Police Archives - Good News 24x7 https://www.goodnews24x7.com/tag/police/ Kannada Wed, 02 Oct 2024 04:15:06 +0000 en-US hourly 1 https://wordpress.org/?v=6.7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Police Archives - Good News 24x7 https://www.goodnews24x7.com/tag/police/ 32 32 ತನಿಖೆಯಲ್ಲಿ ಮೌಖಿಕ ಪುರಾವೆಗಿಂತಲು ವೈಜ್ಞಾನಿಕ ಪುರಾವೆಗಳು ಮುಖ್ಯ : ಡಾ.ಬೋರಲಿಂಗಯ್ಯ https://www.goodnews24x7.com/tanikheyalli-maukhika-puravegintalu-vaijnanika-puravega%e1%b8%b7u-mukhya-%e1%b8%8da-borali%e1%b9%85gayya-yavude-tanikheyalli-maukhika-puravega%e1%b8%b7iginta-vaijnanika-puravega%e1%b8%b7u-mukhyavagid/ https://www.goodnews24x7.com/tanikheyalli-maukhika-puravegintalu-vaijnanika-puravega%e1%b8%b7u-mukhya-%e1%b8%8da-borali%e1%b9%85gayya-yavude-tanikheyalli-maukhika-puravega%e1%b8%b7iginta-vaijnanika-puravega%e1%b8%b7u-mukhyavagid/#respond Wed, 02 Oct 2024 04:14:47 +0000 https://www.goodnews24x7.com/?p=698 ತನಿಖೆಯಲ್ಲಿ ಮೌಖಿಕ ಪುರಾವೆಗಿಂತಲು ವೈಜ್ಞಾನಿಕ ಪುರಾವೆಗಳು ಮುಖ್ಯ : ಡಾ.ಬೋರಲಿಂಗಯ್ಯ ಯಾವುದೇ ತನಿಖೆಯಲ್ಲಿ ಮೌಖಿಕ ಪುರಾವೆಗಳಿಗಿಂತ ವೈಜ್ಞಾನಿಕ ಪುರಾವೆಗಳು ಮುಖ್ಯವಾಗಿದ್ದು, ಅವುಗಳ ಮೇಲೆ ಹೆಚ್ಚಿನ ಆಸಕ್ತಿ ಮತ್ತು ಅಧ್ಯಯನವನ್ನು ಸಿಬ್ಬಂದಿಗಳು ಕೈಗೊಳ್ಳಬೇಕು ಎಂದು ದಕ್ಷಿಣ ವಲಯ ಡಿಐಜಿಪಿ ಡಾ. ಬೋರಲಿಂಗಯ್ಯ  ಹೇಳಿದರು.…

The post ತನಿಖೆಯಲ್ಲಿ ಮೌಖಿಕ ಪುರಾವೆಗಿಂತಲು ವೈಜ್ಞಾನಿಕ ಪುರಾವೆಗಳು ಮುಖ್ಯ : ಡಾ.ಬೋರಲಿಂಗಯ್ಯ appeared first on Good News 24x7.

]]>
ತನಿಖೆಯಲ್ಲಿ ಮೌಖಿಕ ಪುರಾವೆಗಿಂತಲು ವೈಜ್ಞಾನಿಕ ಪುರಾವೆಗಳು ಮುಖ್ಯ : ಡಾ.ಬೋರಲಿಂಗಯ್ಯ

ಯಾವುದೇ ತನಿಖೆಯಲ್ಲಿ ಮೌಖಿಕ ಪುರಾವೆಗಳಿಗಿಂತ ವೈಜ್ಞಾನಿಕ ಪುರಾವೆಗಳು ಮುಖ್ಯವಾಗಿದ್ದು, ಅವುಗಳ ಮೇಲೆ ಹೆಚ್ಚಿನ ಆಸಕ್ತಿ ಮತ್ತು ಅಧ್ಯಯನವನ್ನು ಸಿಬ್ಬಂದಿಗಳು ಕೈಗೊಳ್ಳಬೇಕು ಎಂದು ದಕ್ಷಿಣ ವಲಯ ಡಿಐಜಿಪಿ ಡಾ. ಬೋರಲಿಂಗಯ್ಯ  ಹೇಳಿದರು. ಇಂದು ಕರ್ನಾಟಕ ಪೊಲೀಸ್ ಅಕಾಡೆಮಿಯ ನ್ಯೂ ಆಡಿಟೋರಿಯಂನಲ್ಲಿ ನಡೆದ ದಕ್ಷಿಣ ವಲಯ ಮಟ್ಟದ ಕರ್ತವ್ಯ ಕೂಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕರ್ತವ್ಯ ಕೂಟದಲ್ಲಿ ಸ್ಪರ್ಧೆ ಮಾಡುವ ಉದ್ದೇಶ ನಮ್ಮ ಇಲಾಖೆಯಲ್ಲಿ ಸ್ಪೋರ್ಟ್ಸ್ ಗೇಮಿಂಗ್ ಆಕ್ಟಿವಿಟೀಸ್ ಮತ್ತು ತನಿಖಾ ವರದಿಗಳನ್ನು ಸಿಬ್ಬಂದಿಗಳು ಮುಖ್ಯವಾಗಿ ಗಮನಹರಿಸಬೇಕು ಎಂದು ಎಂದರು.

ಸ್ಪರ್ಧೆಯ ಉದ್ದೇಶವೆಂದರೆ ಯಾವುದೇ ಒಂದು ಪ್ರಕರಣ ತೆಗೆದುಕೊಂಡಾಗ ನಮ್ಮ ಜವಾಬ್ದಾರಿ ಅದರಲ್ಲಿ ಒಳ್ಳೆಯ ರೀತಿಯ ತನಿಖೆಯನ್ನು ಮಾಡಿ ಚಾರ್ಜ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸುವುದು. ನಂತರ ನಮ್ಮ ಪ್ರಾಸಿಕ್ಯೂಟರ್ ನ್ಯಾಯಾಧೀಶರ ಮುಂದೆ ತನಿಖಾ ವರದಿಯನ್ನು ಮಂಡಿಸಬೇಕು. ತನಿಖೆಯನ್ನು ನ್ಯಾಯಾಲಯದ ಮುಂದೆ ವರದಿಯಲ್ಲಿ ತಿಳಿಸಿ ನ್ಯಾಯಾಧೀಶರ ಮುಂದೆ ಆರೋಪಿಯ ಆರೋಪದ ಬಗ್ಗೆ ಹಾಗೂ ತನಿಖೆ ವರದಿ ತಿಳಿಸಿ ನ್ಯಾಯಾಲಯದಲ್ಲಿ ವಾದ ಮಂಡಿಸಬೇಕು ಎಂದರು.

ಪ್ರಥಮವಾಗಿ ಚಾರ್ಜ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸುವುದು ನಂತರ ಅಂತಿಮವಾಗಿ ನ್ಯಾಯ ಸಿಗುವ ತನಿಖಾ ವರದಿಯನ್ನು ನ್ಯಾಯಾಧೀಶರಿಗೆ ತಿಳಿಸುವುದು ನಮ್ಮ ಜವಾಬ್ದಾರಿ ಆಗಿರುತ್ತದೆ ಎಂದು ಹೇಳಿದರು.
ಯಾವುದೇ ತನಿಖೆಯಾಗಲಿ ಹೆಚ್ಚಿನ ಆಸಕ್ತಿಯಿಂದ ಕಾರ್ಯವನ್ನು ನಿರ್ವಹಿಸಬೇಕು ಅದಕ್ಕಾಗಿ ತನಿಖೆಯಲ್ಲಿ ಡಾಗ್ ಫೋರ್ಸ್ , ಘಟನೆ ನಡೆದ ಜಾಗದಲ್ಲಿ ಪರಿಶೀಲನೆ, ಫೋಟೋಗ್ರಾಫಿ, ಡಿಎನ್ಎ, ಫಿಂಗರ್ ಪ್ರಿಂಟ್ ಎಲ್ಲಾ ವರದಿಗಳನ್ನು ವೈಜ್ಞಾನಿಕ ಪುರಾವೆಗಳಾಗಿ ತೆಗೆದುಕೊಳ್ಳಬೇಕು.
ಇವುಗಳನ್ನು ತನಿಖಾ ಸಿಬ್ಬಂದಿಗಳು ಕಲಿಯಬೇಕು ಎಂಬುದು ಕರ್ತವ್ಯಕೂಟದ ಉದ್ದೇಶ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ವಿಷ್ಣುವರ್ಧನ್, ಪೊಲೀಸ್ ಅಧಿಕಾರಿಗಳಾದ ಚೆನ್ನಬಸವಣ್ಣ, ನಾಗೇಶ್ ಎಸ್, ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

The post ತನಿಖೆಯಲ್ಲಿ ಮೌಖಿಕ ಪುರಾವೆಗಿಂತಲು ವೈಜ್ಞಾನಿಕ ಪುರಾವೆಗಳು ಮುಖ್ಯ : ಡಾ.ಬೋರಲಿಂಗಯ್ಯ appeared first on Good News 24x7.

]]>
https://www.goodnews24x7.com/tanikheyalli-maukhika-puravegintalu-vaijnanika-puravega%e1%b8%b7u-mukhya-%e1%b8%8da-borali%e1%b9%85gayya-yavude-tanikheyalli-maukhika-puravega%e1%b8%b7iginta-vaijnanika-puravega%e1%b8%b7u-mukhyavagid/feed/ 0 698
ಮೈಸೂರಿನಲ್ಲಿ ರೇವ್ ಪಾರ್ಟಿ : ಪೊಲೀಸರು ದಾಳಿ ನಡೆಸಿ 50ಕ್ಕೂ ಹೆಚ್ಚು ಮಂದಿ ಬಂಧನ https://www.goodnews24x7.com/rave-party-in-mysore-police-raided-and-arrested-more-than-50-people/ https://www.goodnews24x7.com/rave-party-in-mysore-police-raided-and-arrested-more-than-50-people/#respond Sun, 29 Sep 2024 06:49:55 +0000 https://www.goodnews24x7.com/?p=685 ಮೈಸೂರಿನಲ್ಲಿ ರೇವ್ ಪಾರ್ಟಿ : ಪೊಲೀಸರು ದಾಳಿ ನಡೆಸಿ 50ಕ್ಕೂ ಹೆಚ್ಚು ಮಂದಿ ಬಂಧನ ಮೈಸೂರು ನಗರದ ಹೊರವಲಯದಲ್ಲಿ ತಡರಾತ್ರಿ ನಡೆಯುತ್ತಿದ್ದ ರೇವ್ ಪಾರ್ಟಿಗೆ ಪೊಲೀಸರು ಎಂಟ್ರಿ ಕೊಟ್ಟು ಕಾರ್ಯಾಚರಣೆ ನಡೆಸಿದ್ದು, 50ಕ್ಕೂ ಹೆಚ್ಚು ಯುವಕರನ್ನು ವಶಕ್ಕೆ ಪಡೆದು, ಅವರ ರಕ್ತದ…

The post ಮೈಸೂರಿನಲ್ಲಿ ರೇವ್ ಪಾರ್ಟಿ : ಪೊಲೀಸರು ದಾಳಿ ನಡೆಸಿ 50ಕ್ಕೂ ಹೆಚ್ಚು ಮಂದಿ ಬಂಧನ appeared first on Good News 24x7.

]]>
ಮೈಸೂರಿನಲ್ಲಿ ರೇವ್ ಪಾರ್ಟಿ : ಪೊಲೀಸರು ದಾಳಿ ನಡೆಸಿ 50ಕ್ಕೂ ಹೆಚ್ಚು ಮಂದಿ ಬಂಧನ

ಮೈಸೂರು ನಗರದ ಹೊರವಲಯದಲ್ಲಿ ತಡರಾತ್ರಿ ನಡೆಯುತ್ತಿದ್ದ ರೇವ್ ಪಾರ್ಟಿಗೆ ಪೊಲೀಸರು ಎಂಟ್ರಿ ಕೊಟ್ಟು ಕಾರ್ಯಾಚರಣೆ ನಡೆಸಿದ್ದು, 50ಕ್ಕೂ ಹೆಚ್ಚು ಯುವಕರನ್ನು ವಶಕ್ಕೆ ಪಡೆದು, ಅವರ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ಬಂಧಿಸುವ ವೇಳೆ ತಪ್ಪಿಸಿಕೊಳ್ಳಲು ಕೆಲವು ಯುವಕರು ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದಾರೆ. ಓಡಿ ಹೋಗಲು ಯತ್ನಿಸಿದ್ದರು. ಆದರೂ ಪೊಲೀಸರು ತಮ್ಮ ಪಟ್ಟು ಸಡಿಲಿಸದೇ ಅರೆಸ್ಟ್​ ಮಾಡಿದ್ದಾರೆ. ಈ ದಾಳಿಯನ್ನು ಅಡಿಷನಲ್ ಎಸ್.ಪಿ ನಾಗೇಂದ್ರ ಹಾಗೂ ಡಿವೈಎಸ್​ಪಿ ಕರೀಂ ಅವರ ಟೀಮ್​ನಿಂದ ನಡೆಸಲಾಗಿತ್ತು.

ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಎಸ್​ಪಿ ವಿಷ್ಣುವರ್ಧನ್ ಅವರು.. ಪಾರ್ಟಿಯಲ್ಲಿ ಯಾವುದೇ ಮಾದಕ ವಸ್ತು ಸಿಕ್ಕಿಲ್ಲ. ಮದ್ಯ, ಸಿಗರೇಟ್ ಸ್ಥಳದಲ್ಲಿ ಇತ್ತು. ಅಲ್ಲಿದ್ದ ಎಲ್ಲರ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುವುದು. ಎಫ್​ಎಸ್​ಎಲ್ ತಂಡ ಸಹಾ ಭೇಟಿ ನೀಡಿ ಪರಿಶೀಲನೆ ಮಾಡಿದೆ. ವರದಿ ಬಂದ ನಂತರ ಈ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದಿದ್ದಾರೆ.

The post ಮೈಸೂರಿನಲ್ಲಿ ರೇವ್ ಪಾರ್ಟಿ : ಪೊಲೀಸರು ದಾಳಿ ನಡೆಸಿ 50ಕ್ಕೂ ಹೆಚ್ಚು ಮಂದಿ ಬಂಧನ appeared first on Good News 24x7.

]]>
https://www.goodnews24x7.com/rave-party-in-mysore-police-raided-and-arrested-more-than-50-people/feed/ 0 685
ಬಳ್ಳಾರಿ ಜೈಲಿಗೆ ನಟ ದರ್ಶನ್ ಶಿಫ್ಟ್… ಅಷ್ಟ ದಿಕ್ಕುಗಳಿಗೆ ಡಿ ಗ್ಯಾಂಗ್ ವಿಂಗಡಣೆ.. https://www.goodnews24x7.com/actor-darshan-shift-to-bellary-jail-d-gang-split-in-all-directions/ https://www.goodnews24x7.com/actor-darshan-shift-to-bellary-jail-d-gang-split-in-all-directions/#respond Tue, 27 Aug 2024 13:16:54 +0000 https://www.goodnews24x7.com/?p=445 ಬಳ್ಳಾರಿ ಜೈಲಿಗೆ ನಟ ದರ್ಶನ್ ಶಿಫ್ಟ್… ಅಷ್ಟ ದಿಕ್ಕುಗಳಿಗೆ ಡಿ ಗ್ಯಾಂಗ್ ವಿಂಗಡಣೆ.. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು 24ನೇ ಎಸಿಎಂಎಂ ನ್ಯಾಯಾಲಯ ಒಪ್ಪಿಗೆ ನೀಡಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ…

The post ಬಳ್ಳಾರಿ ಜೈಲಿಗೆ ನಟ ದರ್ಶನ್ ಶಿಫ್ಟ್… ಅಷ್ಟ ದಿಕ್ಕುಗಳಿಗೆ ಡಿ ಗ್ಯಾಂಗ್ ವಿಂಗಡಣೆ.. appeared first on Good News 24x7.

]]>
ಬಳ್ಳಾರಿ ಜೈಲಿಗೆ ನಟ ದರ್ಶನ್ ಶಿಫ್ಟ್… ಅಷ್ಟ ದಿಕ್ಕುಗಳಿಗೆ ಡಿ ಗ್ಯಾಂಗ್ ವಿಂಗಡಣೆ..

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು 24ನೇ ಎಸಿಎಂಎಂ ನ್ಯಾಯಾಲಯ ಒಪ್ಪಿಗೆ ನೀಡಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಗೆ ರಾಜಾತಿಥ್ಯ ನೀಡಿರುವ ಫೋಟೊ ವೈರಲ್ ಆಗಿತ್ತು. ಇದರ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿ ಸಾಕಷ್ಟು ಟೀಕೆಗಳು ವ್ಯಕ್ತವಾದವು. ತಕ್ಷಣ ಎಚ್ಚೆತ್ತ ಸರ್ಕಾರ 9 ಮಂದಿ ಜೈಲು ಸಿಬ್ಬಂದಿಯನ್ನ ಅಮಾನತುಗೊಳಿಸಿತ್ತು.

ಜೈಲಿನಲ್ಲಿ ವಿಚಾರಣಾಧೀನ ಕೈದಿಗಳಿಗೆ ರಾಜಾತಿಥ್ಯ ಸಿಕ್ಕ ಪ್ರಕರಣದಲ್ಲಿ ವಿಚಾರಣೆ ನಡೆಸಲು ಕೋರ್ಟ್‌ ಅನುಮತಿ ನೀಡಿದೆ. 13ನೇ ಎಸಿಎಂಎಂ ಕೋರ್ಟ್ ಜೈಲಿನಲ್ಲಿ ಆರೋಪಿಗಳ ವಿಚಾರಣೆಗೆ ಅನುಮತಿ ನೀಡಿ ಮಹತ್ವದ ಆದೇಶ ನೀಡಿದೆ. ದರ್ಶನ್ ಫೋಟೋ ವೈರಲ್ ಆದ ಕೂಡಲೇ 7 ಅಧಿಕಾರಿಗಳನ್ನು ಸರ್ಕಾರ ಅಮಾನತು ಮಾಡಿತ್ತು. ಆದರೆ ದರ್ಶನ್ ಅವರ ವಿಚಾರಣೆ ನಡೆಸಲು ಕೋರ್ಟ್ ಅನುಮತಿಗಾಗಿ ಕಾಯುತ್ತಿತ್ತು. ಇದೀಗ ದರ್ಶನ್ ಅವರ ವಿಚಾರಣೆ ನಡೆಸಲು ಕೋರ್ಟ್ ಅನುಮತಿ ನೀಡಿದೆ. ಮುಂದೆ ಕೊಲೆ ಕೇಸ್‌ ಜೊತೆಗೆ ದರ್ಶನ್ ಅವರು ಮತ್ತೆರಡು ಕೇಸ್‌ನ ವಿಚಾರಣೆಗೂ ಹಾಜರಾಗಬೇಕಿದೆ.

The post ಬಳ್ಳಾರಿ ಜೈಲಿಗೆ ನಟ ದರ್ಶನ್ ಶಿಫ್ಟ್… ಅಷ್ಟ ದಿಕ್ಕುಗಳಿಗೆ ಡಿ ಗ್ಯಾಂಗ್ ವಿಂಗಡಣೆ.. appeared first on Good News 24x7.

]]>
https://www.goodnews24x7.com/actor-darshan-shift-to-bellary-jail-d-gang-split-in-all-directions/feed/ 0 445
ದರ್ಶನ್ ಗೆ ಜೈಲಿನಲ್ಲಿ ವಿಶೇಷ ಸೌಲಭ್ಯ, ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವ ಬಗ್ಗೆ ಪೊಲೀಸ್ ಇಲಾಖೆ ತೀರ್ಮಾನಿಸಲಿದೆ : ಮುಖ್ಯಮಂತ್ರಿ ಸಿದ್ದರಾಮಯ್ಯ https://www.goodnews24x7.com/special-facility-for-darshan-in-jail-police-department-will-decide-on-transfer-to-bellary-jail-chief-minister-siddaramaiah/ https://www.goodnews24x7.com/special-facility-for-darshan-in-jail-police-department-will-decide-on-transfer-to-bellary-jail-chief-minister-siddaramaiah/#respond Tue, 27 Aug 2024 09:40:37 +0000 https://www.goodnews24x7.com/?p=434 ದರ್ಶನ್ ಗೆ ಜೈಲಿನಲ್ಲಿ ವಿಶೇಷ ಸೌಲಭ್ಯ – ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವ ಬಗ್ಗೆ ಪೊಲೀಸ್ ಇಲಾಖೆ ತೀರ್ಮಾನಿಸಲಿದೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಕೊ* ಆರೋಪದಲ್ಲಿ ಜೈಲು ಸೇರಿರುವ ನಟ ದರ್ಶನ್ ನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವ ಬಗ್ಗೆ ಪೊಲೀಸ್ ಇಲಾಖೆ ತೀರ್ಮಾನ…

The post ದರ್ಶನ್ ಗೆ ಜೈಲಿನಲ್ಲಿ ವಿಶೇಷ ಸೌಲಭ್ಯ, ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವ ಬಗ್ಗೆ ಪೊಲೀಸ್ ಇಲಾಖೆ ತೀರ್ಮಾನಿಸಲಿದೆ : ಮುಖ್ಯಮಂತ್ರಿ ಸಿದ್ದರಾಮಯ್ಯ appeared first on Good News 24x7.

]]>
ದರ್ಶನ್ ಗೆ ಜೈಲಿನಲ್ಲಿ ವಿಶೇಷ ಸೌಲಭ್ಯ – ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವ ಬಗ್ಗೆ ಪೊಲೀಸ್ ಇಲಾಖೆ ತೀರ್ಮಾನಿಸಲಿದೆ : ಮುಖ್ಯಮಂತ್ರಿ ಸಿದ್ದರಾಮಯ್ಯ

ಕೊ* ಆರೋಪದಲ್ಲಿ ಜೈಲು ಸೇರಿರುವ ನಟ ದರ್ಶನ್ ನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವ ಬಗ್ಗೆ ಪೊಲೀಸ್ ಇಲಾಖೆ ತೀರ್ಮಾನ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕೊ* ಆರೋಪದಲ್ಲಿ ಜೈಲು ಸೇರಿರುವ ನಟ ದರ್ಶನ್ ಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ನೀಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಈಗಾಗಲೇ 9 ಜನರನ್ನು ಅಮಾನತು ಮಾಡಲಾಗಿದೆ. ಪ್ರಕರಣಕ್ಕೆಸಂಬಂಧಿಸಿದಂತೆ ತನಿಖೆ ಕೈಗೊಂಡಿದ್ದು, ವರದಿ ಆಧಾರದ ಮೇಲೆ ತಪ್ಪೆಸಗಿರುವ ಇನ್ನಷ್ಟು ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು ಎಂದರು.

The post ದರ್ಶನ್ ಗೆ ಜೈಲಿನಲ್ಲಿ ವಿಶೇಷ ಸೌಲಭ್ಯ, ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವ ಬಗ್ಗೆ ಪೊಲೀಸ್ ಇಲಾಖೆ ತೀರ್ಮಾನಿಸಲಿದೆ : ಮುಖ್ಯಮಂತ್ರಿ ಸಿದ್ದರಾಮಯ್ಯ appeared first on Good News 24x7.

]]>
https://www.goodnews24x7.com/special-facility-for-darshan-in-jail-police-department-will-decide-on-transfer-to-bellary-jail-chief-minister-siddaramaiah/feed/ 0 434