NEW YEAR Archives - Good News 24x7 https://www.goodnews24x7.com/category/new-year/ Kannada Sun, 05 Jan 2025 05:10:10 +0000 en-US hourly 1 https://wordpress.org/?v=6.7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg NEW YEAR Archives - Good News 24x7 https://www.goodnews24x7.com/category/new-year/ 32 32 ಕುಡಿದ ಮತ್ತಿನಲ್ಲಿ ಪತಿಗೆ ಆ್ಯ*ಡ್ ಎರಚಿದ ಪತ್ನಿ; ನೊಂದ ಪತಿ ಪೊಲೀಸರಿಗೆ ದೂರು. https://www.goodnews24x7.com/%e0%b2%95%e0%b3%81%e0%b2%a1%e0%b2%bf%e0%b2%a6-%e0%b2%ae%e0%b2%a4%e0%b3%8d%e0%b2%a4%e0%b2%bf%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%aa%e0%b2%a4%e0%b2%bf%e0%b2%97%e0%b3%86-%e0%b2%86/ https://www.goodnews24x7.com/%e0%b2%95%e0%b3%81%e0%b2%a1%e0%b2%bf%e0%b2%a6-%e0%b2%ae%e0%b2%a4%e0%b3%8d%e0%b2%a4%e0%b2%bf%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%aa%e0%b2%a4%e0%b2%bf%e0%b2%97%e0%b3%86-%e0%b2%86/#respond Sun, 05 Jan 2025 05:10:10 +0000 https://www.goodnews24x7.com/?p=1578 ಭೋಪಾಲ್ :- ಕುಡಿದ ಅಮಲಿನಲ್ಲಿ ಗಂಡ ಹೆಂಡತಿಗೆ ಹೊಡೆಯುವುದು, ಗಂಡ ದಿನವೂ ಕುಡಿದು ಬಂದು ಹೊಡೆಯುತ್ತಾನೆ ಎಂದು ಹೆಂಡತಿ ಪೊಲೀಸರಿಗೆ ದೂರು ನೀಡುವುದು ಸಾಮಾನ್ಯ. ಆದರೆ, ಇಲ್ಲೊಬ್ಬಳು ಮಹಿಳೆ ತಾನೇ ಕಂಠಪೂರ್ತಿ ಕುಡಿದು ಗಂಡನಿಗೆ ಇನ್ನಿಲ್ಲದಷ್ಟು ಹಿಂಸೆ ನೀಡಿದ್ದಾಳೆ. ಕುಡುಕಿ ಹೆಂಡತಿಯ…

The post ಕುಡಿದ ಮತ್ತಿನಲ್ಲಿ ಪತಿಗೆ ಆ್ಯ*ಡ್ ಎರಚಿದ ಪತ್ನಿ; ನೊಂದ ಪತಿ ಪೊಲೀಸರಿಗೆ ದೂರು. appeared first on Good News 24x7.

]]>
ಭೋಪಾಲ್ :- ಕುಡಿದ ಅಮಲಿನಲ್ಲಿ ಗಂಡ ಹೆಂಡತಿಗೆ ಹೊಡೆಯುವುದು, ಗಂಡ ದಿನವೂ ಕುಡಿದು ಬಂದು ಹೊಡೆಯುತ್ತಾನೆ ಎಂದು ಹೆಂಡತಿ ಪೊಲೀಸರಿಗೆ ದೂರು ನೀಡುವುದು ಸಾಮಾನ್ಯ. ಆದರೆ, ಇಲ್ಲೊಬ್ಬಳು ಮಹಿಳೆ ತಾನೇ ಕಂಠಪೂರ್ತಿ ಕುಡಿದು ಗಂಡನಿಗೆ ಇನ್ನಿಲ್ಲದಷ್ಟು ಹಿಂಸೆ ನೀಡಿದ್ದಾಳೆ. ಕುಡುಕಿ ಹೆಂಡತಿಯ ಕಾಟ ತಾಳಲಾರದೆ ನೊಂದ ಪತಿ ಪೊಲೀಸರ ಮೊರೆ ಹೋಗಿದ್ದಾರೆ. ಮಧ್ಯಪ್ರದೇಶದ ಭೋಪಾಲ್ ನಗರದ ವಿಶ್ವಕರ್ಮ ನಗರದಲ್ಲಿ 45 ವರ್ಷದ ಮಹಿಳೆಯೊಬ್ಬರು 61 ವರ್ಷದ ತನ್ನ ಪತಿ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಆ ಮಹಿಳೆ ತನ್ನ ಪತಿಯನ್ನು ಸುಮಾರು 12 ಸ್ಥಳಗಳಲ್ಲಿ ಕಚ್ಚಿ ಗಾಯಗೊಳಿಸಿದ್ದು, ತನ್ನ ಉಗುರುಗಳಿಂದ ಪರಚಿ ಹಿಂಸಿಸಿದ್ದಾರೆ. ಅಷ್ಟೇ ಅಲ್ಲದೆ ಅವನ ಮೇಲೆ ಆಸಿಡ್ ಕೂಡ ಎರಚಿದ್ದಾರೆ. ಆಸಿಡ್ ಆತನಿಗೆ ತಾಗದಿದ್ದರೂ, ಅವರ ಬಟ್ಟೆಗಳಿಗೆ ಆ್ಯಸಿಡ್ ತಾಗಿ ಹಾಳಾಗಿದೆ. ಪೊಲೀಸರು ಆ ಮಹಿಳೆಯನ್ನು ಬಂಧಿಸಿದ್ದಾರೆ. ಹಲ್ಲೆ ಹಾಗೂ ಆಸಿಡ್ ದಾಳಿ ಯತ್ನ ಪ್ರಕರಣ ದಾಖಲಾಗಿದೆ.
ವಿಶ್ವಕರ್ಮ ನಗರದಲ್ಲಿ ವಾಸವಾಗಿರುವ ಟ್ರಕ್ ಚಾಲಕ 61 ವರ್ಷದ ನಾರಾಯಣ ಲೋಧಿ ತನ್ನ ಎರಡನೇ ಪತ್ನಿ 45 ವರ್ಷದ ದುರ್ಗಾ ಲೋಧಿಯೊಂದಿಗೆ ವಾಸವಾಗಿದ್ದರು. ದುರ್ಗಾಗೆ ಮೊದಲ ಗಂಡನಿಂದ 12 ಮತ್ತು 14 ವರ್ಷದ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ನಾರಾಯಣ ತಮ್ಮ ವೃತ್ತಿಯ ಕಾರಣದಿಂದ ವಾರಕ್ಕೆ ಒಂದು ಅಥವಾ ಎರಡು ಬಾರಿ ಮಾತ್ರ ಮನೆಗೆ ಬರುತ್ತಿದ್ದರು.
ಮನೆಯಲ್ಲಿ ಕೆಲವು ವಸ್ತುಗಳು ಕಾಣೆಯಾಗಿರುವ ಬಗ್ಗೆ ಅವರು ಪತ್ನಿಯೊಂದಿಗೆ ಜಗಳವಾಡಿದ್ದಾರೆ. ವಾಗ್ವಾದ ಎಷ್ಟರಮಟ್ಟಿಗೆ ಏರಿತೆಂದರೆ, ಮದ್ಯವ್ಯಸನಿಯಾಗಿದ್ದ ದುರ್ಗಾ ಆತನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿ, ಹಲವೆಡೆ ಕಚ್ಚಿ, ಪರಚಿದ್ದಾರೆ. ನಾರಾಯಣ ಓಡಿಹೋಗಲು ಯತ್ನಿಸಿದ್ದು, ದುರ್ಗಾ ಆತನ ಮೇಲೆ ಆಸಿಡ್ ಎರಚಿದ್ದಾಳೆ. ಅದೃಷ್ಟವಶಾತ್ ಆ್ಯಸಿಡ್ ನಾರಾಯಣ ಅವರ ಮೈಮೇಲೆ ಬೀಳದೆ ಬಟ್ಟೆ ಮೇಲೆ ಬಿದ್ದಿದೆ. ಇದರಿಂದ ಅವರ ಬಟ್ಟೆ ಸ್ವಲ್ಪ ಸುಟ್ಟಿದೆ.

ದುರ್ಗಾಗೆ ಕುಡಿತದ ಚಟವಿದೆ ಎಂದು ನಾರಾಯಣ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಈ ಹಿಂದೆಯೂ ಹಲವು ಬಾರಿ ಆಕೆ ತನ್ನ ಮೇಲೆ ಹಲ್ಲೆ ನಡೆಸಿದ್ದಾಳೆ ಎಂದಿದ್ದಾರೆ. ದುರ್ಗಾ ವಿರುದ್ಧ ಹಲ್ಲೆ ಹಾಗೂ ಆಸಿಡ್ ದಾಳಿ ಯತ್ನ ಪ್ರಕರಣ ದಾಖಲಾಗಿದೆ. ಹೀಗಾಗಿ, ಆಕೆಯನ್ನು ಬಂಧಿಸಲಾಗಿದೆ. ಈ ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

The post ಕುಡಿದ ಮತ್ತಿನಲ್ಲಿ ಪತಿಗೆ ಆ್ಯ*ಡ್ ಎರಚಿದ ಪತ್ನಿ; ನೊಂದ ಪತಿ ಪೊಲೀಸರಿಗೆ ದೂರು. appeared first on Good News 24x7.

]]>
https://www.goodnews24x7.com/%e0%b2%95%e0%b3%81%e0%b2%a1%e0%b2%bf%e0%b2%a6-%e0%b2%ae%e0%b2%a4%e0%b3%8d%e0%b2%a4%e0%b2%bf%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%aa%e0%b2%a4%e0%b2%bf%e0%b2%97%e0%b3%86-%e0%b2%86/feed/ 0 1578
ರಣವೀರ್ ಸಿಂಗ್ ಕನ್ನಡದಲ್ಲಿ ದೀಪಿಕಾಗೆ ಪ್ರಪೋಸ್ ! https://www.goodnews24x7.com/%e0%b2%b0%e0%b2%a3%e0%b2%b5%e0%b3%80%e0%b2%b0%e0%b3%8d-%e0%b2%b8%e0%b2%bf%e0%b2%82%e0%b2%97%e0%b3%8d-%e0%b2%95%e0%b2%a8%e0%b3%8d%e0%b2%a8%e0%b2%a1%e0%b2%a6%e0%b2%b2%e0%b3%8d%e0%b2%b2%e0%b2%bf/ https://www.goodnews24x7.com/%e0%b2%b0%e0%b2%a3%e0%b2%b5%e0%b3%80%e0%b2%b0%e0%b3%8d-%e0%b2%b8%e0%b2%bf%e0%b2%82%e0%b2%97%e0%b3%8d-%e0%b2%95%e0%b2%a8%e0%b3%8d%e0%b2%a8%e0%b2%a1%e0%b2%a6%e0%b2%b2%e0%b3%8d%e0%b2%b2%e0%b2%bf/#respond Sun, 05 Jan 2025 04:36:38 +0000 https://www.goodnews24x7.com/?p=1573 ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರ ಪ್ರೇಮಕಥೆ, ವಿವಾಹ ಮತ್ತು ಮಗುವಿನ ಬಗ್ಗೆ ಈ ಸ್ಟೋರಿಯಲ್ಲಿ ಚರ್ಚೆ ಆಗುತ್ತಿದೆ. ರಣವೀರ್ ಅವರು ದೀಪಿಕಾಗೆ ಕನ್ನಡದಲ್ಲಿ ಪ್ರಪೋಸ್ ಮಾಡಿದ ವಿಡಿಯೋ ವೈರಲ್ ಆಗಿದೆ. ಅವರ ಪ್ರೀತಿಯ ಆರಂಭ, ಮದುವೆ ಮತ್ತು ಈಗ…

The post ರಣವೀರ್ ಸಿಂಗ್ ಕನ್ನಡದಲ್ಲಿ ದೀಪಿಕಾಗೆ ಪ್ರಪೋಸ್ ! appeared first on Good News 24x7.

]]>
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರ ಪ್ರೇಮಕಥೆ, ವಿವಾಹ ಮತ್ತು ಮಗುವಿನ ಬಗ್ಗೆ ಈ ಸ್ಟೋರಿಯಲ್ಲಿ ಚರ್ಚೆ ಆಗುತ್ತಿದೆ. ರಣವೀರ್ ಅವರು ದೀಪಿಕಾಗೆ ಕನ್ನಡದಲ್ಲಿ ಪ್ರಪೋಸ್ ಮಾಡಿದ ವಿಡಿಯೋ ವೈರಲ್ ಆಗಿದೆ. ಅವರ ಪ್ರೀತಿಯ ಆರಂಭ, ಮದುವೆ ಮತ್ತು ಈಗ ಮಗುವಿನ ಜನ್ಮದ ಸಂತೋಷದ ಕುರಿತು ವಿವರಗಳಿವೆ. ದೀಪಿಕಾ ಅವರ ಜನ್ಮದಿನದ ಸಂದರ್ಭದಲ್ಲಿ ಈ ವಿಡಿಯೋಗಳು ಮತ್ತೆ ವೈರಲ್ ಆಗಿವೆ.
ದೀಪಿಕಾ ಹಾಗೂ ರಣವೀರ್ ಪ್ರೀತಿಸಿ ವಿವಾಹ ಆದವರು. ಒಂದೇ ಸಿನಿಮಾದಲ್ಲಿ ನಟಿಸಿದ ಇವರಿಗೆ ಸೆಟ್ನಲ್ಲೇ ಪ್ರೀತಿ ಮೂಡಿತು. ರಣವೀರ್ ಸಿಂಗ್ ಹಾಗೂ ದೀಪಿಕಾ ಈಗ ಪಾಲಕರೂ ಹೌದು. ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ದೀಪಿಕಾ ಕಳೆದ ವರ್ಷ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ರಣವೀರ್ ಹಾಗೂ ದೀಪಿಕಾ ಪ್ರೀತಿ ಶುರುವಾಗಿದ್ದು ದಶಕಗಳ ಹಿಂದೆ. ಈಗ ಇಬ್ಬರೂ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ದೀಪಿಕಾ ಪಡುಕೋಣೆ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಈ ವೇಳೆ ಅವರ ಹಳೆಯ ವಿಡಿಯೋಗಳು ವೈರಲ್ ಆಗುತ್ತಿವೆ.
ದೀಪಿಕಾ ಪಡುಕೋಣೆ ಅವರು ಕರ್ನಾಟಕದವರು. ಅವರಿಗೆ ಕನ್ನಡ ಬರುತ್ತದೆ. ಬೆಂಗಳೂರಲ್ಲಿ ದೀಪಿಕಾ ಶಿಕ್ಷಣ ಪಡೆದಿದ್ದರು. ಅವರು ನಟಿಸಿದ ಮೊದಲ ಸಿನಿಮಾ ‘ಐಶ್ವರ್ಯಾ’ ಕನ್ನಡದ್ದು. ಅವರಿಗೆ ಕನ್ನಡದ ಬಗ್ಗೆ ವಿಶೇಷ ಪ್ರೀತಿ ಇದೆ. ರಣವೀರ್ ಸಿಂಗ್ ಅವರದ್ದು ಪಂಜಾಬಿ ಕುಟುಂಬ. ಅವರು ಕೆಲವೊಮ್ಮೆ ಬೆಂಗಳೂರಿಗೆ ಬಂದ ಉದಾಹರಣೆ ಇದೆ. ಅವರಿಗೆ ಕನ್ನಡದ ಬರುವುದಿಲ್ಲ. ಅವರು ಈ ಮೊದಲು ಕನ್ನಡದಲ್ಲಿ ದೀಪಿಕಾಗೆ ಪ್ರಪೋಸ್ ಮಾಡಿದ್ದರು ಅನ್ನೋದು ವಿಶೇಷ.
ರಣವೀರ್ ಸಿಂಗ್ ಅವರು ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಾ ಇರುತ್ತಾರೆ. ಅದೇ ರೀತಿ ಅವರು ಅವಾರ್ಡ್ ಕಾರ್ಯಕ್ರಮಕ್ಕೆ ತೆರಳಿದ್ದರು. ಅಲ್ಲಿ ಯಶ್ ಸೇರಿದಂತೆ ಅನೇಕರು ಇದ್ದರು. ಈ ವೇಳೆ ಅವರ ಜೊತೆ ಇದ್ದಿದ್ದು, ಕನ್ನಡದ ಅಕುಲ್ ಬಾಲಾಜಿ. ಅವರು ಕನ್ನಡದ ಹಲವು ಶೋಗಳನ್ನು ನಡೆಸಿಕೊಟ್ಟಿದ್ದಾರೆ. ಆ ಶೋನ ಅಕುಲ್ ನಡೆಸಿಕೊಡುತ್ತಾ ಇದ್ದರು. ಈ ವೇಳೆ ರಣವೀರ್ ಸಿಂಗ್ಗೆ ಕನ್ನಡದಲ್ಲಿ ಪ್ರಪೋಸ್ ಮಾಡೋದನ್ನು ಹೇಗೆ ಎಂದು ಹೇಳಿಕೊಟ್ಟರು ಅಕುಲ್.
‘ದೀಪಿಕಾ, ಓ ನನ್ನ ದೀಪಿಕಾ’ ಎಂದರು ಅಕುಲ್. ರಣವೀರ್ ಸಿಂಗ್ಗೆ ತಪ್ಪಾಗಿ ಏನಾದರೂ ಹೇಳಿಕೊಟ್ಟರೆ ಎಂಬ ಭಯ ಅತಿಯಾಗಿ ಕಾಡಿತ್ತು. ಈ ಕಾರಣದಿಂದಲೇ ‘ನನಗೆ ಮನೆಗೆ ಹೋಗಬೇಕು, ನಾನು ಇದನ್ನು’ ಎಂದರು ರಣವೀರ್ ಸಿಂಗ್. ಆಗ, ಅಕುಲ್ ಅವರು ತಪ್ಪಾಗಿ ಏನನ್ನೂ ಹೇಳಿಕೊಡಲ್ಲ ಎಂದು ಪ್ರಾಮಿಸ್ ಮಾಡಿದರು. ಆ ಬಳಿಕ ‘ದೀಪಿಕಾ, ಓ ನನ್ನ ದೀಪಿಕಾ, ನೀನೆ ನನ್ನ ಜೀವನದ ದೀಪ’ ಎಂದು ಅಕುಲ್ ಹೇಳಿಕೊಟ್ಟರು. ದೀಪ ಎನ್ನುತ್ತಿದ್ದಂತೆ ‘ಯು ಆರ್ ದಿ ಲೈಟ್ ಆಫ್ ಮೈ ಲೈಫ್’ ಎಂದರು
ರಣವೀರ್ ಸಿಂಗ್ ..

The post ರಣವೀರ್ ಸಿಂಗ್ ಕನ್ನಡದಲ್ಲಿ ದೀಪಿಕಾಗೆ ಪ್ರಪೋಸ್ ! appeared first on Good News 24x7.

]]>
https://www.goodnews24x7.com/%e0%b2%b0%e0%b2%a3%e0%b2%b5%e0%b3%80%e0%b2%b0%e0%b3%8d-%e0%b2%b8%e0%b2%bf%e0%b2%82%e0%b2%97%e0%b3%8d-%e0%b2%95%e0%b2%a8%e0%b3%8d%e0%b2%a8%e0%b2%a1%e0%b2%a6%e0%b2%b2%e0%b3%8d%e0%b2%b2%e0%b2%bf/feed/ 0 1573
ಕೆಜಿಗಟ್ಟಲೇ ಬಂಗಾರ ಧರಿಸಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಭಕ್ತ! https://www.goodnews24x7.com/%e0%b2%95%e0%b3%86%e0%b2%9c%e0%b2%bf%e0%b2%97%e0%b2%9f%e0%b3%8d%e0%b2%9f%e0%b2%b2%e0%b3%87-%e0%b2%ac%e0%b2%82%e0%b2%97%e0%b2%be%e0%b2%b0-%e0%b2%a7%e0%b2%b0%e0%b2%bf%e0%b2%b8%e0%b2%bf-%e0%b2%a4/ https://www.goodnews24x7.com/%e0%b2%95%e0%b3%86%e0%b2%9c%e0%b2%bf%e0%b2%97%e0%b2%9f%e0%b3%8d%e0%b2%9f%e0%b2%b2%e0%b3%87-%e0%b2%ac%e0%b2%82%e0%b2%97%e0%b2%be%e0%b2%b0-%e0%b2%a7%e0%b2%b0%e0%b2%bf%e0%b2%b8%e0%b2%bf-%e0%b2%a4/#respond Sat, 04 Jan 2025 12:49:44 +0000 https://www.goodnews24x7.com/?p=1565 ಹೊಸ ವರ್ಷದ ಮೊದಲ ದಿನದಂದು ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ತಿರುಮಲಕ್ಕೆ ಭೇಟಿ ನೀಡಿದ್ದ ವ್ಯಕ್ತಿಯೊಬ್ಬರು ಎಲ್ಲರನ್ನು ತಮ್ಮತ್ತ ಸೆಳೆದರು. ಬೆಟ್ಟದ ಮೇಲಿದ್ದ ಭಕ್ತಾದಿಗಳೆಲ್ಲ ಆ ವ್ಯಕ್ತಿಯನ್ನು ನೋಡಿ ಆಶ್ಚರ್ಯಪಟ್ಟರು. ಆತ ಬೇರೆ ಯಾರೂ ಅಲ್ಲ, ತೆಲಂಗಾಣದ ಚಿನ್ನದ ಮನುಷ್ಯ ಎಂದೇ ಖ್ಯಾತರಾಗಿರುವ…

The post ಕೆಜಿಗಟ್ಟಲೇ ಬಂಗಾರ ಧರಿಸಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಭಕ್ತ! appeared first on Good News 24x7.

]]>
ಹೊಸ ವರ್ಷದ ಮೊದಲ ದಿನದಂದು ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ತಿರುಮಲಕ್ಕೆ ಭೇಟಿ ನೀಡಿದ್ದ ವ್ಯಕ್ತಿಯೊಬ್ಬರು ಎಲ್ಲರನ್ನು ತಮ್ಮತ್ತ ಸೆಳೆದರು. ಬೆಟ್ಟದ ಮೇಲಿದ್ದ ಭಕ್ತಾದಿಗಳೆಲ್ಲ ಆ ವ್ಯಕ್ತಿಯನ್ನು ನೋಡಿ ಆಶ್ಚರ್ಯಪಟ್ಟರು. ಆತ ಬೇರೆ ಯಾರೂ ಅಲ್ಲ, ತೆಲಂಗಾಣದ ಚಿನ್ನದ ಮನುಷ್ಯ ಎಂದೇ ಖ್ಯಾತರಾಗಿರುವ ಹೋಪ್ ಫೌಂಡೇಶನ್ ಮುಖ್ಯಸ್ಥ ವಿಜಯ್ ಕುಮಾರ್.

ಹೊಸ ವರ್ಷದ ಪ್ರಯುಕ್ತ ವಿಜಯ್ ಕುಮಾರ್ ಅವರು ತಮ್ಮ ದೇಹದ ಮೇಲೆ 5 ಕೆಜಿ ಚಿನ್ನವನ್ನು ಧರಿಸಿ ಬಂದು ತಿಮ್ಮಪ್ಪನ ದರ್ಶನ ಪಡೆದರು. ಎರಡೂ ಕೈ ಬೆರಳುಗಳಲ್ಲಿ ಉಂಗುರಗಳು, ಎರಡೂ ಕೈಗಳಲ್ಲಿ ಭಾರವಾದ ಬಳೆಗಳು, ಚಿನ್ನದ ಗಡಿಯಾರಗಳು ಮತ್ತು ಅವನ ಕುತ್ತಿಗೆಯ ಸುತ್ತ ಭಾರವಾದ ಚಿನ್ನದ ಆಭರಣಗಳನ್ನು ಧರಿಸಿದ್ದರು ಈ ವೇಳೆ ವಿಜಯ್ ಕುಮಾರ್ ಅವರೊಂದಿಗೆ ಸೆಲ್ಪಿ ತೆಗೆದುಕೊಳ್ಳಲು ಭಕ್ತರು ಮುಗಿಬಿದ್ದರು.
ಇದೇ ಸಂದರ್ಭದಲ್ಲಿ ಮಾತನಾಡಿದ ವಿಜಯ್ ಕುಮಾರ್, ಕಳೆದ ಮೂರು ವರ್ಷಗಳಿಂದ ಕುಟುಂಬ ಸದಸ್ಯರು ಹಾಗೂ ಹೋಪ್ ಫೌಂಡೇಶನ್ ಸದಸ್ಯರೊಂದಿಗೆ ದೇವರ ದರ್ಶನ ಮಾಡುತ್ತಿದ್ದೇನೆ ಎಂದು ತಿಳಿಸಿದರು. ಈ ಹಿಂದೆ ವಿಜಯ್ ಕುಮಾರ್ ಸುಮಾರು 10 ಕೆಜಿ ಚಿನ್ನಾಭರಣ ಧರಿಸಿ ದೇವರ ದರ್ಶನ ಪಡೆದಿದ್ದರು. ಇದೀಗ 5 ಕೆಜಿ ಚಿನ್ನಾಭರಣ ಧರಿಸಿ ದರ್ಶನ ಪಡೆದಿದ್ದಾರೆ. ಇದರ ಬೆಲೆ ಸುಮಾರು 3.5 ಕೋಟಿ ರೂಪಾಯಿಗೂ ಅಧಿಕವಾಗಿದೆ.

ಬಂಗಾರದ ಮೇಲಿರುವ ತಮ್ಮ ಅತಿಯಾದ ಆಸಕ್ತಿಯಿಂದಾಗಿ ಬೃಹತ್ ಆಭರಣಗಳನ್ನು ಮಾಡಿಸಿಕೊಂಡಿದ್ದೇನೆಂದು ವಿಜಯ್ ಕುಮಾ‌ರ್ ಹೇಳಿದರು. ಅಂದಹಾಗೆ ವಿಜಯ್ ಕುಮಾರ್ ಅವರು ತೆಲಂಗಾಣ ಒಲಿಂಪಿಕ್ ಅಸೋಸಿಯೇಷನ್‌ನ ‘ಜಂಟಿ ಕಾರ್ಯದರ್ಶಿಯೂ ಆಗಿದ್ದಾರೆ.
ಮೈಮೇಲೆ ಚಿನ್ನವನ್ನು ಹೊದ್ದುಕೊಂಡು ತಿರುಮಲಕ್ಕೆ ಬಂದಿದ್ದ ವಿಜಯ್ ಕುಮಾರ್ ಅವರನ್ನು ನೋಡಿ ಭಕ್ತರು ಆಶ್ಚರ್ಯಚಕಿತರಾದರು. ಸಾಮಾನ್ಯವಾಗಿ, ಒಬ್ಬ ವ್ಯಕ್ತಿ ಒಂದು ಅಥವಾ ಎರಡು ಚಿನ್ನದ ಸರಗಳನ್ನು ಧರಿಸಲು ಭಯಪಡುತ್ತಾರೆ. ಆದರೆ, ಒಂದೇ ಬಾರಿಗೆ 5 ಕೆಜಿ ಚಿನ್ನ ಧರಿಸುವುದು ಸಾಮಾನ್ಯ ಸಂಗತಿಯಲ್ಲ ಎನ್ನುತ್ತಾರೆ ಭಕ್ತರು. ಚಿನ್ನದ ದರದ ಬಗ್ಗೆ ನಿಮಗೆಲ್ಲ ವಿಶೇಷವಾಗಿ ಹೇಳಬೇಕಿಲ್ಲ ಒಂದು ಗ್ರಾಂ ಚಿನ್ನ ಖರೀದಿಸಲು ಚಿಂತಿಸಬೇಕಾದ ಪರಿಸ್ಥಿತಿ ಇದೆ. ಇದೀಗ ವಿಜಯ್ ಕುಮಾರ್ ಒಂದೇ ಬಾರಿಗೆ 5 ಕೆಜಿ ಚಿನ್ನಾಭರಣ ಧರಿಸಿರುವುದು ಅಚ್ಚರಿ ಮೂಡಿಸಿದೆ ಎನ್ನುತ್ತಾರೆ ಭಕ್ತರು

The post ಕೆಜಿಗಟ್ಟಲೇ ಬಂಗಾರ ಧರಿಸಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಭಕ್ತ! appeared first on Good News 24x7.

]]>
https://www.goodnews24x7.com/%e0%b2%95%e0%b3%86%e0%b2%9c%e0%b2%bf%e0%b2%97%e0%b2%9f%e0%b3%8d%e0%b2%9f%e0%b2%b2%e0%b3%87-%e0%b2%ac%e0%b2%82%e0%b2%97%e0%b2%be%e0%b2%b0-%e0%b2%a7%e0%b2%b0%e0%b2%bf%e0%b2%b8%e0%b2%bf-%e0%b2%a4/feed/ 0 1565
5 ಸಾವಿರ ರೂಪಾಯಿ ನೋಟಿನ ಬಗ್ಗೆ RBI ಹೇಳಿದ್ದಿಷ್ಟು ! https://www.goodnews24x7.com/5-%e0%b2%b8%e0%b2%be%e0%b2%b5%e0%b2%bf%e0%b2%b0-%e0%b2%b0%e0%b3%82%e0%b2%aa%e0%b2%be%e0%b2%af%e0%b2%bf-%e0%b2%a8%e0%b3%8b%e0%b2%9f%e0%b2%bf%e0%b2%a8-%e0%b2%ac%e0%b2%97%e0%b3%8d%e0%b2%97%e0%b3%86-rbi/ https://www.goodnews24x7.com/5-%e0%b2%b8%e0%b2%be%e0%b2%b5%e0%b2%bf%e0%b2%b0-%e0%b2%b0%e0%b3%82%e0%b2%aa%e0%b2%be%e0%b2%af%e0%b2%bf-%e0%b2%a8%e0%b3%8b%e0%b2%9f%e0%b2%bf%e0%b2%a8-%e0%b2%ac%e0%b2%97%e0%b3%8d%e0%b2%97%e0%b3%86-rbi/#respond Sat, 04 Jan 2025 11:09:28 +0000 https://www.goodnews24x7.com/?p=1546 5000 ರೂಪಾಯಿ ನೋಟು ಚಲಾವಣೆಗೆ ಬರ್ತಿದೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿರೋ ಸುದ್ದಿಗೆ RBI ಸ್ಪಷ್ಟ ಉತ್ತರ ಕೊಟ್ಟಿದೆ. 2 ಸಾವಿರ ರೂಪಾಯಿ ನೋಟುಗಳನ್ನ ವಾಪಸ್ ಪಡೆದ ಹಿನ್ನೆಲೆಯಲ್ಲಿ ಈ ಸುದ್ದಿ ವೈರಲ್ ಆಗ್ತಿದೆ. ಇದರ ಬಗ್ಗೆ RBI ಸ್ಪಷ್ಟನೆ ನೀಡಿದೆ.…

The post 5 ಸಾವಿರ ರೂಪಾಯಿ ನೋಟಿನ ಬಗ್ಗೆ RBI ಹೇಳಿದ್ದಿಷ್ಟು ! appeared first on Good News 24x7.

]]>
5000 ರೂಪಾಯಿ ನೋಟು ಚಲಾವಣೆಗೆ ಬರ್ತಿದೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿರೋ ಸುದ್ದಿಗೆ RBI ಸ್ಪಷ್ಟ ಉತ್ತರ ಕೊಟ್ಟಿದೆ. 2 ಸಾವಿರ ರೂಪಾಯಿ ನೋಟುಗಳನ್ನ ವಾಪಸ್ ಪಡೆದ ಹಿನ್ನೆಲೆಯಲ್ಲಿ ಈ ಸುದ್ದಿ ವೈರಲ್ ಆಗ್ತಿದೆ. ಇದರ ಬಗ್ಗೆ RBI ಸ್ಪಷ್ಟನೆ ನೀಡಿದೆ.
₹2000ನೋಟುಗಳನ್ನು ಹಿಂಪಡೆಯಲಾಗಿರುವುದರಿಂದ ದೊಡ್ಡ ಮೌಲ್ಯದ ನೋಟು ಚಲಾವಣೆಯಲ್ಲಿಲ್ಲ. ಈಗ ಭಾರತದಲ್ಲಿ ಅತಿ ದೊಡ್ಡ ನೋಟು ₹500. ಹಾಗಾಗಿ RBI ₹5000ನೋಟು ತರುತ್ತೆ ಅನ್ನೋ ಸುದ್ದಿ ಹಬ್ಬಿದೆ.
ಅಧಿಕ ಮೌಲ್ಯದ ನೋಟುಗಳು ಭಾರತಕ್ಕೆ ಹೊಸದಲ್ಲ. 1947ರಲ್ಲಿ ಸ್ವಾತಂತ್ರ್ಯ ಬಂದ ನಂತರ ₹5000ಮತ್ತು ₹10 ಸಾವಿರ ರೂಪಾಯಿ ನೋಟುಗಳು ಚಲಾವಣೆಯಲ್ಲಿದ್ದವು. 1954ರಲ್ಲಿ ₹5000ನೋಟು ಬಂತು. 1978ರಲ್ಲಿ ಮೊರಾರ್ಜಿ ದೇಸಾಯಿ ಸರ್ಕಾರ ದೊಡ್ಡ ನೋಟುಗಳನ್ನು ರದ್ದು ಮಾಡಿದಾಗ ₹1000, ₹5000, ₹10000 ನೋಟುಗಳು ರದ್ದಾದವು. ಅದಕ್ಕೂ ಮೊದಲು ಸುಮಾರು 24 ವರ್ಷಗಳ ಕಾಲ ದೊಡ್ಡ ನೋಟುಗಳು ಚಲಾವಣೆಯಲ್ಲಿದ್ದವು.
ಇದರ ಬಗ್ಗೆ RBI ಒಂದು ಹೇಳಿಕೆ ನೀಡಿದೆ. ಹೊಸದಾಗಿ ಹಸಿರು ಬಣ್ಣದ ₹5000 ನೋಟು ಬಿಡುಗಡೆ ಮಾಡ್ತಾರೆ ಅನ್ನೋದು ಕೇವಲ ವದಂತಿ ಅಂತ RBI ಸ್ಪಷ್ಟಪಡಿಸಿದೆ. ಇದನ್ನ ಯಾರೂ ನಂಬಬಾರದು ಅಂತ ಕೇಳಿಕೊಂಡಿದೆ. ಈ ವದಂತಿಗಳಲ್ಲಿ ಯಾವುದೇ ಹುರುಳಿಲ್ಲ ಅಂತ RBI ಗವರ್ನರ್ ಕೂಡ ಸ್ಪಷ್ಟಪಡಿಸಿದ್ದಾರೆ. RBI ಕೇವಲ ₹2000 ನೋಟುಗಳನ್ನು ಮಾತ್ರ ವಾಪಸ್ ಪಡೆದಿದೆ. ಹಾಗಾಗಿ ಹಸಿರು ಬಣ್ಣದ ₹5000 ನೋಟು ಬಿಡುಗಡೆ ಆಗುತ್ತೆ ಅನ್ನೋ ಸುಳ್ಳು ಸುದ್ದಿಗಳನ್ನ ನಂಬಬೇಡಿ. ಈಗ ₹500, ₹200, ₹100, ₹50, ₹20 ಮತ್ತು ₹10ನೋಟುಗಳು ಮಾತ್ರ ಚಲಾವಣೆಯಲ್ಲಿವೆ.
ಈಗ ಡಿಜಿಟಲ್ ವ್ಯವಹಾರಗಳು ಹೆಚ್ಚಾಗ್ತಿವೆ. ಸರ್ಕಾರ ಕೂಡ ಇದನ್ನ ಪ್ರೋತ್ಸಾಹಿಸುತ್ತಿದೆ. UPI, ಸೈಬರ್ಸ್ಪೇಸ್ ಬ್ಯಾಂಕಿಂಗ್, ಡಿಜಿಟಲ್ ವ್ಯಾಲೆಟ್ಗಳು ನಗದುಗೆ ಪರ್ಯಾಯವಾಗಿವೆ. ಈ ಸಂದರ್ಭದಲ್ಲಿ ಹೊಸ ನೋಟುಗಳನ್ನ ಚಲಾವಣೆಗೆ ತರುವುದು ಸರಿಯಲ್ಲ ಅಂತ RBI ಭಾವಿಸುತ್ತದೆ. ಹೊಸ ನೋಟು ಬಿಡುಗಡೆ ಆಗುತ್ತಾ ಅನ್ನೋದನ್ನ RBI ಅಥವಾ ಹಣಕಾಸು ಸಚಿವಾಲಯ ಮಾತ್ರ ಘೋಷಿಸುತ್ತದೆ. ಅವುಗಳು ಮಾತ್ರ ಅಧಿಕೃತ ಘೋಷಣೆಗಳಾಗಿರುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ವದಂತಿಗಳನ್ನ ಜನ ನಂಬಬಾರದು.

The post 5 ಸಾವಿರ ರೂಪಾಯಿ ನೋಟಿನ ಬಗ್ಗೆ RBI ಹೇಳಿದ್ದಿಷ್ಟು ! appeared first on Good News 24x7.

]]>
https://www.goodnews24x7.com/5-%e0%b2%b8%e0%b2%be%e0%b2%b5%e0%b2%bf%e0%b2%b0-%e0%b2%b0%e0%b3%82%e0%b2%aa%e0%b2%be%e0%b2%af%e0%b2%bf-%e0%b2%a8%e0%b3%8b%e0%b2%9f%e0%b2%bf%e0%b2%a8-%e0%b2%ac%e0%b2%97%e0%b3%8d%e0%b2%97%e0%b3%86-rbi/feed/ 0 1546
ಫ್ಲೈಯಿಂಗ್‌ ಫಿಶ್‌ ; ಈಜುವ ಮೀನನ್ನ ನೋಡಿದ್ದೀರಾ ಆದರೆ ಹಾರುವ ಮೀನಿನ ಬಗ್ಗೆ ಗೊತ್ತಾ….ಇಲ್ಲಿದೆ ಇದರ ಸಂಪೂರ್ಣ ಮಾಹಿತಿ.. https://www.goodnews24x7.com/%e0%b2%ab%e0%b3%8d%e0%b2%b2%e0%b3%88%e0%b2%af%e0%b2%bf%e0%b2%82%e0%b2%97%e0%b3%8d-%e0%b2%ab%e0%b2%bf%e0%b2%b6%e0%b3%8d-%e0%b2%88%e0%b2%9c%e0%b3%81%e0%b2%b5-%e0%b2%ae%e0%b3%80/ https://www.goodnews24x7.com/%e0%b2%ab%e0%b3%8d%e0%b2%b2%e0%b3%88%e0%b2%af%e0%b2%bf%e0%b2%82%e0%b2%97%e0%b3%8d-%e0%b2%ab%e0%b2%bf%e0%b2%b6%e0%b3%8d-%e0%b2%88%e0%b2%9c%e0%b3%81%e0%b2%b5-%e0%b2%ae%e0%b3%80/#respond Sat, 04 Jan 2025 08:54:37 +0000 https://www.goodnews24x7.com/?p=1520 ಮೀನು ಜಲಚರ ಜೀವಿ. ಆದರೆ ನೀರಿನಲ್ಲಿ ಈಜುವ ಜೊತೆಗೆ ಗಾಳಿಯಲ್ಲಿಯೂ ಹಾರಬಲ್ಲ ಮೀನುಗಳನ್ನು ನೋಡಿದ್ದೀರಾ? ಇವು 200 ಮೀಟರ್ವರೆಗೆ ಹಾರಬಲ್ಲವು. ಅವುಗಳ ಬದಿಗಳಲ್ಲಿರುವ ರೆಕ್ಕೆಗಳು ಹಾರಾಟಕ್ಕೆ ಸಹಾಯ ಮಾಡುತ್ತವೆ. ಪರಭಕ್ಷಕರಿಂದ ತಪ್ಪಿಸಿಕೊಳ್ಳಲು ಅವು ಹಾರಾಡುತ್ತವೆ. ನೀರಿನ ತಾಪಮಾನ ಕಡಿಮೆಯಾದಾಗ ಅವುಗಳ ಹಾರಾಟದ…

The post ಫ್ಲೈಯಿಂಗ್‌ ಫಿಶ್‌ ; ಈಜುವ ಮೀನನ್ನ ನೋಡಿದ್ದೀರಾ ಆದರೆ ಹಾರುವ ಮೀನಿನ ಬಗ್ಗೆ ಗೊತ್ತಾ….ಇಲ್ಲಿದೆ ಇದರ ಸಂಪೂರ್ಣ ಮಾಹಿತಿ.. appeared first on Good News 24x7.

]]>
ಮೀನು ಜಲಚರ ಜೀವಿ. ಆದರೆ ನೀರಿನಲ್ಲಿ ಈಜುವ ಜೊತೆಗೆ ಗಾಳಿಯಲ್ಲಿಯೂ ಹಾರಬಲ್ಲ ಮೀನುಗಳನ್ನು ನೋಡಿದ್ದೀರಾ? ಇವು 200 ಮೀಟರ್ವರೆಗೆ ಹಾರಬಲ್ಲವು. ಅವುಗಳ ಬದಿಗಳಲ್ಲಿರುವ ರೆಕ್ಕೆಗಳು ಹಾರಾಟಕ್ಕೆ ಸಹಾಯ ಮಾಡುತ್ತವೆ. ಪರಭಕ್ಷಕರಿಂದ ತಪ್ಪಿಸಿಕೊಳ್ಳಲು ಅವು ಹಾರಾಡುತ್ತವೆ. ನೀರಿನ ತಾಪಮಾನ ಕಡಿಮೆಯಾದಾಗ ಅವುಗಳ ಹಾರಾಟದ ಸಾಮರ್ಥ್ಯ ಕಡಿಮೆಯಾಗುತ್ತದೆ.
ಫ್ಲೈಯಿಂಗ್ ಫಿಶ್ ಫೆಸಿಪಿಕ್, ಅಟ್ಲಾಂಟಿಕ್ ಮತ್ತು ಹಿಂದೂ ಮಹಾಸಾಗರದಲ್ಲಿ ಹೆಚ್ಚು ಕಂಡುಬರುತ್ತವೆ. ಅರಬ್ಬೀ ಸಮುದ್ರದ ಆಳದಲ್ಲಿಯೂ ವಿಸ್ತರಿಸಿವೆ. ನೀರೊಳಗಿನ ಪರಭಕ್ಷಕಗಳಿಂದ ತಪ್ಪಿಸಿಕೊಳ್ಳಲು ತಮ್ಮ ರೆಕ್ಕೆಗಳು ಮತ್ತು ಕವಲೊಡೆದ ಬಾಲವನ್ನು ಬಳಸಿಕೊಂಡು ನೆಗೆಯುತ್ತವೆ.

ಎಕ್ಸೊಕೊಯೆಟಿಡೆ ಕುಟುಂಬಕ್ಕೆ ಸೇರಿರುವ ಇದು ಬಾರ್ಬಡೋಸ್ ದೇಶವಾಸಿಗಳ ನೆಚ್ಚಿನ ಖಾದ್ಯ. ಬಾರ್ಬಡೋಸ್ ಹಾರುವ ಮೀನುಗಳ ಭೂಮಿ ಎಂದೇ ಪ್ರಸಿದ್ಧಿ ಪಡೆದಿದೆ. ಹಾರುವ ಮೀನುಗಳು ದೊರಕುವುದು ಆಶೀರ್ವಾದ ಶುಭದ ಸಂಕೇತ ಎಂಬ ನಂಬಿಕೆ ಬಾರ್ಬಡೋಸ್ ಮತ್ತು ಜಪಾನ್ ದೇಶದಲ್ಲಿದೆ. ಪಕ್ಷಿಯಂತೆ ಹಾರಲು ಸಾಧ್ಯವಾಗದಿದ್ದರು ನೀರಿನಿಂದ ಶಕ್ತಿಯುತವಾದ ಸ್ವಯಂಚಾಲಿತ ಜಿಗಿತ ಹೊಂದಿರುವ ಇವು ಗಣನೀಯ ದೂರದವರೆಗೆ ಗ್ಲೆತ್ರೖಡಿಂಗ್ ಮಾಡುತ್ತವೆ.
ನೀರಿನಲ್ಲಿ ಈಜುವುದರ ಜೊತೆಗೆ ಗಾಳಿಯಲ್ಲಿಯೂ ಹಾರಬಲ್ಲ ಮೀನು ಇದೆ ಎಂದು ನಿಮಗೆ ತಿಳಿದಿದೆಯೇ? ಹೌದು, ಇಂದು ಅಂತಹ ಒಂದು ಮೀನಿನ ಬಗ್ಗೆ ಇಲ್ಲಿ ತಿಳಿದುಕೊಳ್ಳಿ. ಮಾಹಿತಿಯ ಪ್ರಕಾರ, ಈ ಮೀನುಗಳು 200 ಮೀಟರ್ ವರೆಗೆ ಮಾತ್ರ ಹಾರಬಲ್ಲವು. ಈ ಮೀನನ್ನು ಗ್ಲೈಡರ್ ಎಂದು ಕರೆಯಲಾಗುತ್ತದೆ. ಈ ಮೀನುಗಳ ಬದಿಗಳಲ್ಲಿ ರೆಕ್ಕೆಗಳಿರುತ್ತವೆ. ಈ ರೆಕ್ಕೆಗಳ ಸಹಾಯದಿಂದ ಈ ಮೀನುಗಳು ಹಾರಲು ಸಾಧ್ಯವಾಗುತ್ತದೆ.

ಫ್ಲೈಯಿಂಗ್ ಫಿಶ್
ಸಾಮಾನ್ಯವಾಗಿ ಈ ಮೀನುಗಳ ಉದ್ದವು 17 ರಿಂದ 30 ಸೆಂಟಿಮೀಟರ್ಗಳಷ್ಟಿರುತ್ತದೆ. ಮಾಹಿತಿಯ ಪ್ರಕಾರ, ಈ ಮೀನುಗಳು ಸಮುದ್ರದಲ್ಲಿ ಪರಭಕ್ಷಕ ಮೀನುಗಳಿಂದ ತಪ್ಪಿಸಿಕೊಳ್ಳಬೇಕಾದಾಗ, ಗಾಳಿಯಲ್ಲಿ ಹಾರುತ್ತದೆ. ಆದರೆ, ಒಮ್ಮೆ ನೀರಿನಿಂದ ಹೊರ ಬಂದ ಮೇಲೆ ಗಾಳಿಗೆ ಹಾರಿ ಮತ್ತೆ ನೀರಿಗೆ ಬರುತ್ತವೆ. ನೀರಿನಿಂದ ಹೊರಬಂದ ನಂತರ, ಈ ಮೀನುಗಳು ತಮ್ಮ ರೆಕ್ಕೆಗಳನ್ನು ಹರಡುತ್ತವೆ.

ಫ್ಲೈಯಿಂಗ್ ಫಿಶ್ 200 ಮೀಟರ್ ವರೆಗೆ ಹಾರುತ್ತದೆ:
ವಿಜ್ಞಾನಿಗಳ ಪ್ರಕಾರ, ಈ ಮೀನುಗಳು ಉತ್ತಮ ಗ್ಲೈಡರ್ಗಳಾಗಿವೆ. ಆದಾಗ್ಯೂ, ನೀರಿನ ತಾಪಮಾನವು 20 ಡಿಗ್ರಿಗಿಂತ ಕಡಿಮೆಯಿರುವಾಗ, ಈ ಮೀನುಗಳು ಹಾರಲು ಸಾಧ್ಯವಾಗುವುದಿಲ್ಲ. ಇದಕ್ಕೆ ಕಾರಣ ಸ್ನಾಯುಗಳು, ಕಡಿಮೆ ತಾಪಮಾನದಲ್ಲಿ ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ. ಈ ಮೀನನ್ನು ಪ್ರಪಂಚದಾದ್ಯಂತ ‘ಹಾರುವ ಮೀನು’ ಎಂದೂ ಕರೆಯುತ್ತಾರೆ.

The post ಫ್ಲೈಯಿಂಗ್‌ ಫಿಶ್‌ ; ಈಜುವ ಮೀನನ್ನ ನೋಡಿದ್ದೀರಾ ಆದರೆ ಹಾರುವ ಮೀನಿನ ಬಗ್ಗೆ ಗೊತ್ತಾ….ಇಲ್ಲಿದೆ ಇದರ ಸಂಪೂರ್ಣ ಮಾಹಿತಿ.. appeared first on Good News 24x7.

]]>
https://www.goodnews24x7.com/%e0%b2%ab%e0%b3%8d%e0%b2%b2%e0%b3%88%e0%b2%af%e0%b2%bf%e0%b2%82%e0%b2%97%e0%b3%8d-%e0%b2%ab%e0%b2%bf%e0%b2%b6%e0%b3%8d-%e0%b2%88%e0%b2%9c%e0%b3%81%e0%b2%b5-%e0%b2%ae%e0%b3%80/feed/ 0 1520
ಲೈನ್‌ಮ್ಯಾನ್‌ ಹಿಂದೆಯೇ ದೊಣ್ಣೆ ಹಿಡಿದು: ವಿದ್ಯುತ್ ಕಂಬವನ್ನೇರಿ ಅವಾಜ್ ಹಾಕಿದ ಮಹಿಳೆ. https://www.goodnews24x7.com/%e0%b2%b2%e0%b3%88%e0%b2%a8%e0%b3%8d%e0%b2%ae%e0%b3%8d%e0%b2%af%e0%b2%be%e0%b2%a8%e0%b3%8d-%e0%b2%b9%e0%b2%bf%e0%b2%82%e0%b2%a6%e0%b3%86%e0%b2%af%e0%b3%87-%e0%b2%a6%e0%b3%8a%e0%b2%a3/ https://www.goodnews24x7.com/%e0%b2%b2%e0%b3%88%e0%b2%a8%e0%b3%8d%e0%b2%ae%e0%b3%8d%e0%b2%af%e0%b2%be%e0%b2%a8%e0%b3%8d-%e0%b2%b9%e0%b2%bf%e0%b2%82%e0%b2%a6%e0%b3%86%e0%b2%af%e0%b3%87-%e0%b2%a6%e0%b3%8a%e0%b2%a3/#respond Thu, 02 Jan 2025 09:18:04 +0000 https://www.goodnews24x7.com/?p=1459 ಉತ್ತರ ಪ್ರದೇಶ :- ಅಚ್ಚರಿಯ ಪ್ರಕರಣಗಳಿಗೆ ಸಂಬಂಧಿಸಿದ ಕೆಲವೊಂದು ವಿಡಿಯೋ ತುಣುಕುಗಳು ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಕಾಣ ಸಿಗುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ವಿಡಿಯೋ ವೈರಲ್ ಆಗಿದ್ದು, ಮಹಿಳೆಯೊಬ್ಬರು ಕರೆಂಟ್ ಕಂಬವನ್ನೇರಿ ಲೈನ್ಮ್ಯಾನ್ಗೆ ಧಮ್ಕಿ ಹಾಕಿದ್ದಾರೆ. ಹೌದು ಕರೆಂಟ್ ಬಿಲ್ ಸರಿಯಾಗಿ ಪಾವತಿಸದ…

The post ಲೈನ್‌ಮ್ಯಾನ್‌ ಹಿಂದೆಯೇ ದೊಣ್ಣೆ ಹಿಡಿದು: ವಿದ್ಯುತ್ ಕಂಬವನ್ನೇರಿ ಅವಾಜ್ ಹಾಕಿದ ಮಹಿಳೆ. appeared first on Good News 24x7.

]]>
ಉತ್ತರ ಪ್ರದೇಶ :- ಅಚ್ಚರಿಯ ಪ್ರಕರಣಗಳಿಗೆ ಸಂಬಂಧಿಸಿದ ಕೆಲವೊಂದು ವಿಡಿಯೋ ತುಣುಕುಗಳು ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಕಾಣ ಸಿಗುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ವಿಡಿಯೋ ವೈರಲ್ ಆಗಿದ್ದು, ಮಹಿಳೆಯೊಬ್ಬರು ಕರೆಂಟ್ ಕಂಬವನ್ನೇರಿ ಲೈನ್ಮ್ಯಾನ್ಗೆ ಧಮ್ಕಿ ಹಾಕಿದ್ದಾರೆ. ಹೌದು ಕರೆಂಟ್ ಬಿಲ್ ಸರಿಯಾಗಿ ಪಾವತಿಸದ ಕಾರಣ ವಿದ್ಯುತ್ ಕಂಬವನ್ನೇರಿ ಲೈನ್ಮ್ಯಾನ್ ವಿದ್ಯುತ್ ಕಡಿತಗೊಳಿಸಲು ಮುಂದಾದ ಸಂದರ್ಭದಲ್ಲಿ ಆತನ ಹಿಂದೆಯೇ ದೊಣ್ಣೆ ಹಿಡಿದು ಕಂಬವನ್ನೇರಿದ ಮಹಿಳೆಯೊಬ್ಬರು ಅವಾಸ್ ಹಾಕಿ ಆತನನ್ನು ಕಂಬದಿಂದ ಕೆಳಗಿಳಿಸಿದ್ದಾರೆ. ಮಹಿಳೆಯ ಭಂಡ ಧೈರ್ಯವನ್ನು ಕಂಡು ನೆಟ್ಟಿಗರು ಬೆರಗಾಗಿದ್ದಾರೆ.

ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಈ ಅಚ್ಚರಿಯ ಪ್ರಕರಣ ನಡೆದಿದ್ದು, ಹಲವು ತಿಂಗಳುಗಳಿಂದ ವಿದ್ಯುತ್ ಬಿಲ್ ಪಾವತಿಸುತ್ತಿಲ್ಲ ಎಂಬ ಕಾರಣಕ್ಕೆ ಲೈನ್ಮ್ಯಾನ್ ಬಂದು ನೇರವಾಗಿ ಕರೆಂಟ್ ಕಂಬದಿಂದಲೇ ವಿದ್ಯುತ್ ಕಡಿತಗೊಳಿಸಲು ಮುಂದಾಗಿದ್ದಾನೆ. ಇದನ್ನು ಕಂಡಂತಹ ಮಹಿಳೆಯೊಬ್ಬರು ತಾನು ಕೂಡಾ ಕೈಯಲ್ಲೊಂದು ದೊಣ್ಣೆ ಹಿಡಿದು ಏಣಿಯ ಮೂಲಕ ಕಂಬವನ್ನೇರಿ ಕರೆಂಟ್ ತೆಗೆದ್ರೆ ಜಾಗ್ರತೆ ಎಂದು ಆತನಿಗೆ ಬೈದಿದ್ದಾರೆ. ಈ ಮಹಿಳೆಯ ಬೈಗುಳಕ್ಕೆ ಹೆದರಿದ ಲೈನ್ಮ್ಯಾನ್ ಕರೆಂಟ್ ಕಟ್ ಮಾಡದೆಯೇ ಕಂಬದಿಂದ ಇಳಿದು ಸೀದಾ ಹೋಗಿದ್ದಾನೆ.
Gharkakalesh ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ಕೈಯಲ್ಲೊಂದು ದೊಣ್ಣೆ ಹಿಡಿದು ಕರೆಂಟ್ ಕಂಬವನ್ನೇರಿ ಲೈನ್ಮ್ಯಾನ್ಗೆ ಕರೆಂಟ್ ತೆಗೆದ್ರೆ ಜಾಗ್ರತೆ ಎಂದು ಧಮ್ಕಿ ಹಾಕುತ್ತಿರುವ ದೃಶ್ಯವನ್ನು ಕಾಣಬಹುದು.
ಡಿಸೆಂಬರ್ 31 ರಂದು ಹಂಚಿಕೊಳ್ಳಲಾದ ಈ ವಿಡಿಯೋ 62 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ಮಹಿಳೆ ನಿಜಕ್ಕೂ ಗಟ್ಟಿಗಿತ್ತಿʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇಷ್ಟೆಲ್ಲಾ ಧಮ್ಕಿ ಹಾಕುವ ಬದಲು ಆಕೆಗೆ ಕರೆಂಟ್ ಬಿಲ್ ಪಾವತಿಸಬಹುದಿತ್ತಲ್ವಾʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.

The post ಲೈನ್‌ಮ್ಯಾನ್‌ ಹಿಂದೆಯೇ ದೊಣ್ಣೆ ಹಿಡಿದು: ವಿದ್ಯುತ್ ಕಂಬವನ್ನೇರಿ ಅವಾಜ್ ಹಾಕಿದ ಮಹಿಳೆ. appeared first on Good News 24x7.

]]>
https://www.goodnews24x7.com/%e0%b2%b2%e0%b3%88%e0%b2%a8%e0%b3%8d%e0%b2%ae%e0%b3%8d%e0%b2%af%e0%b2%be%e0%b2%a8%e0%b3%8d-%e0%b2%b9%e0%b2%bf%e0%b2%82%e0%b2%a6%e0%b3%86%e0%b2%af%e0%b3%87-%e0%b2%a6%e0%b3%8a%e0%b2%a3/feed/ 0 1459
ಹೊಸ ವರ್ಷದ ಸಂಭ್ರಮಾಚರಣೆಗೆ ಬಾರ್ಗೆ ಕಳ್ಳತನ ಮಾಡಲು ಹೋಗಿ ಕಂಠಪೂರ್ತಿ ಕುಡಿದು ಅಲ್ಲೇ ಮಲಗಿದ ಕಳ್ಳ https://www.goodnews24x7.com/%e0%b2%b9%e0%b3%8a%e0%b2%b8-%e0%b2%b5%e0%b2%b0%e0%b3%8d%e0%b2%b7%e0%b2%a6-%e0%b2%b8%e0%b2%82%e0%b2%ad%e0%b3%8d%e0%b2%b0%e0%b2%ae%e0%b2%be%e0%b2%9a%e0%b2%b0%e0%b2%a3%e0%b3%86%e0%b2%97%e0%b3%86/ https://www.goodnews24x7.com/%e0%b2%b9%e0%b3%8a%e0%b2%b8-%e0%b2%b5%e0%b2%b0%e0%b3%8d%e0%b2%b7%e0%b2%a6-%e0%b2%b8%e0%b2%82%e0%b2%ad%e0%b3%8d%e0%b2%b0%e0%b2%ae%e0%b2%be%e0%b2%9a%e0%b2%b0%e0%b2%a3%e0%b3%86%e0%b2%97%e0%b3%86/#respond Wed, 01 Jan 2025 12:07:34 +0000 https://www.goodnews24x7.com/?p=1451 ತೆಲಂಗಾಣ :- ಹೊಸ ವರ್ಷದ ಸಂಭ್ರಮಾಚರಣೆಗೆ ದುಡಿಲ್ಲದೇ ಕಾರಣ ತೆಲಂಗಾಣ ವ್ಯಕ್ತಿಯೊಬ್ಬ ಮದ್ಯದ ಅಂಗಡಿಗೆ ನುಗ್ಗಿ ಮದ್ಯದ ಬಾಟಲಿಗಳನ್ನು ದೋಚಿದ್ದಾನೆ. ಕದ್ದ ಬಾಟಲಿಯೊಂದಿಗೆ ಬಾರ್ನಿಂದ ಹೊರಗಡೆ ಬರುವ ಮುನ್ನ ಅಲ್ಲಿದ್ದ ಒಂದಿಷ್ಟು ಮದ್ಯವನ್ನು ಕುಡಿದು ಮತ್ತೆ ಹೋಗುವ ಎಂದು ಪ್ಲಾನ್ ಮಾಡಿದ್ದಾನೆ.…

The post ಹೊಸ ವರ್ಷದ ಸಂಭ್ರಮಾಚರಣೆಗೆ ಬಾರ್ಗೆ ಕಳ್ಳತನ ಮಾಡಲು ಹೋಗಿ ಕಂಠಪೂರ್ತಿ ಕುಡಿದು ಅಲ್ಲೇ ಮಲಗಿದ ಕಳ್ಳ appeared first on Good News 24x7.

]]>
ತೆಲಂಗಾಣ :- ಹೊಸ ವರ್ಷದ ಸಂಭ್ರಮಾಚರಣೆಗೆ ದುಡಿಲ್ಲದೇ ಕಾರಣ ತೆಲಂಗಾಣ ವ್ಯಕ್ತಿಯೊಬ್ಬ ಮದ್ಯದ ಅಂಗಡಿಗೆ ನುಗ್ಗಿ ಮದ್ಯದ ಬಾಟಲಿಗಳನ್ನು ದೋಚಿದ್ದಾನೆ. ಕದ್ದ ಬಾಟಲಿಯೊಂದಿಗೆ ಬಾರ್ನಿಂದ ಹೊರಗಡೆ ಬರುವ ಮುನ್ನ ಅಲ್ಲಿದ್ದ ಒಂದಿಷ್ಟು ಮದ್ಯವನ್ನು ಕುಡಿದು ಮತ್ತೆ ಹೋಗುವ ಎಂದು ಪ್ಲಾನ್ ಮಾಡಿದ್ದಾನೆ. ಆದರೆ ಕಂಠಪೂರ್ತಿ ಕುಡಿದ ಕಳ್ಳ ಅಲ್ಲೇ ಮಲಗಿದ್ದು, ಮರುದಿನ ಬೆಳಿಗ್ಗೆ ಅಂಗಡಿಯ ಮಾಲೀಕನ ಕೈ ಸಿಕ್ಕಿಬಿದ್ದಿದ್ದಾನೆ. ತೆಲಂಗಾಣದ ಮೇದಕ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಭಾನುವಾರ ರಾತ್ರಿ ‘ಕನಕದುರ್ಗಾ ವೈನ್ಸ್’ ಹೆಸರಿನ ಅಂಗಡಿಗೆ ನುಗ್ಗಿ ಛಾವಣಿಯ ಕೆಲವು ಹೆಂಚುಗಳನ್ನು ಕಿತ್ತು ಸಿಸಿಟಿವಿ ಕ್ಯಾಮೆರಾ ನಿಷ್ಕ್ರಿಯಗೊಳಿಸಿ ದುಬಾರಿ ಬೆಲೆಯ ಮದ್ಯದ ಬಾಟಲಿಗಳನ್ನು ಕದ್ದಿದ್ದ ಕಳ್ಳ, ಇನ್ನೇನು ಅಂಗಡಿಯಿಂದ ಪಾರಾಗಬೇಕು ಎನ್ನುವಷ್ಟರಲ್ಲಿ ಚಳಿಗೆ ಸ್ಪಲ್ಪ ಕುಡಿದು ಮತ್ತೆ ಹೋಗುವ ಎಂದು ಯೋಚಿಸಿದ್ದಾನೆ. ಆದರೆ ಮದ್ಯದ ಆಸೆಗೆ ಕಂಠಪೂರ್ತಿ ಕುಡಿದಿದ್ದಾನೆ. ಸೋಮವಾರ ಮುಂಜಾನೆ ಅಂಗಡಿ ಮಾಲೀಕ ಅಂಗಡಿಯ ಬಾಗಿಲು ತೆಗೆದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಅಪರಿಚಿತ ವ್ಯಕ್ತಿಯನ್ನು ಕಂಡು ಶಾಕ್ ಆಗಿದ್ದಾರೆ.

ಸೋಮವಾರ ಬೆಳಗ್ಗೆ ಪೊಲೀಸರು ಸ್ಥಳಕ್ಕೆ ಬಂದ ನಂತರ ಘಟನೆಯ ದೃಶ್ಯಗಳು ಆನ್ಲೈನ್ನಲ್ಲಿ ಕಾಣಿಸಿಕೊಂಡಿವೆ. ಕಳ್ಳ ಮದ್ಯದಂಗಡಿಯಲ್ಲಿ ನೆಲದ ಮೇಲೆ ಮಲಗಿದ್ದು ನಗದು ಮತ್ತು ಮದ್ಯದ ಬಾಟಲಿಗಳು ಅವನ ಸುತ್ತಲೂ ಬಿದ್ದಿರುವುದನ್ನು ತೋರಿಸುವ ಫೋಟೋ ವೈರಲ್ ಆಗಿದೆ.
ಈ ಕುರಿತು ಮಾಹಿತಿ ನೀಡಿದ ಸಬ್ ಇನ್ಸ್ಪೆಕ್ಟರ್ ಅಹ್ಮದ್ ಮೊಯಿನುದ್ದೀನ್ “ಕಳ್ಳನನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಂಧಿಸಲಾಗಿದೆ. ಆತನ್ನು ಆಂಬ್ಯುಲೆನ್ಸ್ನಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಸಲು ಅವನಿಗೆ ಪ್ರಜ್ಞೆ ಮರಳಲು ಪೊಲೀಸ್ ತಂಡ ಕಾಯುತ್ತಿದೆ ” ಎಂದು ಹೇಳಿದ್ದಾರೆ.

The post ಹೊಸ ವರ್ಷದ ಸಂಭ್ರಮಾಚರಣೆಗೆ ಬಾರ್ಗೆ ಕಳ್ಳತನ ಮಾಡಲು ಹೋಗಿ ಕಂಠಪೂರ್ತಿ ಕುಡಿದು ಅಲ್ಲೇ ಮಲಗಿದ ಕಳ್ಳ appeared first on Good News 24x7.

]]>
https://www.goodnews24x7.com/%e0%b2%b9%e0%b3%8a%e0%b2%b8-%e0%b2%b5%e0%b2%b0%e0%b3%8d%e0%b2%b7%e0%b2%a6-%e0%b2%b8%e0%b2%82%e0%b2%ad%e0%b3%8d%e0%b2%b0%e0%b2%ae%e0%b2%be%e0%b2%9a%e0%b2%b0%e0%b2%a3%e0%b3%86%e0%b2%97%e0%b3%86/feed/ 0 1451
ಅರ್ಧ ದಿನದಲ್ಲೇ 308 ಕೋಟಿ ರೂ. ಮದ್ಯ ಮಾರಾಟ : ಹೊಸ ವರ್ಷಾಚರಣೆಯಿಂದ ಅಬಕಾರಿ ಇಲಾಖೆಗೆ ಭರ್ಜರಿ ಆದಾಯ. https://www.goodnews24x7.com/%e0%b2%85%e0%b2%b0%e0%b3%8d%e0%b2%a7-%e0%b2%a6%e0%b2%bf%e0%b2%a8%e0%b2%a6%e0%b2%b2%e0%b3%8d%e0%b2%b2%e0%b3%87-308-%e0%b2%95%e0%b3%8b%e0%b2%9f%e0%b2%bf-%e0%b2%b0%e0%b3%82-%e0%b2%ae%e0%b2%a6%e0%b3%8d/ https://www.goodnews24x7.com/%e0%b2%85%e0%b2%b0%e0%b3%8d%e0%b2%a7-%e0%b2%a6%e0%b2%bf%e0%b2%a8%e0%b2%a6%e0%b2%b2%e0%b3%8d%e0%b2%b2%e0%b3%87-308-%e0%b2%95%e0%b3%8b%e0%b2%9f%e0%b2%bf-%e0%b2%b0%e0%b3%82-%e0%b2%ae%e0%b2%a6%e0%b3%8d/#respond Wed, 01 Jan 2025 03:46:12 +0000 https://www.goodnews24x7.com/?p=1431 ಹೊಸ ವರ್ಷ ಆಚರಣೆಯ ಸಂಭ್ರಮ ಅಬಕಾರಿ ಇಲಾಖೆಗಂತೂ ಭರ್ಜರಿ ಆದಾಯ ತಂದುಕೊಟ್ಟಿದೆ. ಡಿಸೆಂಬರ್ 31ರಂದು ಕೇವಲ ಅರ್ಧ ದಿನದಲ್ಲಿ 300 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಮದ್ಯ ಮಾರಾಟವಾಗಿದ್ದು, ಕಳೆದ ವರ್ಷ ಇದೇ ದಿನ ಗಳಿಸಿದ ಆದಾಯಕ್ಕಿಂತಲೂ ಹೆಚ್ಚಿನ ಆದಾಯ ಗಳಿಸಿದೆ.…

The post ಅರ್ಧ ದಿನದಲ್ಲೇ 308 ಕೋಟಿ ರೂ. ಮದ್ಯ ಮಾರಾಟ : ಹೊಸ ವರ್ಷಾಚರಣೆಯಿಂದ ಅಬಕಾರಿ ಇಲಾಖೆಗೆ ಭರ್ಜರಿ ಆದಾಯ. appeared first on Good News 24x7.

]]>
ಹೊಸ ವರ್ಷ ಆಚರಣೆಯ ಸಂಭ್ರಮ ಅಬಕಾರಿ ಇಲಾಖೆಗಂತೂ ಭರ್ಜರಿ ಆದಾಯ ತಂದುಕೊಟ್ಟಿದೆ. ಡಿಸೆಂಬರ್ 31ರಂದು ಕೇವಲ ಅರ್ಧ ದಿನದಲ್ಲಿ 300 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಮದ್ಯ ಮಾರಾಟವಾಗಿದ್ದು, ಕಳೆದ ವರ್ಷ ಇದೇ ದಿನ ಗಳಿಸಿದ ಆದಾಯಕ್ಕಿಂತಲೂ ಹೆಚ್ಚಿನ ಆದಾಯ ಗಳಿಸಿದೆ.

ಬೆಂಗಳೂರು : ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಗೆ ನೂರಾರು ಕೋಟಿ ರುಪಾಯಿ ಆದಾಯ ಹರಿದು ಬಂದಿದೆ. ಡಿಸೆಂಬರ್ 31 ರ ಮಂಗಳವಾರ ಬೆಳಿಗ್ಗೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಅರ್ಧ ದಿನದ ಅವಧಿಯಲ್ಲಿ ಕೆಎಸ್ಬಿಸಿಎಲ್ನಿಂದ ಬರೋಬ್ಬರಿ 308 ಕೋಟಿ ರುಪಾಯಿ ಮದ್ಯ ಮಾರಾಟವಾಗಿದೆ. ಅಬಕಾರಿ ಇಲಾಖೆಯ ನಿರೀಕ್ಷೆಗೂ ಮೀರಿ ಮಾರಾಟವಾಗಿದೆ.
ಅಬಕಾರಿ ಇಲಾಖೆ 250 ಕೋಟಿ ರೂ. ಮೌಲ್ಯದ ಮದ್ಯ ಮಾರಾಟದ ಗುರಿ ಇಟ್ಟುಕೊಂಡಿತ್ತು. ಆದರೆ, ಅದನ್ನೂ ಮೀರಿ ಮಾರಾಟವಾಗಿದೆ. ಕಳೆದ ವರ್ಷ 2023 ರ ಡಿಸೆಂಬರ್ 31 ರಂದು 193 ಕೋಟಿ ರುಪಾಯಿ ಮದ್ಯ ಮಾರಾಟ ಆಗಿತ್ತು. 2024 ಡಿಸೆಂಬರ್ 31 ರಂದು 7,305 ಮದ್ಯ ಮಾರಾಟಗಾರರು ಕೆಎಸ್ಬಿಸಿಎಲ್ನಿಂದ ಮದ್ಯ ಖರೀದಿ ಮಾಡಿದ್ದಾರೆ.
ಐಎಂಎಲ್ 4,83,715 ಲಕ್ಷ ಬಾಕ್ಸ್ ಮಾರಾಟದಿಂದ 250.25 ಕೋಟಿ ಆದಾಯ ಸಂಗ್ರಹವಾಗಿದೆ. ಬಿಯರ್- 2,92,339 ಲಕ್ಷ ಬಾಕ್ಸ್ ಮಾರಾಟದಿಂದ 57,75 ಕೋಟಿ ಆದಾಯ ಸಂಗ್ರಹವಾಗಿದೆ. ಒಟ್ಟು 7,76,042 ಲಕ್ಷ ಬಾಕ್ಸ್ ಮದ್ಯ ಮಾರಾಟದಿಂದ ಒಟ್ಟು 308 ಕೋಟಿ ರುಪಾಯಿ ಆದಾಯ ಸಂಗ್ರಹವಾಗಿದೆ.

27-12-2024 ರ ಶುಕ್ರವಾರದಂದು ಕೂಡ ಬರೋಬ್ಬರಿ 408.58 ಕೋಟಿ ರುಪಾಯಿ ಮದ್ಯ ಮಾರಾಟವಾಗಿತ್ತು. ಐಎಂಎಲ್ 6,22,062 ಲಕ್ಷ ಬಾಕ್ಸ್ ಮಾರಾಟದಿಂದ 327,50 ಕೋಟಿ ರುಪಾಯಿ ಆದಾಯ ಸಂಗ್ರಹವಾಗಿತ್ತು. ಬಿಯರ್ 4,04,998 ಲಕ್ಷ ಬಾಕ್ಸ್ ಮಾರಾಟದಿಂದ 80,58 ಕೋಟಿ ರುಪಾಯಿ ಆದಾಯ ಗಳಿಕೆಯಾಗಿತ್ತು. ಐಎಂಎಲ್, ಬಿಯರ್ ಸೇರಿ ಒಟ್ಟು- 10,27,060 ಲಕ್ಷ ಬಾಕ್ಸ್ ಮದ್ಯ ಮಾರಾಟದಿಂದ 408.50 ಕೋಟಿ ರುಪಾಯಿ ಆದಾಯ ಹರಿದುಬಂದಿತ್ತು.
ಏತನ್ಮಧ್ಯೆ, ಬೆಂಗಳೂರಿನಲ್ಲಿ ಹೊಸ ವರ್ಷ ಆಚರಣೆ ಸಂಭ್ರಮದಿಂದ ನಡೆದಿದೆ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಸೇರಿದಂತೆ ನಗರದ ವಿವಿಧ ಕಡೆಗಳಲ್ಲಿ ಲಕ್ಷಾಂತರ ಮಂದಿ ಸಂಭ್ರಮದಿಂದ ಕುಣಿದು ಕುಪ್ಪಳಿಸಿದ್ದಾರೆ. ಕೆಲವೆಡೆ ಸಣ್ಣಪುಟ್ಟ ಅಹಿತಕರ ಘಟನೆಗಳು ನಡೆದಿದ್ದು ಬಿಟ್ಟರೆ, ಒಟ್ಟಾರೆಯಾಗಿ ಹೊಸ ವರ್ಷದ ಸ್ವಾಗತ, ಸಂಭ್ರಮಾಚರಣೆ ಶಾಂತಿಯುತವಾಗಿ ನೆರವೇರಿದೆ.

The post ಅರ್ಧ ದಿನದಲ್ಲೇ 308 ಕೋಟಿ ರೂ. ಮದ್ಯ ಮಾರಾಟ : ಹೊಸ ವರ್ಷಾಚರಣೆಯಿಂದ ಅಬಕಾರಿ ಇಲಾಖೆಗೆ ಭರ್ಜರಿ ಆದಾಯ. appeared first on Good News 24x7.

]]>
https://www.goodnews24x7.com/%e0%b2%85%e0%b2%b0%e0%b3%8d%e0%b2%a7-%e0%b2%a6%e0%b2%bf%e0%b2%a8%e0%b2%a6%e0%b2%b2%e0%b3%8d%e0%b2%b2%e0%b3%87-308-%e0%b2%95%e0%b3%8b%e0%b2%9f%e0%b2%bf-%e0%b2%b0%e0%b3%82-%e0%b2%ae%e0%b2%a6%e0%b3%8d/feed/ 0 1431