ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾ : ವಿರಾಟ್ ಕೊಹ್ಲಿ – ರೋಹಿತ್ ಶರ್ಮಾ ವಿದಾಯ

ಭಾರತ ತಂಡವು 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದುಕೊಂಡಿದೆ. ಈ ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಟೀಮ್ ಇಂಡಿಯಾದ ಇಬ್ಬರು ದಿಗ್ಗಜರು ಟಿ20 ಅಂತಾರಾಷ್ಟ್ರೀಯ ಕೆರಿಯರ್​ಗೆ ಗುಡ್ ಬೈ ಹೇಳಿದ್ದಾರೆ.

ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಬಾರಿಸಿದ ವಿರಾಟ್ ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಈ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಕಿಂಗ್ ಕೊಹ್ಲಿ ಇದುವೇ ನನ್ನ ಕೊನೆಯ ಟಿ20 ವಿಶ್ವಕಪ್ ಟೂರ್ನಿ. ಈ ಗೆಲುವಿನೊಂದಿಗೆ ಟಿ20 ಅಂತಾರಾಷ್ಟ್ರೀಯ ಕೆರಿಯರ್ ಅಂತ್ಯಗೊಳಿಸಲು ಬಯಸಿದ್ದೇನೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ರೋಹಿತ್ ಶರ್ಮಾ, ನಾನು ಟಿ20 ಪಂದ್ಯದೊಂದಿಗೆ ಭಾರತದ ಪರ ವೃತ್ತಿಜೀವನ ಆರಂಭಿಸಿದ್ದೆ. ಇದೀಗ ಟಿ20 ಅಂತಾರಾಷ್ಟ್ರೀಯ ಕೆರಿಯರ್​​ಗೆ ವಿದಾಯ ಹೇಳಲು ಇದಕ್ಕಿಂತ ಉತ್ತಮ ಸಮಯವಿಲ್ಲ. ಹೀಗಾಗಿ ಈ ಸ್ವರೂಪದ ಕ್ರಿಕೆಟ್​ಗೆ ವಿದಾಯ ಹೇಳುತ್ತಿರುವುದಾಗಿ ರೋಹಿತ್ ಶರ್ಮಾ ತಿಳಿಸಿದ್ದಾರೆ.

ಇದೀಗ ವಿಶ್ವಕಪ್​ ಗೆಲುವಿನೊಂದಿಗೆ ಇಬ್ಬರು ದಿಗ್ಗಜರು ಜೊತೆಯಾಗಿ ಟಿ20 ಅಂತಾರಾಷ್ಟ್ರೀಯ ಕೆರಿಯರ್ ಅಂತ್ಯಗೊಳಿಸಿದ್ದಾರೆ. ಹೀಗಾಗಿ ಮುಂಬರುವ ದಿನಗಳಲ್ಲಿ ಭಾರತ ಟಿ20 ತಂಡದಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳುವುದಿಲ್ಲ.

  • Related Posts

    ಉಡುಪಿಯ ಕಬಡ್ಡಿ ಆಟಗಾರ ಪ್ರೀತಂ ಶೆಟ್ಟಿ ನಾಗಮಂಗಲದಲ್ಲಿ ಹೃದಯಾಘಾತದಿಂದ ನಿಧನ.

    ಉಡುಪಿ: ಯುವ ಕಬಡ್ಡಿ ಆಟಗಾರ ಮುಟ್ಲುಪಾಡಿ ನಡುಮನೆ ಪ್ರೀತಂ ಶೆಟ್ಟಿ (26) ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದ ಕಬಡ್ಡಿ ಪಂದ್ಯಾಟಕ್ಕೆ ತೆರಳಿದ್ದರು. ಶುಕ್ರವಾರ ಕಬಡಿ ಆಡಿದ ಕೆಲವೇ ಕ್ಷಣಗಳ ಬಳಿಕ ಪ್ರೀತಂ ಅವರು ಎದೆ…

    ಬ್ರಿಸ್ಬೇನ್‌ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯ, ಕಣಕ್ಕಿಳಿಯುತ್ತಿದ್ದಂತೆ ಭರ್ಜರಿ ದಾಖಲೆ ಬರೆದ ವಿರಾಟ್ ಕೊಹ್ಲಿ .

    ಭಾರತ ಮತ್ತು ಆಸ್ಟ್ರೇಲಿಯಾ 3rd Test: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯವು ಶುರುವಾಗಿದೆ. ಬ್ರಿಸ್ಬೇನ್ನಲ್ಲಿ ನಡೆಯುತ್ತಿರುವ ಈ ಮ್ಯಾಚ್ನಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾ ಬೌಲಿಂಗ್ ಆಯ್ದುಕೊಂಡಿದೆ. ಅದರಂತೆ ಆಸ್ಟ್ರೇಲಿಯಾ ತಂಡ ಇನಿಂಗ್ಸ್ ಆರಂಭಿಸಿದೆ. ಈ ಪಂದ್ಯದಲ್ಲಿ…

    Leave a Reply

    Your email address will not be published. Required fields are marked *

    You Missed

    ಬೆಳಗಾವಿಯಿಂದ ಬೆಂಗಳೂರಿಗೆ ಸಿ.ಟಿ ರವಿ ಶಿಫ್ಟ್…

    ಬೆಳಗಾವಿಯಿಂದ ಬೆಂಗಳೂರಿಗೆ ಸಿ.ಟಿ ರವಿ ಶಿಫ್ಟ್…

    ಪಾರ್ಸೆಲ್ನಲ್ಲಿ ಇತ್ತು ಮಾನವನ ಶ*: ಬೆಚ್ಚಿಬಿದ್ದ ಮಹಿಳೆ!

    ಪಾರ್ಸೆಲ್ನಲ್ಲಿ ಇತ್ತು ಮಾನವನ ಶ*: ಬೆಚ್ಚಿಬಿದ್ದ ಮಹಿಳೆ!

    87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ..

    87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ..

    ಯಾವ ಹೆಣ್ಣುಮಕ್ಕಳೂ ಇಂತಹ ಆರೋಪಗಳ ಬಗ್ಗೆ ಸುಳ್ಳು ದೂರು ಕೊಡೋದಿಲ್ಲ : ಸಿಎಂ ಸಿದ್ದರಾಮಯ್ಯ

    ಯಾವ ಹೆಣ್ಣುಮಕ್ಕಳೂ ಇಂತಹ ಆರೋಪಗಳ ಬಗ್ಗೆ ಸುಳ್ಳು ದೂರು ಕೊಡೋದಿಲ್ಲ : ಸಿಎಂ ಸಿದ್ದರಾಮಯ್ಯ

    ಸಾರಿಗೆ ಇಲಾಖೆಯಿಂದ ವೈಟ್ ಬೋರ್ಡ್ ಟ್ರಾವೆಲ್ಸ್ ಮಾಲೀಕರಿಗೆ ಬಿಗ್ ಶಾಕ್.

    ಸಾರಿಗೆ ಇಲಾಖೆಯಿಂದ ವೈಟ್ ಬೋರ್ಡ್ ಟ್ರಾವೆಲ್ಸ್ ಮಾಲೀಕರಿಗೆ ಬಿಗ್ ಶಾಕ್.

    ಎಷ್ಟೇ ರೇಡ್ ಮಾಡಿದ್ರೂ ಅದೇ ರಾಗ ಅದೇ ಹಾಡು : ಪರಪ್ಪನ ಅಗ್ರಹಾರ ಜೈಲಿನಲ್ಲಿ‌ ಮತ್ತೆ ಮೊಬೈಲ್ ಸೌಂಡ್!

    ಎಷ್ಟೇ ರೇಡ್ ಮಾಡಿದ್ರೂ ಅದೇ ರಾಗ ಅದೇ ಹಾಡು : ಪರಪ್ಪನ ಅಗ್ರಹಾರ ಜೈಲಿನಲ್ಲಿ‌ ಮತ್ತೆ ಮೊಬೈಲ್ ಸೌಂಡ್!