farmer Archives - Good News 24x7 https://www.goodnews24x7.com/tag/farmer/ Kannada Wed, 04 Sep 2024 14:46:17 +0000 en-US hourly 1 https://wordpress.org/?v=6.7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg farmer Archives - Good News 24x7 https://www.goodnews24x7.com/tag/farmer/ 32 32 ಸಿಎಂ ತವರು ಕ್ಷೇತ್ರದಲ್ಲಿ ಅನ್ನದಾತರ ಅಹೋರಾತ್ರಿ ಧರಣಿ, ಭೂಮಿ ಕಳೆದುಕೊಂಡ ರೈತ ಕುಟುಂಬದಿಂದ ಪ್ರತಿಭಟನೆ https://www.goodnews24x7.com/an-hour-long-sit-in-by-food-givers-in-cms-home-constituency-protest-by-farmer-families-who-lost-their-land/ https://www.goodnews24x7.com/an-hour-long-sit-in-by-food-givers-in-cms-home-constituency-protest-by-farmer-families-who-lost-their-land/#respond Wed, 04 Sep 2024 14:46:17 +0000 https://www.goodnews24x7.com/?p=512 ಸಿಎಂ ತವರು ಕ್ಷೇತ್ರದಲ್ಲಿ ಅನ್ನದಾತರ ಅಹೋರಾತ್ರಿ ಧರಣಿ, ಭೂಮಿ ಕಳೆದುಕೊಂಡ ರೈತ ಕುಟುಂಬದಿಂದ ಪ್ರತಿಭಟನೆ ಭೂಮಿ ಕಳೆದುಕೊಂಡ ರೈತರಿಗೆ ಉದ್ಯೋಗ ಕೊಡಿಸಲು ವಿಫಲವಾದ ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಕೆಐಎಡಿಬಿಯ ವಿರುದ್ಧ ಕೆಂಪಿಸಿದ್ದನಹುಂಡಿ ‌ರೈತರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ವರುಣಾ ಕ್ಷೇತ್ರದ ಕೆಂಪಿಸಿದ್ದನಹುಂಡಿ…

The post ಸಿಎಂ ತವರು ಕ್ಷೇತ್ರದಲ್ಲಿ ಅನ್ನದಾತರ ಅಹೋರಾತ್ರಿ ಧರಣಿ, ಭೂಮಿ ಕಳೆದುಕೊಂಡ ರೈತ ಕುಟುಂಬದಿಂದ ಪ್ರತಿಭಟನೆ appeared first on Good News 24x7.

]]>
ಸಿಎಂ ತವರು ಕ್ಷೇತ್ರದಲ್ಲಿ ಅನ್ನದಾತರ ಅಹೋರಾತ್ರಿ ಧರಣಿ, ಭೂಮಿ ಕಳೆದುಕೊಂಡ ರೈತ ಕುಟುಂಬದಿಂದ ಪ್ರತಿಭಟನೆ

ಭೂಮಿ ಕಳೆದುಕೊಂಡ ರೈತರಿಗೆ ಉದ್ಯೋಗ ಕೊಡಿಸಲು ವಿಫಲವಾದ ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಕೆಐಎಡಿಬಿಯ ವಿರುದ್ಧ ಕೆಂಪಿಸಿದ್ದನಹುಂಡಿ ‌ರೈತರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ

ವರುಣಾ ಕ್ಷೇತ್ರದ ಕೆಂಪಿಸಿದ್ದನಹುಂಡಿ ಗ್ರಾಮದ ರೈತರ ಭೂಮಿಯನ್ನು ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆಂದು ಭೂ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಆ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ರೈತರ ಕುಟುಂಬದ ಸದಸ್ಯರಿಗೆ ಕಾರ್ಖಾನೆಗಳಲ್ಲಿ ಖಾಯಂ ಕೆಲಸ ನೀಡುವುದಾಗಿ ತಿಳಿಸಲಾಗಿತ್ತು. ಆದರೆ ಬಹುತೇಕ ಕಾರ್ಖಾನೆಗಳು ಉದ್ಯೋಗವನ್ನು ನೀಡಿರಲಿಲ್ಲ. ರೈತರ ಹಲವಾರು ಹೋರಾಟಗಳ ನಂತರ, ಜಿಲ್ಲಾಧಿಕಾರಿಗಳು ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾ ಕೈಗಾರಿಕೆಗಳ ಕೇಂದ್ರದ ಜಂಟಿ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಒಂದು ಜಿಲ್ಲಾಮಟ್ಟದ ಸಮಿತಿಯನ್ನು ರಚನೆ ಮಾಡಿದರು. ಈ ಸಮಿತಿಯ ಶಿಫರಾಸ್ಸಿನಂತೆ, ಉದ್ಯೋಗ ನೀಡಬೇಕೆಂದು ಕೆಲವು ಕೈಗಾರಿಕೆಗಳಿಗೆ ಕೆಐಎಡಿಬಿಯ ಅಧಿಕಾರಿಗಳು ಪತ್ರವನ್ನು ನೀಡಿದ್ದಾರೆ. ಆದರೆ ಈ ಪತ್ರಗಳಿಗೆ ಕಾರ್ಖಾನೆಗಳು ಸ್ಪಂದಿಸುತ್ತಿಲ್ಲ.

ಹಾಗಾಗಿ ರೈತರಿಂದ ಭೂಮಿಯನ್ನು ಪಡೆದು ಕೈಗಾರಿಕೆಗಳಿಗೆ ನೀಡಿರುವ ಕೆಐಎಡಿಬಿಯ ಅಧಿಕಾರಿಗಳು ರೈತರ ಮಕ್ಕಳಿಗೆ ಕೆಲಸ ಕೊಡಿಸಬೇಕೆಂದು, ೨೯-೦೮-೨೦೨೪ರಂದು ಕೆಐಎಡಿಬಿಯ ಕಚೇರಿಯ ಮುಂದೆ ಅನಿರ್ಧಿಷ್ಟಾವಧಿ ಹೋರಾಟವನ್ನು ಶುರು ಮಾಡಲಾಗಿತ್ತು. ಪ್ರತಿಭಟನಾ ಸ್ಥಳಕ್ಕೆ ಬಂದ ಕೆಐಎಡಿಬಿಯ ಅಧಿಕಾರಿಗಳು ೦೪-೦೯-೨೦೨೪ ರಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರ ಅಧ್ಯಕ್ಷತೆಯಲ್ಲಿ ರೈತರಿಗೆ ಕೆಲಸ ನೀಡಬೇಕಿರುವ ಕಾರ್ಖಾನೆಗಳ ಪ್ರತಿನಿಧಿಗಳ ಸಭೆಯನ್ನು ನಡೆಸಿ ಉದ್ಯೋಗ ಕೊಡಿಸುವುದಾಗಿ ತಿಳಿಸಿದ್ದರು. ಆ‌ ಹಿನ್ನಲೆಯಲ್ಲಿ ಪ್ರತಿಭಟನೆಯನ್ನು ವಾಪಾಸ್ ತೆಗೆದುಕೊಳ್ಳಲಾಗಿತ್ತು.

ಆದರೆ ಇಂದಿನ ಸಭೆಯಲ್ಲಿ, ಭೂಮಿ ನೀಡಿದ ರೈತರ ಮಕ್ಕಳಿಗೆ ಉದ್ಯೋಗ ನೀಡುವ ಬಗ್ಗೆ ಯಾವುದೇ ತಿರ್ಮಾನವಾಗಲಿಲ್ಲ. ಹಾಗಾಗಿ ರೈತರಿಗೆ ನ್ಯಾಯ ಸಿಗುವವರೆಗೂ ಜಂಟಿ ನಿರ್ದೇಶಕರ ಕಛೇರಿಯ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ.

The post ಸಿಎಂ ತವರು ಕ್ಷೇತ್ರದಲ್ಲಿ ಅನ್ನದಾತರ ಅಹೋರಾತ್ರಿ ಧರಣಿ, ಭೂಮಿ ಕಳೆದುಕೊಂಡ ರೈತ ಕುಟುಂಬದಿಂದ ಪ್ರತಿಭಟನೆ appeared first on Good News 24x7.

]]>
https://www.goodnews24x7.com/an-hour-long-sit-in-by-food-givers-in-cms-home-constituency-protest-by-farmer-families-who-lost-their-land/feed/ 0 512
ಕೇಂದ್ರ ಸರ್ಕಾರ ರೈತ ವಿರೋಧಿ ಧೋರಣೆಗಳಿಂದ, ರೈತರನ್ನು ನಾಶ ಮಾಡಲು ಹೊರಟಿದೆ : ಕುರುಬೂರ್ ಶಾಂತಕುಮಾರ್ https://www.goodnews24x7.com/kendra-sarkara-raita-virodhi-dhora%e1%b9%87ega%e1%b8%b7inda-raitarannu-nasa-ma%e1%b8%8dalu-hora%e1%b9%adide-kurubur-santakumar-kendra-sarkarakke-durbala-adhikara-sikkidaru-raita-virodhi-dhora/ https://www.goodnews24x7.com/kendra-sarkara-raita-virodhi-dhora%e1%b9%87ega%e1%b8%b7inda-raitarannu-nasa-ma%e1%b8%8dalu-hora%e1%b9%adide-kurubur-santakumar-kendra-sarkarakke-durbala-adhikara-sikkidaru-raita-virodhi-dhora/#respond Wed, 28 Aug 2024 09:51:58 +0000 https://www.goodnews24x7.com/?p=463 ಕೇಂದ್ರ ಸರ್ಕಾರ ರೈತ ವಿರೋಧಿ ಧೋರಣೆಗಳಿಂದ, ರೈತರನ್ನು ನಾಶ ಮಾಡಲು ಹೊರಟಿದೆ : ಕುರುಬೂರ್ ಶಾಂತಕುಮಾರ್ ಕೇಂದ್ರ ಸರ್ಕಾರಕ್ಕೆ ದುರ್ಬಲ ಅಧಿಕಾರ ಸಿಕ್ಕಿದರು ರೈತ ವಿರೋಧಿ ಧೋರಣೆಗಳನ್ನೇ ಮುಂದುವರಿಸುತ್ತಿದೆ. ಇದೇ ರೀತಿ ರೈತ ವಿರೋಧಿ ಧೋರಣೆ ಮುಂದುವರೆದರೆ ಅಧಿಕಾರದಿಂದಲೇ ದೂರ ಹಾಕುವ…

The post ಕೇಂದ್ರ ಸರ್ಕಾರ ರೈತ ವಿರೋಧಿ ಧೋರಣೆಗಳಿಂದ, ರೈತರನ್ನು ನಾಶ ಮಾಡಲು ಹೊರಟಿದೆ : ಕುರುಬೂರ್ ಶಾಂತಕುಮಾರ್ appeared first on Good News 24x7.

]]>
ಕೇಂದ್ರ ಸರ್ಕಾರ ರೈತ ವಿರೋಧಿ ಧೋರಣೆಗಳಿಂದ, ರೈತರನ್ನು ನಾಶ ಮಾಡಲು ಹೊರಟಿದೆ : ಕುರುಬೂರ್ ಶಾಂತಕುಮಾರ್

ಕೇಂದ್ರ ಸರ್ಕಾರಕ್ಕೆ ದುರ್ಬಲ ಅಧಿಕಾರ ಸಿಕ್ಕಿದರು ರೈತ ವಿರೋಧಿ ಧೋರಣೆಗಳನ್ನೇ ಮುಂದುವರಿಸುತ್ತಿದೆ. ಇದೇ ರೀತಿ ರೈತ ವಿರೋಧಿ ಧೋರಣೆ ಮುಂದುವರೆದರೆ ಅಧಿಕಾರದಿಂದಲೇ ದೂರ ಹಾಕುವ ಸನ್ನಿವೇಶ ನಿರ್ಮಾಣ ಮಾಡಬೇಕಾಗುತ್ತದೆ ಎಂಬುದನ್ನು ಅರಿಯಬೇಕು.
ರೈತರ ಕೃಷಿ ಭೂಮಿ, ಸಾಲ ವಸುಲಾತಿ ನೆಪದಲ್ಲಿ ಭೂಮಿ ಕಿತ್ತುಕೊಳ್ಳುವ ಸರ್ಪ್ರೈಸಿ ಕಾಯ್ದೆ ಜಾರಿಗೆ ತಂದು. ಸಾಲ ಕಟ್ಟದ ರೈತರ ಜಮೀನುಗಳನ್ನು ಬ್ಯಾಂಕುಗಳು ವಶ ಪಡಿಸಿಕೊಳ್ಳುತ್ತಿವೆ ಇಂತಹ ರೈತ ದ್ರೋಹಿ ಕಾನೂನುಗಳ ವಿರುದ್ಧ ಪ್ರಬಲ ಹೋರಾಟ ನಡೆಸಬೇಕಾಗಿದೆ. ಇಲ್ಲದಿದ್ದರೆ ರೈತ ಕುಲವೇ ನಾಶವಾಗುತ್ತದೆ. ಎಂದು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಸಂಘಟನೆಯ ದಕ್ಷಿಣ ಭಾರತ ರಾಜ್ಯಗಳ ಸಂಚಾಲಕ ಕುರುಬೂರು ಶಾಂತಕುಮಾರ್ ಪಾಂಡಿಚೇರಿ ಕಾರಯ್ಕಲ್ ನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡುತ್ತ ತಿಳಿಸಿದರು.

ಇಂದು ನಡೆದ ರಾಷ್ಟ್ರೀಯ ರೈತ ಸಮಾವೇಶದಲ್ಲಿ. ತಮಿಳುನಾಡು ಕರ್ನಾಟಕ ಆಂಧ್ರಪ್ರದೇಶ್. ತೆಲಂಗಾಣ. ಕೇರಳ. ರಾಜ್ಯಗಳ ರೈತ ಮುಖಂಡರು ಭಾಗವಹಿಸಿದ್ದರು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾತರಿ ಕಾನೂನು ಜಾರಿ. ರೈತರ ಸಂಪೂರ್ಣ ಸಾಲಮನ್ನಾ. ಡಾ. ಸ್ವಾಮಿನಾಥನ್ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿ. ಬೆಳೆ ವಿಮೆ ಪದ್ಧತಿ ತಿದ್ದುಪಡಿ ಆಗಬೇಕು. 60 ವರ್ಷ ತುಂಬಿದ ರೈತರಿಗೆ ಪಿಂಚಣಿ ಯೋಜನೆ ಜಾರಿಗೆ ತರಬೇಕು ಎಂಬ ಇನ್ನಿತರ ಒತ್ತಾಯಗಳ ಬಗ್ಗೆ ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟಕ್ಕೆ ಮುಂದಿನ ದಿನಗಳಲ್ಲಿ ಬೆಂಬಲಿಸಿ ಪ್ರಬಲಗೊಳಿಸಲು ಪಾಂಡಿಚೇರಿಯಲ್ಲಿ ದಕ್ಷಿಣ ಭಾರತ ರಾಜ್ಯದ ರೈತ ಮುಖಂಡರು ತೀರ್ಮಾನಿಸಿದರು.

The post ಕೇಂದ್ರ ಸರ್ಕಾರ ರೈತ ವಿರೋಧಿ ಧೋರಣೆಗಳಿಂದ, ರೈತರನ್ನು ನಾಶ ಮಾಡಲು ಹೊರಟಿದೆ : ಕುರುಬೂರ್ ಶಾಂತಕುಮಾರ್ appeared first on Good News 24x7.

]]>
https://www.goodnews24x7.com/kendra-sarkara-raita-virodhi-dhora%e1%b9%87ega%e1%b8%b7inda-raitarannu-nasa-ma%e1%b8%8dalu-hora%e1%b9%adide-kurubur-santakumar-kendra-sarkarakke-durbala-adhikara-sikkidaru-raita-virodhi-dhora/feed/ 0 463