ಹೊಸ ವರ್ಷದ ಮೊದಲ ದಿನದಂದು ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ತಿರುಮಲಕ್ಕೆ ಭೇಟಿ ನೀಡಿದ್ದ ವ್ಯಕ್ತಿಯೊಬ್ಬರು ಎಲ್ಲರನ್ನು ತಮ್ಮತ್ತ ಸೆಳೆದರು. ಬೆಟ್ಟದ ಮೇಲಿದ್ದ ಭಕ್ತಾದಿಗಳೆಲ್ಲ ಆ ವ್ಯಕ್ತಿಯನ್ನು ನೋಡಿ ಆಶ್ಚರ್ಯಪಟ್ಟರು. ಆತ ಬೇರೆ ಯಾರೂ ಅಲ್ಲ, ತೆಲಂಗಾಣದ ಚಿನ್ನದ ಮನುಷ್ಯ ಎಂದೇ ಖ್ಯಾತರಾಗಿರುವ ಹೋಪ್ ಫೌಂಡೇಶನ್ ಮುಖ್ಯಸ್ಥ ವಿಜಯ್ ಕುಮಾರ್.
ಹೊಸ ವರ್ಷದ ಪ್ರಯುಕ್ತ ವಿಜಯ್ ಕುಮಾರ್ ಅವರು ತಮ್ಮ ದೇಹದ ಮೇಲೆ 5 ಕೆಜಿ ಚಿನ್ನವನ್ನು ಧರಿಸಿ ಬಂದು ತಿಮ್ಮಪ್ಪನ ದರ್ಶನ ಪಡೆದರು. ಎರಡೂ ಕೈ ಬೆರಳುಗಳಲ್ಲಿ ಉಂಗುರಗಳು, ಎರಡೂ ಕೈಗಳಲ್ಲಿ ಭಾರವಾದ ಬಳೆಗಳು, ಚಿನ್ನದ ಗಡಿಯಾರಗಳು ಮತ್ತು ಅವನ ಕುತ್ತಿಗೆಯ ಸುತ್ತ ಭಾರವಾದ ಚಿನ್ನದ ಆಭರಣಗಳನ್ನು ಧರಿಸಿದ್ದರು ಈ ವೇಳೆ ವಿಜಯ್ ಕುಮಾರ್ ಅವರೊಂದಿಗೆ ಸೆಲ್ಪಿ ತೆಗೆದುಕೊಳ್ಳಲು ಭಕ್ತರು ಮುಗಿಬಿದ್ದರು.
ಇದೇ ಸಂದರ್ಭದಲ್ಲಿ ಮಾತನಾಡಿದ ವಿಜಯ್ ಕುಮಾರ್, ಕಳೆದ ಮೂರು ವರ್ಷಗಳಿಂದ ಕುಟುಂಬ ಸದಸ್ಯರು ಹಾಗೂ ಹೋಪ್ ಫೌಂಡೇಶನ್ ಸದಸ್ಯರೊಂದಿಗೆ ದೇವರ ದರ್ಶನ ಮಾಡುತ್ತಿದ್ದೇನೆ ಎಂದು ತಿಳಿಸಿದರು. ಈ ಹಿಂದೆ ವಿಜಯ್ ಕುಮಾರ್ ಸುಮಾರು 10 ಕೆಜಿ ಚಿನ್ನಾಭರಣ ಧರಿಸಿ ದೇವರ ದರ್ಶನ ಪಡೆದಿದ್ದರು. ಇದೀಗ 5 ಕೆಜಿ ಚಿನ್ನಾಭರಣ ಧರಿಸಿ ದರ್ಶನ ಪಡೆದಿದ್ದಾರೆ. ಇದರ ಬೆಲೆ ಸುಮಾರು 3.5 ಕೋಟಿ ರೂಪಾಯಿಗೂ ಅಧಿಕವಾಗಿದೆ.
ಬಂಗಾರದ ಮೇಲಿರುವ ತಮ್ಮ ಅತಿಯಾದ ಆಸಕ್ತಿಯಿಂದಾಗಿ ಬೃಹತ್ ಆಭರಣಗಳನ್ನು ಮಾಡಿಸಿಕೊಂಡಿದ್ದೇನೆಂದು ವಿಜಯ್ ಕುಮಾರ್ ಹೇಳಿದರು. ಅಂದಹಾಗೆ ವಿಜಯ್ ಕುಮಾರ್ ಅವರು ತೆಲಂಗಾಣ ಒಲಿಂಪಿಕ್ ಅಸೋಸಿಯೇಷನ್ನ ‘ಜಂಟಿ ಕಾರ್ಯದರ್ಶಿಯೂ ಆಗಿದ್ದಾರೆ.
ಮೈಮೇಲೆ ಚಿನ್ನವನ್ನು ಹೊದ್ದುಕೊಂಡು ತಿರುಮಲಕ್ಕೆ ಬಂದಿದ್ದ ವಿಜಯ್ ಕುಮಾರ್ ಅವರನ್ನು ನೋಡಿ ಭಕ್ತರು ಆಶ್ಚರ್ಯಚಕಿತರಾದರು. ಸಾಮಾನ್ಯವಾಗಿ, ಒಬ್ಬ ವ್ಯಕ್ತಿ ಒಂದು ಅಥವಾ ಎರಡು ಚಿನ್ನದ ಸರಗಳನ್ನು ಧರಿಸಲು ಭಯಪಡುತ್ತಾರೆ. ಆದರೆ, ಒಂದೇ ಬಾರಿಗೆ 5 ಕೆಜಿ ಚಿನ್ನ ಧರಿಸುವುದು ಸಾಮಾನ್ಯ ಸಂಗತಿಯಲ್ಲ ಎನ್ನುತ್ತಾರೆ ಭಕ್ತರು. ಚಿನ್ನದ ದರದ ಬಗ್ಗೆ ನಿಮಗೆಲ್ಲ ವಿಶೇಷವಾಗಿ ಹೇಳಬೇಕಿಲ್ಲ ಒಂದು ಗ್ರಾಂ ಚಿನ್ನ ಖರೀದಿಸಲು ಚಿಂತಿಸಬೇಕಾದ ಪರಿಸ್ಥಿತಿ ಇದೆ. ಇದೀಗ ವಿಜಯ್ ಕುಮಾರ್ ಒಂದೇ ಬಾರಿಗೆ 5 ಕೆಜಿ ಚಿನ್ನಾಭರಣ ಧರಿಸಿರುವುದು ಅಚ್ಚರಿ ಮೂಡಿಸಿದೆ ಎನ್ನುತ್ತಾರೆ ಭಕ್ತರು
ಯುವ ರೈತರೇ ಇವರ ಟಾರ್ಗೆಟ್: ಉತ್ತರ ಕರ್ನಾಟಕದಲ್ಲಿ ಮದುವೆ ವಂಚನೆ.
ಬಾಗಲಕೋಟೆ : ಕನ್ಯೆ ಸಿಗದ ರೈತನಿಗೆ ಮೋಸದ ಮದುವೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಯುವ ರೈತನಿಗೆ ಮೋಸ ಮಾಡಿದವಳು ಎರಡು ಮದುವೆ, ಎರಡು ಹೆಣ್ಮಕ್ಕಳು, ಅಷ್ಟೇ ಅಲ್ಲ ಇಬ್ಬರು ಮೊಮ್ಮಕ್ಕಳು ಹೊಂದಿದ ಅಜ್ಜಿ ಎಂದು ಗೊತ್ತಾಗಿದೆ. ಮೇಲಾಗಿ ಮೋಸ ಹೋದ…