ಸಿದ್ದರಾಮಯ್ಯ ತವರಲ್ಲೇ ಕಾಂಗ್ರೆಸ್ ನಾಯಕರ ರಹಸ್ಯ ಸಭೆ ; ರಾಜ್ಯದಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ
ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ಹೊತ್ತಲ್ಲೇ ಸಿದ್ದರಾಮಯ್ಯ ತವರಿನಲ್ಲಿ ದಲಿತ ಮುಖಂಡರ ಸಭೆ ನಡೆದಿದೆ. ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಯನ್ನ ಹುಟ್ಟುಹಾಕಿದೆ. ಹೌದು, ಡಿನ್ನರ್ ನೆಪದಲ್ಲಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮನೆಯಲ್ಲಿ ನಿನ್ನೆ ಡಾ.ಜಿ.ಪರಮೇಶ್ವರ್, ಸತೀಶ್ ಜಾರಕಿಹೊಳಿ, ಡಾ.ಮಹದೇವಪ್ಪ ಚರ್ಚೆ ನಡೆಸಿದದ್ದಾರೆ.
ಸಿಎಂ ಬದಲಾವಣೆ ಕೂಗು ಬೆನ್ನಲ್ಲೇ ದಲಿತ ನಾಯಕರ ಚರ್ಚೆ ಇದೀಗ ಭಾರೀ ಮಹತ್ವ ಪಡೆದುಕೊಂಡಿದೆ. ನಿನ್ನೆ ಬೆಳಗ್ಗೆಯಿಂದಲೂ ಸಚಿವ ಸತೀಶ್ ಜಾರಕಿಹೊಳಿ ಮೈಸೂರಿನಲ್ಲೇ ಇದ್ದಾರೆ. ಜಾರಕಿಹೊಳಿ ಸ್ಥಳೀಯ ಶಾಸಕರು ಹಾಗೂ ನಾಯಕರ ಭೇಟಿಗೆ ಮುಂದಾಗಿದ್ದರು. ತಡರಾತ್ರಿ ಮೂವರು ನಾಯಕರ ಮೀಟಿಂಗ್ ಭಾರಿ ಮಹತ್ವ ಪಡೆದುಕೊಂಡಿದೆ.
ಈ ವೇಳೆ 10 ಶಾಸಕರು ಕೂಡ ಜೊತೆಗಿದ್ದರು. ಇಂದು ಸಂಜೆ ಸಚಿವ ಸತೀಶ್ ಜಾರಕಿಹೊಳಿ ಎಸ್ಟಿ ಶಾಸಕರ ನಿಯೋಗದ ಜೊತೆ ತೆರಳಿ ಸಿದ್ದರಾಮಯ್ಯ ಭೇಟಿ ಆಗಲಿದ್ದಾರೆ. ಒಟ್ಟಾರೆ ಮುಡಾ ಪ್ರಕರಣ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ವಿಪಕ್ಷಗಳು ಪಟ್ಟು ಹಿಡಿದಿವೆ. ಈ ಬೆನ್ನಲ್ಲೇ ದಲಿತ ಸಿಎಂ ವಿಚಾರ ಚರ್ಚೆಗೆ ಬಂದಿದೆ. ಹೀಗಾಗಿ ಸಚಿವರ ಮೇಲಿಂದ ಮೇಲೆ ಸಭೆ ನಡೆಸುವ ಮೂಲಕ ಕುತೂಹಲ ಕೆರಳಿಸಿದ್ದಾರೆ.