ರಶ್ಮಿಕಾ ಮಂದಣ್ಣ ಬಳಿಕ ಮತ್ತೊರ್ವ ಕೊಡಗಿನ ಕುವರಿ ರೀಷ್ಮಾ ಚಿತ್ರರಂಗದಲ್ಲಿ ಸದ್ದು ಮಾಡುತ್ತಿದ್ದಾರೆ. ಸ್ಟಾರ್ ನಟರ ಸಿನಿಮಾಗೆ ನಾಯಕಿಯಾಗಿ ನಟಿಸಲು ರೀಷ್ಮಾಗೆ ಬುಲಾವ್ ಬರುತ್ತಿದೆ. ಈಗ ಧನಂಜಯ ನಟನೆಯ ‘ಅಣ್ಣ ಫ್ರಂ ಮೆಕ್ಸಿಕೋ’ ಕೆಡಿ ಹೀರೋಯಿನ್ ರೀಷ್ಮಾ ನಾಯಕಿಯಾಗಿ ಫೈನಲ್ ಆಗಿದ್ದಾರೆ.
ಈ ಚಿತ್ರದಲ್ಲಿ ರೀಷ್ಮಾ ಪಾತ್ರಕ್ಕೂ ಪ್ರಾಮುಖ್ಯತೆ ಇದೆ. ಎಂದೂ ನಟಿಸಿರದ ಡಿಫರೆಂಟ್ ರೋಲ್ನಲ್ಲಿ ನಟಿ ಕಾಣಿಸಿಕೊಳ್ತಿದ್ದಾರೆ.’ಬಡವ್ ರಾಸ್ಕರ್’ ನಿರ್ದೇಶಕ ಶಂಕರ್ ಗುರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಸತ್ಯ ರಾಯಲ ನಿರ್ಮಾಣ ಮಾಡುತ್ತಿದ್ದಾರೆ
ಅಂದಹಾಗೆ, 2022ರಲ್ಲಿ ತೆರೆಕಂಡ ‘ಎಕ್ ಲವ್ ಯಾ’ ಚಿತ್ರದ ಮೂಲಕ ರಾಣಾಗೆ ನಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಸಿನಿಮಾಗೆ ಜೋಗಿ ಪ್ರೇಮ್ ನಿರ್ದೇಶನ ಮಾಡಿದರು