ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಜೊತೆ ಸಂಪರ್ಕ, ಸಾರ್ವಜನಿಕರ ಆಸ್ತಿ ಕಳುವಿಗೆ ಪರೋಕ್ಷ ಸಹಾಯ, ದಾಖಲೆಗಳ ಸೋರಿಕೆ ಮಾಡುವ ಶಂಕೆ ಇವೆಲ್ಲಾ ಆರೋಪಗಳ ಹಿನ್ನಲೆ ಅಮಾನತಾದ ಮೈಸೂರು ಸಿಸಿಬಿ ಘಟಕದ ಮುಖ್ಯಪೇದೆ ಸಲೀಂ ಪಾಷಾಗೆ ಮುಖ್ಯಮಂತ್ರಿ ಪದಕ ಘೋಷಿಸಲಾಗಿದೆ.
ಒಂದು ತಿಂಗಳ ಹಿಂದೆ ಅಮಾನತಾದ ಸಲೀಂ ಪಾಷಾಗೆ ಮುಖ್ಯಮಂತ್ರಿಗಳ ಪದಕದ ಪಟ್ಟಿಯಲ್ಲಿ ಮುಖ್ಯಪೇದೆ ಸಲೀಂ ಪಾಷಾ ಹೆಸರು ಪ್ರಕಟವಾಗಿದ್ದು ಅಚ್ಚರಿಗೆ ಕಾರಣವಾಗಿದೆ. 2023 ನೇ ಸಾಲಿಗೆ ಆಯ್ಕೆಯಾದವರ ಸಿಬ್ಬಂದಿ ಅಧಿಕಾರಿಗಳ ಪಟ್ಟಿಯಲ್ಲಿ ಮುಖ್ಯಪೇದೆ ಸಲಾಂ ಪಾಷಾ ಹೆಸರು ಪ್ರಕಟವಾಗಿದೆ. ಮೇಟಗಳ್ಳಿ ಹಾಗೂ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕನ್ನಕಳುವು ಹಾಗೂ ಗಾಂಜಾ ಪ್ರಕರಣಗಳ ಆರೋಪಿಗಳ ಸಂಭಂಧಿಕರ ಜೊತೆ ಸಂಪರ್ಕ ಇಟ್ಟುಕೊಂಡಿರುವ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದೆ.
ಸಮಾಜಘಾತುಕ ಶಕ್ತಿಗಳ ಜೊತೆ ಕೈಜೋಡಿಸಿ ಸಾರ್ವಜನಿಕರ ಸ್ವತ್ತು ಕಳುವಾಗಲು ಕಾರಣೀಭೂತರಾಗಿರುತ್ತಾರೆ.ಇದರಿಂದಾಗಿ ಮುಂದಿನ ದಿನಗಳಲ್ಲಿ ಇಲಾಖೆಯ ಆಂತರಿಕ ಮತ್ತು ಗುಪ್ತಮಾಹಿತಿಗಳು ಸೋರಿಕೆಯಾಗಿ ಸಾರ್ವಜನಿಕರ ಸ್ವತ್ತುಗಳು ಹೆಚ್ಚು ಹೆಚ್ಚಾಗಿ ಕಾಣೆಯಾಗುವ ಸಾಧ್ಯತೆಗಳು ಇರುವುದಾಗಿ ಕಾರಣ ನೀಡಿ ಸಲೀಂ ಪಾಷಾ ರವರನ್ನ ಸಸ್ಪೆಂಡ್ ಮಾಡಲಾಗಿದೆ. ಹೀಗಿದ್ದೂ ಸಲೀಂ ಪಾಷಾ ಹೆಸರು ಮುಖ್ಯಮಂತ್ರಿಗಳ ಪದಕ ಗಳಿಸುವಲ್ಲಿ ಯಶಸ್ವಿಯಾಗಿರುವುದು ಇಲಾಖಾ ವ್ಯವಸ್ಥೆಯನ್ನ ಅನುಮಾನದಿಂದ ನೋಡುವಂತಾಗಿದೆ.