2ನೇ ಮಗುವಿಗೆ ಜನ್ಮ ನೀಡಿದ ತ್ರಿಷಿಕಾ ಕುಮಾರಿ
ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮದಲ್ಲಿರುವ ರಾಜವಂಶಸ್ಥ ಕುಟುಂಬಕ್ಕೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ರಾಜವಂಶಸ್ಥ ಯದುವೀರ್ ಒಡೆಯರ್ ಅವರ ಪತ್ನಿ ತ್ರಿಷಿಕಾ ಕುಮಾರಿ ಒಡೆಯರ್ ಅವರು 2ನೇ ಮಗುವಿಗೆ ಜನ್ಮ ನೀಡಿದ್ದಾರೆ.
ವಿಜಯದಶಮಿಗೆ ಒಂದು ದಿನ ಬಾಕಿಯಿದ್ದು, ದಸರಾ ಜಂಬೂ ಸವಾರಿಗೆ ಸಕಲ ತಯಾರಿಗಳು ಭರದಿಂದ ಸಾಗುತ್ತಲೇ ಇವೆ. ಈಗಲೂ ಅರಮನೆಯಲ್ಲಿ ಆಯುಧಪೂಜೆಯ ಕೈಂಕರ್ಯಗಳು ನೆರವೇರುತ್ತಲೇ ಇವೆ. ಈ ಹೊತ್ತಿನಲ್ಲೇ ಸಂಸದ ಹಾಗೂ ರಾಜವಂಶಸ್ಥ ಯದುವೀರ್‌ಗೆ 2ನೇ ಮಗುವಿನ ಜನನವಾಗಿದೆ.