಮೀಟರ್ ವರೆಗೆ ಹಾರುತ್ತದೆ:
ವಿಜ್ಞಾನಿಗಳ ಪ್ರಕಾರ, ಈ ಮೀನುಗಳು ಉತ್ತಮ ಗ್ಲೈಡರ್ಗಳಾಗಿವೆ. ಆದಾಗ್ಯೂ, ನೀರಿನ ತಾಪಮಾನವು 20 ಡಿಗ್ರಿಗಿಂತ ಕಡಿಮೆಯಿರುವಾಗ, ಈ ಮೀನುಗಳು ಹಾರಲು ಸಾಧ್ಯವಾಗುವುದಿಲ್ಲ. ಇದಕ್ಕೆ ಕಾರಣ ಸ್ನಾಯುಗಳು, ಕಡಿಮೆ ತಾಪಮಾನದಲ್ಲಿ ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ. ಈ ಮೀನನ್ನು ಪ್ರಪಂಚದಾದ್ಯಂತ ‘ಹಾರುವ ಮೀನು’ ಎಂದೂ ಕರೆಯುತ್ತಾರೆ.
ಯುವ ರೈತರೇ ಇವರ ಟಾರ್ಗೆಟ್: ಉತ್ತರ ಕರ್ನಾಟಕದಲ್ಲಿ ಮದುವೆ ವಂಚನೆ.
ಬಾಗಲಕೋಟೆ : ಕನ್ಯೆ ಸಿಗದ ರೈತನಿಗೆ ಮೋಸದ ಮದುವೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಯುವ ರೈತನಿಗೆ ಮೋಸ ಮಾಡಿದವಳು ಎರಡು ಮದುವೆ, ಎರಡು ಹೆಣ್ಮಕ್ಕಳು, ಅಷ್ಟೇ ಅಲ್ಲ ಇಬ್ಬರು ಮೊಮ್ಮಕ್ಕಳು ಹೊಂದಿದ ಅಜ್ಜಿ ಎಂದು ಗೊತ್ತಾಗಿದೆ. ಮೇಲಾಗಿ ಮೋಸ ಹೋದ…