ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರ ನಿಧನದಿಂದ ಕರ್ನಾಟಕ ಶೋಕಸಾಗರದಲ್ಲಿ ಮುಳುಗಿದೆ. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಅವರ ಅಪಾರ ಕೊಡುಗೆ ನೀಡಿದ್ದಾರೆ. ಬೆಂಗಳೂರಿನ ಐಟಿ ಕ್ರಾಂತಿಯಲ್ಲಿ ಅವರ ಪಾತ್ರ ಪ್ರಮುಖವಾಗಿದೆ. ಹೀಗಾಗಿ ಇದೆಲ್ಲವನ್ನು ಗಮನಿಸಿ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡುವಂತೆ ಆರ್. ಅಶೋಕ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಮಾಜಿ ಮುಖ್ಯಮಂತ್ರಿ, ಸರಳ ಸಜ್ಜನಿಕೆಯ ರಾಜಕಾರಣಿ, ಅಜಾತ ಶತ್ರು ಎಸ್.ಎಂ.ಕೃಷ್ಣ (SM Krishna) ವಿಧಿವಶರಾಗಿದ್ದಾರೆ. 92 ವಯಸ್ಸಿಗೆ ತಮ್ಮ ಸುದೀರ್ಘ ಬಾಳಪಯಣವನ್ನ ಕೊನೆಗೊಳೆಸಿದ್ದಾರೆ. ಇಡೀ ಕರ್ನಾಟಕವೇ ಕಂಬನಿ ಮಿಡಿದಿದೆ. ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದ ಧೀಮಂತ ನಾಯಕರೆನಿಸಿಕೊಂಡಿದ್ದ ಎಸ್ಎಂ ಕೃಷ್ಣ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡುವಂತೆ ಸಿಎಂ ಸಿದ್ದರಾಮಯ್ಯಗೆ ವಿಪಕ್ಷ ನಾಯಕ ಆರ್. ಅಶೋಕ್ ಮನವಿ ಮಾಡಿದ್ದಾರೆ.