ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಮೊಯಿನ್ ಅಲಿ
ಇಂಗ್ಲೆಂಡ್ನ ಆಲ್ರೌಂಡರ್ ಮೊಯಿನ್ ಅಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಮೊಯೀನ್ ಅಲಿ 2019 ರಲ್ಲಿ ಏಕದಿನ ವಿಶ್ವಕಪ್ ಹಾಗೂ 2022 ರಲ್ಲಿ ಟಿ20 ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡದ ಭಾಗವಾಗಿದ್ದರು. ಇದೀಗ ಮುಂಬರುವ ದಿನಗಳಲ್ಲಿ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಸಿಗುವುದಿಲ್ಲ ಎಂದರಿತಿರುವ ಮೊಯೀನ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ.
37 ವರ್ಷದ ಮೊಯಿನ್ ಅಲಿ ಇಂಗ್ಲೆಂಡ್ ಪರ 68 ಟೆಸ್ಟ್, 138 ಏಕದಿನ, 92 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್ ತಂಡವು 2019ರಲ್ಲಿ ಏಕದಿನ ವಿಶ್ವಕಪ್, 2022ರಕ್ಕು ಟಿ-20 ವಿಶ್ವಕಪ್ ಗೆದ್ದುಕೊಂಡಿತ್ತು. ಮೊಯಿನ್ ಅಲಿ ಆ ತಂಡದ ಭಾಗವಾಗಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದರೂ, ಐಪಿಎಲ್ನಂತ ಟೂರ್ನಿಗಳಲ್ಲಿ ಅವರು ಆಡಲಿದ್ದಾರೆ.