ತನಿಖೆಯಲ್ಲಿ ಮೌಖಿಕ ಪುರಾವೆಗಿಂತಲು ವೈಜ್ಞಾನಿಕ ಪುರಾವೆಗಳು ಮುಖ್ಯ : ಡಾ.ಬೋರಲಿಂಗಯ್ಯ
ಯಾವುದೇ ತನಿಖೆಯಲ್ಲಿ ಮೌಖಿಕ ಪುರಾವೆಗಳಿಗಿಂತ ವೈಜ್ಞಾನಿಕ ಪುರಾವೆಗಳು ಮುಖ್ಯವಾಗಿದ್ದು, ಅವುಗಳ ಮೇಲೆ ಹೆಚ್ಚಿನ ಆಸಕ್ತಿ ಮತ್ತು ಅಧ್ಯಯನವನ್ನು ಸಿಬ್ಬಂದಿಗಳು ಕೈಗೊಳ್ಳಬೇಕು ಎಂದು ದಕ್ಷಿಣ ವಲಯ ಡಿಐಜಿಪಿ ಡಾ. ಬೋರಲಿಂಗಯ್ಯ ಹೇಳಿದರು. ಇಂದು ಕರ್ನಾಟಕ ಪೊಲೀಸ್ ಅಕಾಡೆಮಿಯ ನ್ಯೂ ಆಡಿಟೋರಿಯಂನಲ್ಲಿ ನಡೆದ ದಕ್ಷಿಣ ವಲಯ ಮಟ್ಟದ ಕರ್ತವ್ಯ ಕೂಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕರ್ತವ್ಯ ಕೂಟದಲ್ಲಿ ಸ್ಪರ್ಧೆ ಮಾಡುವ ಉದ್ದೇಶ ನಮ್ಮ ಇಲಾಖೆಯಲ್ಲಿ ಸ್ಪೋರ್ಟ್ಸ್ ಗೇಮಿಂಗ್ ಆಕ್ಟಿವಿಟೀಸ್ ಮತ್ತು ತನಿಖಾ ವರದಿಗಳನ್ನು ಸಿಬ್ಬಂದಿಗಳು ಮುಖ್ಯವಾಗಿ ಗಮನಹರಿಸಬೇಕು ಎಂದು ಎಂದರು.
ಸ್ಪರ್ಧೆಯ ಉದ್ದೇಶವೆಂದರೆ ಯಾವುದೇ ಒಂದು ಪ್ರಕರಣ ತೆಗೆದುಕೊಂಡಾಗ ನಮ್ಮ ಜವಾಬ್ದಾರಿ ಅದರಲ್ಲಿ ಒಳ್ಳೆಯ ರೀತಿಯ ತನಿಖೆಯನ್ನು ಮಾಡಿ ಚಾರ್ಜ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸುವುದು. ನಂತರ ನಮ್ಮ ಪ್ರಾಸಿಕ್ಯೂಟರ್ ನ್ಯಾಯಾಧೀಶರ ಮುಂದೆ ತನಿಖಾ ವರದಿಯನ್ನು ಮಂಡಿಸಬೇಕು. ತನಿಖೆಯನ್ನು ನ್ಯಾಯಾಲಯದ ಮುಂದೆ ವರದಿಯಲ್ಲಿ ತಿಳಿಸಿ ನ್ಯಾಯಾಧೀಶರ ಮುಂದೆ ಆರೋಪಿಯ ಆರೋಪದ ಬಗ್ಗೆ ಹಾಗೂ ತನಿಖೆ ವರದಿ ತಿಳಿಸಿ ನ್ಯಾಯಾಲಯದಲ್ಲಿ ವಾದ ಮಂಡಿಸಬೇಕು ಎಂದರು.
ಪ್ರಥಮವಾಗಿ ಚಾರ್ಜ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸುವುದು ನಂತರ ಅಂತಿಮವಾಗಿ ನ್ಯಾಯ ಸಿಗುವ ತನಿಖಾ ವರದಿಯನ್ನು ನ್ಯಾಯಾಧೀಶರಿಗೆ ತಿಳಿಸುವುದು ನಮ್ಮ ಜವಾಬ್ದಾರಿ ಆಗಿರುತ್ತದೆ ಎಂದು ಹೇಳಿದರು.
ಯಾವುದೇ ತನಿಖೆಯಾಗಲಿ ಹೆಚ್ಚಿನ ಆಸಕ್ತಿಯಿಂದ ಕಾರ್ಯವನ್ನು ನಿರ್ವಹಿಸಬೇಕು ಅದಕ್ಕಾಗಿ ತನಿಖೆಯಲ್ಲಿ ಡಾಗ್ ಫೋರ್ಸ್ , ಘಟನೆ ನಡೆದ ಜಾಗದಲ್ಲಿ ಪರಿಶೀಲನೆ, ಫೋಟೋಗ್ರಾಫಿ, ಡಿಎನ್ಎ, ಫಿಂಗರ್ ಪ್ರಿಂಟ್ ಎಲ್ಲಾ ವರದಿಗಳನ್ನು ವೈಜ್ಞಾನಿಕ ಪುರಾವೆಗಳಾಗಿ ತೆಗೆದುಕೊಳ್ಳಬೇಕು.
ಇವುಗಳನ್ನು ತನಿಖಾ ಸಿಬ್ಬಂದಿಗಳು ಕಲಿಯಬೇಕು ಎಂಬುದು ಕರ್ತವ್ಯಕೂಟದ ಉದ್ದೇಶ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ವಿಷ್ಣುವರ್ಧನ್, ಪೊಲೀಸ್ ಅಧಿಕಾರಿಗಳಾದ ಚೆನ್ನಬಸವಣ್ಣ, ನಾಗೇಶ್ ಎಸ್, ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.