ಚನ್ನಪಟ್ಟಣವನ್ನು 100 ಕೋಟಿ ಅನುದಾನದಲ್ಲಿ ಅಭಿವೃದ್ಧಿ ಮಾಡ್ತೇನೆ: ಎಚ್‌ಡಿ ಕುಮಾರಸ್ವಾಮಿಗೆ ಟಾಂಗ್ ನೀಡಿದ ಡಿಕೆಶಿ
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಾಗಿರುವ ಡಿಸಿಎಂ ಡಿಕೆ ಶಿವಕುಮಾರ್ ಇಂದು ಜನಸ್ಪಂದನಾ ಸಭೆಯಲ್ಲಿ ಆಡಿದ ಮಾತುಗಳು ಕುತೂಹಲ ಹುಟ್ಟಿಸಿವೆ.
ಹೌದು “ಶಾಸಕರಾದ ಮೇಲೆ ಬಡವರ ಸೇವೆ ಮಾಡ್ಬೇಕು, ಬದಲಾವಣೆ ತರಬೇಕು. ಹೀಗೆ ಮಾಡಿಲ್ಲದಿದ್ದರೆ ನಾವು ಶಾಸಕರ್ಯಾಕೆ ಆಗ್ಬೇಕು ಎಂದು ಪರೋಕ್ಷವಾಗಿ ಎಚ್‌ಡಿಕೆ ಕಾರ್ಯವೈಖರಿ ಬಗ್ಗೆ ಜನರ ಮುಂದೆ ಟೀಕಿಸಿದ್ದಾರೆ. ಈ ಹಿಂದೆ ಎಚ್‌ಡಿ ಕುಮಾರಸ್ವಾಮಿ ” ಈಗ ಚನ್ನಪಟ್ಟಣ ನೆನಪಾಯ್ತಾ, ಇಲ್ಲಿಯವರೆಗೆ ಈ ಮಹಾನುಭಾವರು ಎಲ್ಲಿದ್ದರು” ಎಂದು ಡಿಕೆ ಶಿವಕುಮಾರ್ ಅವರನ್ನ ಕೆಣಕಿದ್ದರು.