ಹನಿಟ್ರ್ಯಾಪ್ ಹೆಸರಿನಲ್ಲಿ ಎಂಎಲ್ಎ ಹರೀಶ್ ಗೌಡಗೆ ಬ್ಲಾಕ್ ಮೇಲ್! ಕೋಟ್ಯಾಂತರ ರೂಪಾಯಿ ಬೇಡಿಕೆ ಇಟ್ಟಿದ್ದ ಆರೋಪಿಗಳ ಬಂಧನ
ವಿಶ್ವವಿದ್ಯಾಲಯದ ಉಪಕುಲಪತಿಗಳಿಗೆ ಬ್ಲಾಕ್ಮೇಲ್ ಮಾಡಿದ್ರು, ಚಾಮರಾಜ ಕ್ಷೇತ್ರದ ಎಂಎಲ್ಎ ಹರೀಶ್ ಗೌಡ ದೂರಿನ ಅನ್ವಯ ಕೇಸ್ ದಾಖಲು. ಮೈಸೂರು ಮೂಲದ ಸಂತೋಷ್ ಮತ್ತು ಪುಟ್ಟರಾಜು ಬಂಧಿತ ಆರೋಪಿಗಳು. ಆರೋಪಿಗಳು ಗ್ಯಾಂಗ್ ನಲ್ಲಿ ಒರ್ವ ಯುವತಿ ಸಹ ಬಾಗಿ
ಚಾಮರಾಜ ಕ್ಷೇತ್ರದ ಶಾಸಕ ಹರೀಶ್ಗೌಡರಿಗೆ ಹನಿಟ್ರ್ಯಾಪ್ ಹೆಸರಿನಲ್ಲಿ ಬ್ಲಾಕ್ ಮೇಲ್ ಮಾಡಿ ಕೋಟ್ಯಾಂತರ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಮೈಸೂರು ಮೂಲದ ಸಂತೋಷ್ ಮತ್ತು ಪುಟ್ಟರಾಜು ಎನ್ನುವ ಆರೋಪಿಗಳನ್ನ ಬಂಧಿಸಲಾಗಿದೆ. ಇವರ ಜೊತೆಗೆ ಓರ್ವ ಯುವತಿ ಕೂಡ ಭಾಗಿಯಾಗಿರುವ ಮಾಹಿತಿ ಲಭ್ಯವಾಗಿದೆ. ಇವರೆಲ್ಲ ಸೇರಿ ವಿಐಪಿಗಳನ್ನೇ ಟಾರ್ಗೆಟ್ ಮಾಡುತ್ತಿದ್ದರು. ವಿಐಪಿಗಳು ಉಳಿದುಕೊಂಡು ಹೋದ ಹೋಟೆಲ್ ರೂಮ್ ಅನ್ನೇ ಇವರು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಅದೆ ರೂಮ್ಗೆ ಹೋಗಿ ಯುವತಿಯನ್ನು ಬಳಸಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದರು. ಈ ವಿಡಿಯೋ ಹಿಡನ್ ಕ್ಯಾಮೆರಾದಿಂದ ತೆಗೆದ ರೀತಿಯಲ್ಲಿ ಇರುತ್ತಿತ್ತು.