New York Archives - Good News 24x7 https://www.goodnews24x7.com/tag/new-york/ Kannada Sun, 29 Dec 2024 06:41:51 +0000 en-US hourly 1 https://wordpress.org/?v=6.7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg New York Archives - Good News 24x7 https://www.goodnews24x7.com/tag/new-york/ 32 32 ಚೆಸ್ನಲ್ಲಿ ಭಾರತ ಕ್ಕೆ ಮತ್ತೊಂದು ಮೈಲಿಗಲ್ಲು ; 37 ವರ್ಷದ ಕೊನೇರು ಹಂಪಿ ವಿಶ್ವ ಚಾಂಪಿಯನ್. https://www.goodnews24x7.com/%e0%b2%9a%e0%b3%86%e0%b2%b8%e0%b3%8d%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%ad%e0%b2%be%e0%b2%b0%e0%b2%a4-%e0%b2%95%e0%b3%8d%e0%b2%95%e0%b3%86-%e0%b2%ae%e0%b2%a4%e0%b3%8d%e0%b2%a4/ https://www.goodnews24x7.com/%e0%b2%9a%e0%b3%86%e0%b2%b8%e0%b3%8d%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%ad%e0%b2%be%e0%b2%b0%e0%b2%a4-%e0%b2%95%e0%b3%8d%e0%b2%95%e0%b3%86-%e0%b2%ae%e0%b2%a4%e0%b3%8d%e0%b2%a4/#respond Sun, 29 Dec 2024 06:41:51 +0000 https://www.goodnews24x7.com/?p=1349 ನ್ಯೂಯಾರ್ಕ್: ಭಾರತದ ಗ್ರ್ಯಾಂಡ್ಮಾಸ್ಟರ್ ಕೊನೇರು ಹಂಪಿ ಅವರು ಇಂಡೋನೇಷ್ಯಾದ ಐರಿನ್ ಸುಕಂದರ್ ಅವರನ್ನು ಮಣಿಸಿ ಮಹಿಳಾ ವಿಶ್ವ ರ್ಯಾಪಿಡ್ ಚೆಸ್ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ 37 ವರ್ಷದ ಕೊನೇರು ಹಂಪಿ ಅವರು ಚೀನಾದ ಜು ವೆನ್ಜುನ್ ಬಳಿಕ ಮಹಿಳೆಯರ…

The post ಚೆಸ್ನಲ್ಲಿ ಭಾರತ ಕ್ಕೆ ಮತ್ತೊಂದು ಮೈಲಿಗಲ್ಲು ; 37 ವರ್ಷದ ಕೊನೇರು ಹಂಪಿ ವಿಶ್ವ ಚಾಂಪಿಯನ್. appeared first on Good News 24x7.

]]>
ನ್ಯೂಯಾರ್ಕ್: ಭಾರತದ ಗ್ರ್ಯಾಂಡ್ಮಾಸ್ಟರ್ ಕೊನೇರು ಹಂಪಿ ಅವರು ಇಂಡೋನೇಷ್ಯಾದ ಐರಿನ್ ಸುಕಂದರ್ ಅವರನ್ನು ಮಣಿಸಿ ಮಹಿಳಾ ವಿಶ್ವ ರ್ಯಾಪಿಡ್ ಚೆಸ್ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ 37 ವರ್ಷದ ಕೊನೇರು ಹಂಪಿ ಅವರು ಚೀನಾದ ಜು ವೆನ್ಜುನ್ ಬಳಿಕ ಮಹಿಳೆಯರ ವಿಭಾಗದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಪ್ರಶಸ್ತಿ ಗೆದ್ದ ಎರಡನೇ ಚೆಸ್ ಆಟಗಾರ್ತಿಯಾಗಿದ್ದಾರೆ.
ಭಾನುವಾರ ನ್ಯೂಯಾರ್ಕ್ನಲ್ಲಿ ನಡೆದ ಪಂದ್ಯಾವಳಿಯ ಫೈನಲ್ನಲ್ಲಿ 11 ಅಂಕಗಳಲ್ಲಿ 8.5 ಅಂಕಗಳನ್ನು ಕಲೆ ಹಾಕುವ ಮೂಲಕ ಅಗ್ರಸ್ಥಾನ ಗಳಿಸಿದರು. 2019ರಲ್ಲಿ ಜಾರ್ಜಿಯಾದಲ್ಲಿ ನಡೆದ ಟೂರ್ನಿಯಲ್ಲೂ ಕೊನೇರು ಅವರು ಪ್ರಶಸ್ತಿ ಗೆದ್ದಿದ್ದರು. ಅದರ ನಂತರ ಇದು ಅವರ ಎರಡನೇ ಗೆಲುವಾಗಿದೆ.

ಭಾರತದ ಮಟ್ಟಕ್ಕೆ ಕೊನೇರು ಹಂಪಿ ಅವರ ಈ ಗೆಲುವು ಚೆಸ್ನಲ್ಲಿ ಐತಿಹಾಸಿಕ ಮೈಲಿಗಲ್ಲಾಗಿದೆ. ಡಿಂಗ್ ಲಿರೆನ್ ಅವರನ್ನು ಸೋಲಿಸಿ, ಭಾರತದ ಡಿ.ಗುಕೇಶ್ ಅವರು ಚಾಂಪಿಯನ್ ಆಗಿ ಹೊರಹೊಮ್ಮಿದ ಎರಡು ವಾರದಲ್ಲಿ ಕೊನೇರು ಹಂಪಿ ಅವರು ಚಾಂಪಿಯನ್ ಪಟ್ಟ ಅಲಂಕರಿಸಿರುವುದು ಭಾರತಕ್ಕೆ ಹೆಮ್ಮೆಯ ವಿಷಯವಾಗಿದೆ. ಡಿ.ಗುಕೇಶ್ ಅವರು, ವಿಶ್ವನಾಥನ್ ಆನಂದ್ ಬಳಿಕ ಟೂರ್ನಮೆಂಟ್ ಗೆದ್ದ ಎರಡನೇ ಭಾರತೀಯರಾಗಿದ್ದಾರೆ. ಜೊತೆಗೆ ವಿಶ್ವ ಚೆಸ್ ಚಾಂಪಿಯನ್ ಕಿರೀಟ ಗೆದ್ದ ಅತಿ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಈ ಸಾಧನೆಗಳ ಹೊರತಾಗಿ, ಕೊನೇರು ಹಂಪಿ ಅವರು 2022ರ ಮಹಿಳಾ ವಿಶ್ವ ಬ್ಲಿಟ್ಜ್ ಚೆಸ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಮತ್ತು 2024ರಲ್ಲಿ ಮಹಿಳಾ ಅಭ್ಯರ್ಥಿಗಳ ಪಂದ್ಯಾವಳಿಯಲ್ಲಿ ಎರಡನೇ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.

The post ಚೆಸ್ನಲ್ಲಿ ಭಾರತ ಕ್ಕೆ ಮತ್ತೊಂದು ಮೈಲಿಗಲ್ಲು ; 37 ವರ್ಷದ ಕೊನೇರು ಹಂಪಿ ವಿಶ್ವ ಚಾಂಪಿಯನ್. appeared first on Good News 24x7.

]]>
https://www.goodnews24x7.com/%e0%b2%9a%e0%b3%86%e0%b2%b8%e0%b3%8d%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%ad%e0%b2%be%e0%b2%b0%e0%b2%a4-%e0%b2%95%e0%b3%8d%e0%b2%95%e0%b3%86-%e0%b2%ae%e0%b2%a4%e0%b3%8d%e0%b2%a4/feed/ 0 1349