ಬಾಲಿವುಡ್ನ ಜನಪ್ರಿಯ ನಟಿ ದೀಪಿಕಾ ಪಡುಕೋಣೆ ಇಂದು ಬೆಳಿಗ್ಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅವರು ನಿನ್ನೆ ಸಂಜೆ ಮುಂಬೈನ ರಿಲಯನ್ಸ್ ಫೌಂಡೇಶನ್ನ ಆಸ್ಪತ್ರೆಗೆ ದಾಖಲಾಗಿದ್ದರು. ರಣ್ವೀರ್ ಸಿಂಗ್-ದೀಪಿಕಾ 2018 ರಲ್ಲಿ ವಿವಾಹವಾಗಿದ್ದರು. ದೀಪಿಕಾ ಪಡುಕೋಣೆಗೆ ಸೆಪ್ಟೆಂಬರ್ 28 ಗೆ ಹೆರಿಗೆ ದಿನಾಂಕ ನೀಡಲಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಸೆಪ್ಟೆಂಬರ್ 08 ರಂದು ಈ ಜೋಡಿಗೆ ಮಗುವಾಗಿದೆ.
ಇದೇ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಅದರಲ್ಲೂ ಗಣೇಶ ಹಬ್ಬದಲ್ಲೇ ಮಗು ಜನಿಸಿದ್ದ ಇನ್ನೂ ಖುಷಿಯ ವಿಚಾರವೇ ಸರಿ. ಇತ್ತೀಚೆಗಷ್ಟೇ ಮುಂಬೈನ ಸಿದ್ಧಿ ವಿನಾಯಕನ ಮಂದಿರಕ್ಕೆ ಈ ಜೋಡಿ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡಿತ್ತು. ತಮ್ಮ ಬಾಳಿನ ಹೊಸ ಅಧ್ಯಾಯ ಶುರುವಾಗುವುದಕ್ಕೂ ಮುನ್ನವೇ ಸಿದ್ಧಿ ವಿನಾಯಕನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ, ಎಲ್ಲವೂ ನಿರ್ವಿಘ್ನವಾಗಿ ಸಾಗಲಿ ಎಂದು ಬೇಡಿಕೊಂಡಿದ್ದರು. ಇದಾದ ಬಳಿಕವೇ ದೀಪಿಕಾ ಪಡುಕೋಣೆಗೆ ಹೆಣ್ಣು ಮಗು ಜನನವಾಗಿದೆ.