ನಟ ಕಿರಣ್ ರಾಜ್ ಪ್ರಯಾಣಿಸುತ್ತಿದ್ದ ಕಾರು ಅಪಘಾತ
ಕನ್ನಡತಿ ಮೂಲಕ ಇಡೀ ಕನ್ನಡಿಗರ ಮನೆ ಹಾಗೂ ಮನವನ್ನು ತಲುಪಿದ ನಟ ಕಿರಣ್ ರಾಜ್ ಸಿನಿಮಾ ನಾಳೆ ರಿಲೀಸ್ ಆಗುತ್ತಿದೆ. ಆದರೆ ಇದರ ಮಧ್ಯೆ ನಟ ಕಿರಣ್ ರಾಜ್ ಕಾರಿಗೆ ಅಪಘಾತವಾಗಿದೆ.
ಸೀರಿಯಲ್ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದ ಕನ್ನಡದ ನಟ ಕಿರಣ್ ರಾಜ್ ಕಾರು ಅಪಘಾತಕ್ಕಿಡಾಗಿದೆ. ನಟ ಕಿರಣ್ ರಾಜ್ ಅವರು ಇದ್ದ ಕಾರು ಕೆಂಗೇರಿ ಬಳಿ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಕಾರು ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ಕಿರಣ್ ರಾಜ್ ಅವರ ಎದೆಯ ಭಾಗಕ್ಕೆ ಭಾರೀ ಪೆಟ್ಟು ಬಿದ್ದಿದೆ. ಆ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.