ಸಪ್ತಮಿ ಗೌಡ ಅವರದ್ದು ಎನ್ನಲಾದ ಆಡಿಯೋ ವೈರಲ್!
ಯುವ ರಾಜ್‌ಕುಮಾರ್ – ಶ್ರೀದೇವಿ ಭೈರಪ್ಪ ದಂಪತಿಯ ವಿಚ್ಛೇದನದ ಸುದ್ದಿ ಮಧ್ಯೆ ಸಪ್ತಮಿ ಗೌಡ ಹೆಸರೂ ತಳುಕು ಹಾಕಿಕೊಂಡಿದೆ. ಇದೀಗ ಸಪ್ತಮಿ ಗೌಡ ಅವರದ್ದು ಎನ್ನಲಾದ ಆಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ
‘’ಸಪ್ತಮಿ ಗೌಡ ಹಾಗೂ ಯುವ ರಿಲೇಶನ್‌ಶಿಪ್‌ನಲ್ಲಿದ್ದಾರೆ. ವರ್ಷದಿಂದ ಅಫೇರ್ ಹೊಂದಿದ್ದಾರೆ. ಡಿಸೆಂಬರ್ 2023ರಲ್ಲಿ ನಾನು ಅಮೇರಿಕಾದಿಂದ ಭಾರತಕ್ಕೆ ವಾಪಸ್ ಆದಾಗ ಶಾಕ್ ಆಯ್ತು. ಖಾಸಗಿ ಹೋಟೆಲ್ ರೂಮ್‌ನಲ್ಲಿ ಸಪ್ತಮಿ ಗೌಡ ಜೊತೆ ಯುವ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಅಫೇರ್ ಮುಂದುವರೆಸುವ ಸಲುವಾಗಿ ಬಲವಂತವಾಗಿ ಓದಿನ ನೆಪವೊಡ್ಡಿ ನನ್ನನ್ನ ಅಮೇರಿಕಾಕ್ಕೆ ಕಳುಹಿಸಲಾಯಿತು’’ ಎಂದು ಲೀಗಲ್ ನೋಟೀಸ್‌ಗೆ ನೀಡುವ ಉತ್ತರದಲ್ಲಿ ಶ್ರೀದೇವಿ ಭೈರಪ್ಪ ಆರೋಪಿಸಿದ್ದರು. ಈ ಸಂಬಂಧ ಶ್ರೀದೇವಿ ಭೈರಪ್ಪ ವಿರುದ್ಧ ಸಪ್ತಮಿ ಗೌಡ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಸಪ್ತಮಿ ಗೌಡ ವಿರುದ್ಧ ಶ್ರೀದೇವಿ ಭೈರಪ್ಪ ಮಾನಹಾನಿಕರ ಹೇಳಿಕೆ ನೀಡದಂತೆ ನ್ಯಾಯಾಲಯ ನಿರ್ಬಂಧಕಾಜ್ಞೆ ಆದೇಶ ನೀಡಿತ್ತು.
ಸಪ್ತಮಿ ಗೌಡ ಅವರದ್ದು ಎನ್ನಲಾದ ಆಡಿಯೋವೊಂದು ಸೋಷಿಯಲ್ ಮೀಡಿಯಾದ ತುಂಬೆಲ್ಲಾ ವೈರಲ್ ಆಗಿದೆ. ಆಡಿಯೋದಲ್ಲಿ ಸಪ್ತಮಿ ಗೌಡ ಎನ್ನಲಾಗಿರುವ ಯುವತಿ ಅಳುತ್ತಾ ‘’ನನ್ನ ಸೈಡ್ ಆಫ್ ದಿ ಸ್ಟೋರಿ ಕೇಳಿ.. ನನಗೊಂದು ಚಾನ್ಸ್ ಕೊಡಿ.. ನನ್ನಿಂದ ತಪ್ಪಾಗಿದೆ’’ ಅಂತ ಮನವಿ ಮಾಡಿದ್ದಾರೆ. ವರದಿಗಳ ಪ್ರಕಾರ, ನಿರ್ದೇಶಕರಿಗೆ / ನಿರ್ಮಾಪಕರಿಗೆ ಕಳುಹಿಸಲಾಗಿರುವ ಆಡಿಯೋ ಇದು ಎನ್ನಲಾಗಿದೆ