ಜ್ಯೂಸ್ ಬಾಟೆಲ್ ಮುಚ್ಚಳ ನುಂಗಿದ ಒಂದೂವರೆ ವರ್ಷದ ಮಗು…
ಜ್ಯೂಸ್ ಬಾಟಲ್ ಮುಚ್ಚಳ ನುಂಗಿ ಒಂದೂವರೆ ವರ್ಷದ ಮಗು ಮೃತಪಟ್ಟಿರುವ ದಾರುಣ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಮನೆಯಲ್ಲಿ ಆಟವಾಡುವ ವೇಳೆ ಮಗುವಿಗೆ ಜ್ಯೂಸ್ ಬಾಟಲ್ ಸಿಕ್ಕಿದೆ. ಅದ್ಹೇಗೋ ಬಾಟಲ್ ಮುಚ್ಚಳ ಬಿಚ್ಚಿ ಬಾಯಿಗೆ ಹಾಕಿಕೊಂಡಿದೆ. ಜ್ಯೂಸ್ ಬಾಟಲ್‌ನ ಮುಚ್ಚಳ ನುಂಗಿದೆ. ಈ ವೇಳೆ ಉಸಿರಾಟದ ತೊಂದರೆಯಿಂದ ಮಗು ಮೃತಪಟ್ಟಿದೆ.
ಅಮಟೆಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹರಗುವಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಶಿಕಾರಿಪುರ ತಾಲೂಕಿನ ಅಮಟೆಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹರಗುವಳ್ಳಿ ಗ್ರಾಮದ ವೇದಮೂರ್ತಿ ಗಂಗಾಧರಯ್ಯ ಶಾಸ್ತ್ರಿ ಎಂಬುವರ ಒಂದೂವರೆ ವರ್ಷದ ಮಗು ಸಾವನ್ನಪ್ಪಿದೆ. ನಿನ್ನೆ ಬುಧವಾರ ಜ್ಯೂಸ್ ಬಾಟಲಿ ಹಿಡಿದುಕೊಂಡು ಮಗು ಆಟವಾಡುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.