ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂ. ಲಕ್ಷ್ಮಣ್ ಸ್ನೇಹಮಯಿ ಕೃಷ್ಣ ಒಬ್ಬ ಬ್ಲಾಕ್ ಮೇಲರ್ , ರೌಡಿಶೀಟರ್ ಸ್ನೇಹಮಯಿ ಕೃಷ್ಣ ಅವರನ್ನು ಅಡ್ಜಸ್ಟ್ ಮಾಡಿಕೊಳ್ಳಿ ಸರ್ ಅಂತ ಮೆಸೇಜ್ ಮಾಡಿದ್ದರು. ಆ ವ್ಯಕ್ತಿ ಯಾರು ಅಂತ ನಾನು ಹೇಳಲ್ಲ 100 ಕೋಟಿ ಕೊಡಿ ಅಂದರು. ನಾನು ತಪ್ಪೇ ಇಲ್ಲದೇ ನಾವು ಯಾಕೆ ಹಣ ಕೊಡಬೇಕು ಅಂತ ಹೇಳಿದವು. ಈ ಮಾತು ಯಾರು ಹೇಳಿದ್ರು ಅಂತ ನಾನು ಮುಂದಿನ ದಿನಗಳಲ್ಲಿ ಹೇಳುತ್ತೇನೆ. ಸಿಎಂ ಸಿದ್ದರಾಮಯ್ಯ ಕೇಸ್ ನಲ್ಲಿ 100 ಕೋಟಿ ಡೀಲ್ ಗೆ ಬಂದಿದ್ದರು. ಸ್ನೇಹಮಯಿ ಕೃಷ್ಣ ಕಡೆಯವರು ನನ್ನ ಹತ್ತಿರ ಬಂದಿದ್ದರು ಎಂದು ಗಂಭೀರ ಆರೋಪ ಮಾಡಿದರು.
ಸ್ನೇಹಮಹಿಕೃಷ್ಣ ವಿರುದ್ದವೇ ರಾಜ್ಯದಾದ್ಯಂತ 44 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಮೈಸೂರಿನಲ್ಲೇ 17 ಪ್ರಕರಣಗಳು ದಾಖಲಾಗಿವೆ. ಈತನ ವಿರುದ್ಧ ಮೈಸೂರಿನ ಕೆ ಆರ್ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಹಾಕಲಾಗಿದೆ. ಈಗಲೂ ರೌಡಿಶೀಟರ್ ಆಗಿದ್ದಾರೆ. ಸ್ನೇಹಮಯಿ ಕೃಷ್ಣ ವಿರುದ್ದ ಕೊಲೆ, ಬ್ಲಾಕ್ ಮೇಲ್, ಬೆದರಿಕೆ ಸೇರಿದಂತೆ ಇನ್ನಿತರ ಆರೋಪಗಳಡಿ ಪ್ರಕರಣಗಳು ದಾಖಲಾಗಿವೆ. ಸ್ನೇಹಮಯಿಕೃಷ್ಣ ಮನೆ ರೈಡ್ ಮಾಡಿದರೆ ಮುಡಾಗೆ ಸಂಬಂಧಿಸಿದ ದಾಖಲೆಗಳು ಸಿಗುತ್ತವೆ ಎಂದು ಎಂ.ಲಕ್ಷ್ಮಣ್ ಹೇಳಿದರು.