ಭಾರೀ ಕುತೂಹಲ ಮೂಡಿಸಿದ್ದ ಐಪಿಎಲ್ ರೀಟೆನ್ (IPL Retention) ಆಟಗಾರರ ಪಟ್ಟಿ ಕೊನೆಗೂ ಹೊರಬಿದ್ದಿದೆ. ಚೆನ್ನೈ ಸೂಪರ್ ಕಿಂಗ್ಸ್ 5 ಸ್ಟಾರ್ ಆಟಗಾರರನ್ನ ತನ್ನಲ್ಲೇ ಉಳಿಸಿಕೊಂಡಿದೆ. IPL 2025ಗೆ ಧೋನಿ ಆಡೋದು ಫಿಕ್ಸ್ ಆಗಿದೆ. CSK ರೀಟೈನ್ ಲಿಸ್ಟ್‌ನಲ್ಲಿ ಧೋನಿ ಜೊತೆಗೆ ಐವರು ಆಟಗಾರರ ಹೆಸರು ಫೈನಲ್ ಆಗಿದೆ.
ರೀಟೆನ್ ಪಟ್ಟಿ ಬಿಡುಗಡೆಗೊಳಿಸಿರುವಚೆನ್ನೈ ಸೂಪರ್ ಕಿಂಗ್ಸ್ ಸ್ಟಾರ್ ಆಟಗಾರರಾದ ಋತುರಾಜ್ ಗಾಯಕ್ವಾಡ್, ರವೀಂದ್ರ ಜಡೇಜಾ, ಮತೀಶ ಪತಿರಣ, ಶಿವಂ ದುಬೆ ಹಾಗೂ ಮಹೇಂದ್ರ ಸಿಂಗ್ ಧೋನಿ ಅವರನ್ನ ರೀಟೆನ್ ಮಾಡಿಕೊಂಡಿದೆ.
ಋತುರಾಜ್ ಗಾಯಕ್ವಾಡ್ – 18 ಕೋಟಿ – ಬ್ಯಾಟ್ಸ್ಮನ್
ರವೀಂದ್ರ ಜಡೇಜಾ – 18 ಕೋಟಿ – ಆಲ್ರೌಂಡರ್
ಶಿವಂ ದುಬೆ – 12 ಕೋಟಿ – ಆಲ್ರೌಂಡರ್
ಮತೀಶ ಪತಿರಣ – 13 ಕೋಟಿ – ಬೌಲರ್
ಮಹೇಂದ್ರ ಸಿಂಗ್ ಧೋನಿ – 4 ಕೋಟಿ – ವಿ.ಕೀ, ಬ್ಯಾಟ್ಸ್ಮನ್