ಬಿಗ್ಬಾಸ್ ಮನೆಯಿಂದ ಲಾಯರ್ ಜಗದೀಶ್, ರಂಜಿತ್ ಔಟ್
ಬಿಗ್ಬಾಸ್ ಮನೆಯಲ್ಲಿ ಸ್ಪರ್ಧಿಗಳೆಲ್ಲರೂ ಜಗದೀಶ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದರಿಂದ ಜಗದೀಶ್ ಕೋಪಗೊಂಡು ಮಹಿಳಾ ಸ್ಪರ್ಧಿಗಳ ವಿರುದ್ಧ ಅಶ್ಲೀಲ ಪದಗಳ ಬಳಕೆ ಮಾಡಿದ್ದಾರೆ. ಹಂಸಾ ವಿರುದ್ಧವಂತೂ ಬಳಸಿದ ಪದ ಮಿತಿಮೀರಿದೆ. ಈ ಮಧ್ಯೆ ರಂಜಿತ್ ಅವರು ಜಗದೀಶ್ ಅವರನ್ನು ತಳ್ಳಿದ್ದಾರೆ. ಇದನ್ನು ಗಮನಿಸಿದ ಬಿಗ್ ಬಾಸ್ ಕೊನೆಗೆ ಕ್ರಮ ಜರುಗಿಸಿ ದೊಡ್ಮನೆಯಿಂದ ಇಬ್ಬರಿಗೆ ಗೇಟ್ ಪಾಸ್ ನೀಡಿದ್ದಾರೆ.
ಜಗದೀಶ್, ಮಹಿಳೆಯರ ಮೇಲೆ ಆದ ನಿಂದನೆ, ಅಪಮಾನವನ್ನು ಬಿಗ್ ಬಾಸ್ ಸಹಿಸಲ್ಲ. ಅಲ್ಲದೇ ರಂಜಿತ್ ಅವರು ದೈಹಿಕವಾಗಿ ಹಲ್ಲೆ ಮಾಡುವುದು ಅಕ್ಷಮ್ಯ ಅಪರಾಧ.. ಈ ಕೂಡಲೇ ಮುಖ್ಯ ದ್ವಾರದ ಮೂಲಕ ಇಬ್ಬರು ಹೊರಗೆ ಬನ್ನಿ ಎಂದು ಬಿಗ್ ಬಾಸ್ ಆದೇಶಿಸಿದ್ದಾರೆ. ಈ ಸಂಬಂಧ ಮನೆಯಲ್ಲಿ ರಂಜಿತ್ ಅವರನ್ನು ತಬ್ಬಿಕೊಂಡು ಮಂಜು ಸೇರಿದಂತೆ ಕೆಲ ಸ್ಪರ್ಧಿಗಳು ಕಣ್ಣೀರು ಹಾಕಿದ್ದಾರೆ.
ಇನ್ನೊಂದೆಡೆ ಲಾಯರ್ ಜಗದೀಶ್ ಅವರು ಬಿಗ್ಬಾಸ್ಗೆ ಥ್ಯಾಂಕ್ಸ್ ಹೇಳಿ, ತಮ್ಮ ಬಟ್ಟೆ ಸೇರಿದಂತೆ ಇತರೆ ವಸ್ತುಗಳನ್ನು ಸೂಟ್ಕೇಸ್, ಬ್ಯಾಗ್ನಲ್ಲಿ ಹಾಕ್ಕೊಂಡು ಹೊರ ಹೋಗಲು ರೆಡಿಯಾಗುತ್ತಿದ್ದರು. ವಿಡಿಯೋದಲ್ಲಿ ಬಿಗ್ಬಾಸ್ ಮುಖ್ಯದ್ವಾರ ಕೂಡ ಓಪನ್ ಆಗಿದೆ. ಇನ್ನು ಉಳಿದ ಸ್ಪರ್ಧಿಗಳೆಲ್ಲ ಸಣ್ಣ ತಪ್ಪಾಗಿದೆ. ದಯವಿಟ್ಟು ಇದೊಂದು ಸಾರಿ ಅವಕಾಶ ಕೊಡಿ ಎಂದು ಬಿಗ್ಬಾಸ್ ಬಳಿ ಮನವಿ ಮಾಡಿದ್ದಾರೆ.