ಗ್ರಾಮೀಣ ಮಕ್ಕಳು ಯಾವೂದರಲ್ಲೂ ಕಡಿಮೆ ಇಲ್ಲಾ ಅನ್ನೋದನ್ನ ಮೈಸೂರು ತಾಲೂಕಿನ ಕಾಮನಕೆರೆಹುಂಡಿಯ ಗಿರೀಶ್ ಗೌಡ ಹಾಗೂ ಕವಿತಾ ದಂಪತಿಗಳ ಪುತ್ರಿ ಹಿಮಾ ಸಾಬೀತು ಮಾಡಿದ್ದಾಳೆ. ಇತ್ತೀಚೆಗೆ ನಡೆದ ಅಂತರಾಷ್ಟ್ರೀಯ ಬಾಹ್ಯಾಕಾಶ ದಿನದ ಅಂಗವಾಗಿ ಏರ್ಪಡಿಸಲಾಗಿದ್ದ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಹಿಮಾಳಿಗೆ ಮೊದಲ ಸ್ಥಾನ ಲಭಿಸಿದೆ.
ಸ್ಪರ್ಧೆಯಲ್ಲಿ ತಾಲೂಕಿನ ಪ್ರತಿಷ್ಠಿತ 30 ಕ್ಕೂ ಹೆಚ್ಚು ಶಾಲೆಗಳ ವಿಧ್ಯಾರ್ಥಿಗಳು ಬಾಗವಹಿಸಿದ್ದು ಈ ಶಾಲೆಗಳ ಪೈಕಿ ಗುಡ್ ಶೆಫರ್ಡ್ ಶಾಲೆಯಲ್ಲಿ 7 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಹಿಮಾ ತಾಲೂಕಿಗೆ ಮೊದಲ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾಳೆ
ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತೀಯರು ಮಾಡಿರುವ ಸಾಧನೆಯ ಬಗ್ಗೆ ಸವಿಸ್ತಾರವಾಗಿ ವಿಷಯ ಮಂಡನೆ ಮಾಡಲಾಗಿತ್ತು. ಪದ ಬಳಕೆ, ಬಾಷಾ ಪ್ರಯೋಗ ಹಾಗೂ ಅಂತರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನೆ ಬಗ್ಗೆ ಹಿಮಾ ಹೊಂದಿರುವ ಆಳವಾದ ಜ್ಞಾನಕ್ಕೆ ತೀರ್ಪುಗಾರರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಈಕೆಗೆ ಮೊದಲ ಸ್ಥಾನ ಘೋಷಣೆ ಮಾಡಿದ್ದಾರೆ