ಕುಡಿದ ಮತ್ತಿನಲ್ಲಿ ಪತಿಗೆ ಆ್ಯ*ಡ್ ಎರಚಿದ ಪತ್ನಿ; ನೊಂದ ಪತಿ ಪೊಲೀಸರಿಗೆ ದೂರು.

ಭೋಪಾಲ್ :- ಕುಡಿದ ಅಮಲಿನಲ್ಲಿ ಗಂಡ ಹೆಂಡತಿಗೆ ಹೊಡೆಯುವುದು, ಗಂಡ ದಿನವೂ ಕುಡಿದು ಬಂದು ಹೊಡೆಯುತ್ತಾನೆ ಎಂದು ಹೆಂಡತಿ ಪೊಲೀಸರಿಗೆ ದೂರು ನೀಡುವುದು ಸಾಮಾನ್ಯ. ಆದರೆ, ಇಲ್ಲೊಬ್ಬಳು ಮಹಿಳೆ ತಾನೇ ಕಂಠಪೂರ್ತಿ ಕುಡಿದು ಗಂಡನಿಗೆ ಇನ್ನಿಲ್ಲದಷ್ಟು ಹಿಂಸೆ ನೀಡಿದ್ದಾಳೆ. ಕುಡುಕಿ ಹೆಂಡತಿಯ ಕಾಟ ತಾಳಲಾರದೆ ನೊಂದ ಪತಿ ಪೊಲೀಸರ ಮೊರೆ ಹೋಗಿದ್ದಾರೆ. ಮಧ್ಯಪ್ರದೇಶದ ಭೋಪಾಲ್ ನಗರದ ವಿಶ್ವಕರ್ಮ ನಗರದಲ್ಲಿ 45 ವರ್ಷದ ಮಹಿಳೆಯೊಬ್ಬರು 61 ವರ್ಷದ ತನ್ನ ಪತಿ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಆ ಮಹಿಳೆ ತನ್ನ ಪತಿಯನ್ನು ಸುಮಾರು 12 ಸ್ಥಳಗಳಲ್ಲಿ ಕಚ್ಚಿ ಗಾಯಗೊಳಿಸಿದ್ದು, ತನ್ನ ಉಗುರುಗಳಿಂದ ಪರಚಿ ಹಿಂಸಿಸಿದ್ದಾರೆ. ಅಷ್ಟೇ ಅಲ್ಲದೆ ಅವನ ಮೇಲೆ ಆಸಿಡ್ ಕೂಡ ಎರಚಿದ್ದಾರೆ. ಆಸಿಡ್ ಆತನಿಗೆ ತಾಗದಿದ್ದರೂ, ಅವರ ಬಟ್ಟೆಗಳಿಗೆ ಆ್ಯಸಿಡ್ ತಾಗಿ ಹಾಳಾಗಿದೆ. ಪೊಲೀಸರು ಆ ಮಹಿಳೆಯನ್ನು ಬಂಧಿಸಿದ್ದಾರೆ. ಹಲ್ಲೆ ಹಾಗೂ ಆಸಿಡ್ ದಾಳಿ ಯತ್ನ ಪ್ರಕರಣ ದಾಖಲಾಗಿದೆ.
ವಿಶ್ವಕರ್ಮ ನಗರದಲ್ಲಿ ವಾಸವಾಗಿರುವ ಟ್ರಕ್ ಚಾಲಕ 61 ವರ್ಷದ ನಾರಾಯಣ ಲೋಧಿ ತನ್ನ ಎರಡನೇ ಪತ್ನಿ 45 ವರ್ಷದ ದುರ್ಗಾ ಲೋಧಿಯೊಂದಿಗೆ ವಾಸವಾಗಿದ್ದರು. ದುರ್ಗಾಗೆ ಮೊದಲ ಗಂಡನಿಂದ 12 ಮತ್ತು 14 ವರ್ಷದ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ನಾರಾಯಣ ತಮ್ಮ ವೃತ್ತಿಯ ಕಾರಣದಿಂದ ವಾರಕ್ಕೆ ಒಂದು ಅಥವಾ ಎರಡು ಬಾರಿ ಮಾತ್ರ ಮನೆಗೆ ಬರುತ್ತಿದ್ದರು.
ಮನೆಯಲ್ಲಿ ಕೆಲವು ವಸ್ತುಗಳು ಕಾಣೆಯಾಗಿರುವ ಬಗ್ಗೆ ಅವರು ಪತ್ನಿಯೊಂದಿಗೆ ಜಗಳವಾಡಿದ್ದಾರೆ. ವಾಗ್ವಾದ ಎಷ್ಟರಮಟ್ಟಿಗೆ ಏರಿತೆಂದರೆ, ಮದ್ಯವ್ಯಸನಿಯಾಗಿದ್ದ ದುರ್ಗಾ ಆತನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿ, ಹಲವೆಡೆ ಕಚ್ಚಿ, ಪರಚಿದ್ದಾರೆ. ನಾರಾಯಣ ಓಡಿಹೋಗಲು ಯತ್ನಿಸಿದ್ದು, ದುರ್ಗಾ ಆತನ ಮೇಲೆ ಆಸಿಡ್ ಎರಚಿದ್ದಾಳೆ. ಅದೃಷ್ಟವಶಾತ್ ಆ್ಯಸಿಡ್ ನಾರಾಯಣ ಅವರ ಮೈಮೇಲೆ ಬೀಳದೆ ಬಟ್ಟೆ ಮೇಲೆ ಬಿದ್ದಿದೆ. ಇದರಿಂದ ಅವರ ಬಟ್ಟೆ ಸ್ವಲ್ಪ ಸುಟ್ಟಿದೆ.

ದುರ್ಗಾಗೆ ಕುಡಿತದ ಚಟವಿದೆ ಎಂದು ನಾರಾಯಣ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಈ ಹಿಂದೆಯೂ ಹಲವು ಬಾರಿ ಆಕೆ ತನ್ನ ಮೇಲೆ ಹಲ್ಲೆ ನಡೆಸಿದ್ದಾಳೆ ಎಂದಿದ್ದಾರೆ. ದುರ್ಗಾ ವಿರುದ್ಧ ಹಲ್ಲೆ ಹಾಗೂ ಆಸಿಡ್ ದಾಳಿ ಯತ್ನ ಪ್ರಕರಣ ದಾಖಲಾಗಿದೆ. ಹೀಗಾಗಿ, ಆಕೆಯನ್ನು ಬಂಧಿಸಲಾಗಿದೆ. ಈ ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Related Posts

ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಬೆಂಕಿ ಅವಘಡ: ಹೊತ್ತಿ ಉರಿದ ಗೋದಾಮು ಬಟ್ಟೆ ಕಾರ್ಖಾನೆ.

ಬೆಂಗಳೂರು: ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿನ ಬಟ್ಟೆ ಗೋದಾಮು ಕಾರ್ಖಾನೆಯೊಂದರಲ್ಲಿ ಗುರುವಾರ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಬೆಂಕಿಯ ಕೆನ್ನಾಲಿಗೆಗೆ ಲಕ್ಷಾಂತರ ರೂ. ಮೌಲ್ಯದ ವಸ್ತು ಹಾಗೂ ಬಟ್ಟೆಗಳು ಸುಟ್ಟು ಕರಕಲಾಗಿವೆ. ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಬೆಂಕಿ ಹೊತ್ತಿಕೊಂಡಿರುವ ಮಾಹಿತಿ…

ಭಿಕ್ಷುಕನ ಜೊತೆ ಓಡಿ ಹೋದ ಆರು ಮಂದಿ ಮಕ್ಕಳ ತಾಯಿ.

ಈ ಸಮಾಜದಲ್ಲಿ ನಡೆಯುವ ಕೆಲವೊಂದು ಅಚ್ಚರಿಯ ಘಟನೆಗಳನ್ನು ನೋಡಿದಾಗ ತಲೆ ಗಿರ್ ಎನ್ನುತ್ತೆ. ಇದೀಗ ಇಲ್ಲೊಂದು ಅಂತಹದ್ದೇ ಪ್ರಕರಣ ಬೆಳಕಿಗೆ ಬಂದಿದ್ದು, ವಿವಾಹಿತ ಮಹಿಳೆಯೊಬ್ಬರು ಭಿಕ್ಷುಕನ ಜೊತೆ ಓಡಿ ಹೋಗಿದ್ದಾರೆ. ಹೌದು ಆಕೆ ಗಂಡ ಹಾಗೂ ತನ್ನ ಆರು ಮಕ್ಕಳನ್ನು ತೊರೆದು…

Leave a Reply

Your email address will not be published. Required fields are marked *

You Missed

ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಬೆಂಕಿ ಅವಘಡ: ಹೊತ್ತಿ ಉರಿದ ಗೋದಾಮು ಬಟ್ಟೆ ಕಾರ್ಖಾನೆ.

ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಬೆಂಕಿ ಅವಘಡ: ಹೊತ್ತಿ ಉರಿದ ಗೋದಾಮು ಬಟ್ಟೆ ಕಾರ್ಖಾನೆ.

ಭಿಕ್ಷುಕನ ಜೊತೆ ಓಡಿ ಹೋದ ಆರು ಮಂದಿ ಮಕ್ಕಳ ತಾಯಿ.

ಭಿಕ್ಷುಕನ ಜೊತೆ ಓಡಿ ಹೋದ  ಆರು ಮಂದಿ ಮಕ್ಕಳ ತಾಯಿ.

ಟಾಕ್ಸಿಕ್’ ಚಿತ್ರದ ಗ್ಲಿಂಪ್ಸ್ ರಿಲೀಸ್ ಯಶ್ ಲುಕ್ ಹೇಗಿದೆ?

ಟಾಕ್ಸಿಕ್’ ಚಿತ್ರದ ಗ್ಲಿಂಪ್ಸ್ ರಿಲೀಸ್ ಯಶ್ ಲುಕ್ ಹೇಗಿದೆ?

ಫಿಟ್ ಅಂಡ್ ಫೈನ್ ಆಗಿದ್ದ ತಮಿಳು ನಟ ವಿಶಾಲ್ಗೆ ನಿಜಕ್ಕೂ ಆಗಿದ್ದೇನು ಗೊತ್ತಾ?

ಫಿಟ್ ಅಂಡ್ ಫೈನ್ ಆಗಿದ್ದ ತಮಿಳು ನಟ ವಿಶಾಲ್ಗೆ ನಿಜಕ್ಕೂ ಆಗಿದ್ದೇನು ಗೊತ್ತಾ?

ಯುವ ರೈತರೇ ಇವರ ಟಾರ್ಗೆಟ್: ಉತ್ತರ ಕರ್ನಾಟಕದಲ್ಲಿ ಮದುವೆ ವಂಚನೆ.

ಯುವ ರೈತರೇ ಇವರ ಟಾರ್ಗೆಟ್: ಉತ್ತರ ಕರ್ನಾಟಕದಲ್ಲಿ ಮದುವೆ ವಂಚನೆ.

ಭಾರತದ ಪೆಟ್ರೋಲಿಯಂ ಉತ್ಪನ್ನಗಳ ಬೇಡಿಕೆ ಶೇ 4ರಷ್ಟು ಹೆಚ್ಚಳ: ಹೊರ ಬಿತ್ತು ಫಿಚ್ ರೇಟಿಂಗ್ಸ್ ವರದಿ.

ಭಾರತದ ಪೆಟ್ರೋಲಿಯಂ ಉತ್ಪನ್ನಗಳ ಬೇಡಿಕೆ ಶೇ 4ರಷ್ಟು ಹೆಚ್ಚಳ: ಹೊರ ಬಿತ್ತು ಫಿಚ್ ರೇಟಿಂಗ್ಸ್ ವರದಿ.