ನಟ ಕಿಚ್ಚ ಸುದೀಪ್ ಅವರ ತಾಯಿ ಇನ್ನಿಲ್ಲ ಎಂಬ ಸುದ್ದಿ ಕೇಳಿ ರಾಜಕೀಯ ಗಣ್ಯರು ಕೂಡ ಸಂತಾಪ ಸೂಚಿಸಿದ್ದರು. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರು ಕಿಚ್ಚ ಸುದೀಪ್ ಅವರ ತಾಯಿ ನಿಧನದ ಸುದ್ದಿ ಕೇಳಿ ಮರುಗಿದರು. ಹೀಗಾಗಿ ಕಿಚ್ಚ ಸುದೀಪ್ ಅವರಿಗೆ ಅಕ್ಟೋಬರ್ 23ರಂದು ಪ್ರಧಾನಿ ಕಚೇರಿಯಿಂದ ಸಂತಾಪ ಪತ್ರವನ್ನು ಕಳುಹಿಸಿ ಕೊಡಲಾಗಿದೆ. ಇದೇ ವಿಚಾರವನ್ನು ಕಿಚ್ಚ ಸುದೀಪ್ ಅವರು ಟ್ವೀಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ಶ್ರೀ ಪ್ರಧಾನಿ ನರೇಂದ್ರ ಮೋದಿ ಜಿ… ನಿಮ್ಮ ಸಹಾನುಭೂತಿಯ ಸಂತಾಪ ಪತ್ರಕ್ಕಾಗಿ ಪ್ರಾಮಾಣಿಕ ಧನ್ಯವಾದಗಳು. ನಿಮ್ಮ ಚಿಂತನಶೀಲ ಮಾತುಗಳು ಈ ಆಳವಾದ ಕಷ್ಟದ ಸಮಯದಲ್ಲಿ ಸಾಂತ್ವಾನದ ಮೂಲಸೆಲೆಯನ್ನು ನೀಡಿದೆ. ನಿಮ್ಮ ಸಾಂತ್ವಾನವು ನನ್ನ ಹೃದಯ ತಟ್ಟಿದೆ. ನಿಮ್ಮ ವಿಶ್ವಾಸಕ್ಕೆ ನಾನು ಅಭಾರಿ ಅಂತ ಬರೆದುಕೊಂಡಿದ್ದಾರೆ.