ರೇಣುಕಾಸ್ವಾಮಿ ಕೊ* ಕೇಸ್ನಲ್ಲಿ ಜೈಲು ಪಾಲಾಗಿದ್ದ ದರ್ಶನ್ಗೆ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದ ದರ್ಶನ್ಗೆ ಬೆನ್ನು ಹುರಿ ನೋಡುವ ಕಾಣಿಸಿಕೊಂಡಿತ್ತು. ಇದೇ ವಿಚಾರವಾಗಿ ಚಿಕಿತ್ಸೆಗೆಂದು ದರ್ಶನ್ ಪರವಾದ ಲಾಯರ್ ಬೇಲ್ಗೆ ಅರ್ಜಿ ಸಲ್ಲಿಸಿದ್ದರು. ದರ್ಶನ್ ವೈದ್ಯಕೀಯ ವರದಿಯನ್ನು ಪರಿಶೀಲಿಸಿದ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ.
ಬಳ್ಳಾರಿ ಜೈಲಿಗೆ ಸೇರಿದ ದರ್ಶನ್ ಅಲ್ಲಿ 63 ಕಳೆದಿದ್ದಾರೆ. ಇದರ ನಡುವೆ ಬೆನ್ನು ನೋವು ಕಾಣಿಸಿಕೊಂಡಿದೆ. ಇದೀಗ ಹೈಕೋರ್ಟ್ ದರ್ಶನ್ ಬೆನ್ನು ನೋವಿನ ಚಿಕಿತ್ಸೆಗಾಗಿ ಮಧ್ಯಂತರ ಜಾಮೀನು ನೀಡಿದೆ. ಮಧ್ಯಂತರವೆಂದರೆ ತಾತ್ಕಾಲಿಕ ಜಾಮೀನು ಆಗಿದ್ದು, ಕೋರ್ಟ್ ಆದೇಶದಂತೆ ಆರೋಪಿಯು ನಿರ್ದಿಷ್ಟ ಅವಧಿಯವರೆಗೆ ಈ ಜಾಮೀನು ನೀಡಿದೆ. ಅದರಂತೆಯೇ ದರ್ಶನ್ ವಿಚಾರದಲ್ಲಿ 6 ವಾರಗಳ ಕಾಲ ಮಧ್ಯಂತರ ಜಾಮೀನು ಸಿಕ್ಕಿದೆ.