ದಕ್ಷಿಣ ಡೈರಿ ಶೃಂಗಸಭೆ-2025 ರ ‘ಅತ್ಯುತ್ತಮ ಹೈನುಗಾರ್ತಿ’ ಪ್ರಶಸ್ತಿ ಸ್ವೀಕರಿಸಿದ ಪಾಂಡವಪುರದ ರೈತ ಮಹಿಳೆ ಮಂಗಳಮ್ಮ.

ಪಾಂಡವಪುರ :- ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕು ಡಿಂಕ ಗ್ರಾಮದ ಅವಿದ್ಯಾವಂತ ರೈತ ಮಹಿಳೆಯೋರ್ವರು ಹೈನುಗಾರಿಕೆಯಿಂದಲೇ ಸಾಧನೆಗೈದು ಶನಿವಾರ ಬೆಂಗಳೂರಿನಲ್ಲಿ ನಡೆದ ದಕ್ಷಿಣ ಡೈರಿ ಶೃಂಗಸಭೆಯಲ್ಲಿ ‘ಅತ್ಯುತ್ತಮ ಹೈನು ಗಾರ್ತಿ’ ಪ್ರಶಸ್ತಿ ಸ್ವೀಕರಿಸಿದರು.
ಭಾರತೀಯ ಡೈರಿ ಅಸೋಸಿಯೇಷನ್, ದಕ್ಷಿಣ ವಲಯ ಆಯೋಜಿಸಿದ್ದ ದಕ್ಷಿಣ ಡೈರಿ ಶೃಂಗಸಭೆ-2025ರ ಅಂತಿಮ ದಿನವಾದ ಶನಿ ವಾರದಂದು ದಕ್ಷಿಣ ಭಾರತದ ಮಹಿಳಾ ಡೈರಿ ರೈತರ ಶ್ರಮವನ್ನು ಪುರಸ್ಕರಿಸಿ ರಾಜ್ಯವಾರು 2024ರ ‘ಅತ್ಯುತ್ತಮ ಹೈನುಗಾರ್ತಿ’ ಪ್ರಶಸ್ತಿ ಪ್ರದಾನ ಮಾಡಿದ್ದು, ಕರ್ನಾಟಕದಿಂದ ಪಾಂಡವ ಪುರ ತಾಲೂಕಿನ ಡಿಂಕ ಗ್ರಾಮದ ಮಂಗಳಮ್ಮ ಈ ಪ್ರಶಸ್ತಿ ಪಡೆದರೆ, ಆಂಧ್ರಪ್ರದೇಶದಿಂದ ನವೀನಕುಮಾರಿ, ಕೇರಳ ಮತ್ತು ಲಕ್ಷದ್ವೀಪ ದಿಂದ ವಿಧು ರಾಜೀವ್, ತೆಲಂಗಾಣದಿಂದ ಪುಧಾರಿ ಗಂಗವ್ವ ಮತ್ತು ಪುದುಚೇರಿಯಿಂದ ಸೆಲ್ವನಾಯಕಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡ ಲಾಯಿತು. ಈ ಸಮಾರಂಭದಲ್ಲಿ ರಾಜ್ಯದ ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಾಧಕ ಮಹಿಳೆಯರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಪಾಂಡವಪುರ ತಾಲೂಕು ಡಿಂಕ ಗ್ರಾಮದ ಮಹದೇವಪ್ಪ ಅವರ ಪತ್ನಿ ಮಂಗಳಮ್ಮ ಓದಿದ್ದು ಕೇವಲ 5ನೇ ತರಗತಿ. ಆದರೆ ತಮಗಿದ್ದ 2 ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡುತ್ತಾ ಸುಮಾರು 20 ವರ್ಷಗಳ ಹಿಂದೆ ಒಂದು ಹಸುವನ್ನು ಸಾಕಲಾರಂಭಿಸಿದರು. ನಂತರ ಹಂತ-ಹಂತವಾಗಿ ಈಗ 30 ಹಸು ಗಳಿರುವ ಫಾರಂ ಅನ್ನೇ ತಮ್ಮ ಜಮೀನಿನಲ್ಲಿ ಸ್ಥಾಪಿಸಿದ್ದಾರೆ. ಅಲ್ಲದೇ ಅದೇ ಜಮೀನಿನ
ಪ್ರಶಸ್ತಿ ಸ್ವೀಕರಿಸಿದ ನಂತರ ಡಿಂಕ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಹಾಗೂ ಇನ್ನಿತರರೊಂದಿಗೆ ಬಹುಮಾನ ಚೆಕ್ ಪ್ರದರ್ಶಿಸುತ್ತಿರುವ ಮಂಗಳಮ್ಮಒಂದು ಭಾಗದಲ್ಲಿ ಹಸಿಗಳಿಗೆ ಮೇವು ಬೆಳೆಸುತ್ತಿದ್ದಾರೆ. ಡಿಂಕ ಗ್ರಾಮದ ಹಾಲು ಉತ್ಪಾದಕರ ಸಹ ಕಾರಿ ಸಂಘದ ಸದಸ್ಯರಾಗಿರುವ ಮಂಗಳಮ್ಮ 2024ನೇ ವರ್ಷದಲ್ಲಿ ಡೈರಿಗೆ 1,01,915 ಲೀಟರ್ ಹಾಲು ಸರಬರಾಜು ಮಾಡಿ 33 ಲಕ್ಷ ರೂ. ಆದಾಯ ಗಳಿಸುವ ಮೂಲಕ ಹೈನುಗಾರಿಕೆಯಲ್ಲಿ ಸಾಧನೆ ಮಾಡಿ ದಕ್ಷಿಣ ಡೈರಿ ಶೃಂಗಸಭೆಯಲ್ಲಿ ಅತ್ಯುತ್ತಮ ಹೈನುಗಾರ್ತಿ ಪ್ರಶಸ್ತಿ ಪಡೆದಿದ್ದಾರೆ.
ಈಕೆ ಅವಿದ್ಯಾವಂತೆಯಾದರೂ, ಹಾಲು ಮಾರಿದ ಹಣದಲ್ಲೇ ತಮ್ಮ ಪುತ್ರ ದಿನೇಶ್ ನನ್ನು ಐಟಿಐವರೆಗೆ ಓದಿಸಿದ್ದಲ್ಲದೇ, ಪುತ್ರಿ ದಿವ್ಯಾರನ್ನು ಇಂಜಿನಿಯರಿಂಗ್ ಪದವೀಧರೆ ಮಾಡಿದ್ದಾರೆ. ಈಗ ಐಟಿಐ ಓದಿರುವ ದಿನೇಶ್ ಅವರು ತನ್ನ ತಂದೆ ಮತ್ತು ತಾಯಿಗೆ ಹಸುಗಳ ಫಾರಂನಲ್ಲಿ ಸಹಾಯಕರಾಗಿದ್ದು, ಹೈನುಗಾರಿಕೆಯಲ್ಲಿ ತಾಯಿಯ ಜೊತೆ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಡಿಂಕ ಗ್ರಾಮದ ಮಂಗಳಮ್ಮ ಅವರು ತಮ್ಮ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಜಿಲ್ಲೆಯಲ್ಲಿಯೇ ಹೆಚ್ಚು ಪ್ರಮಾಣದ ಹಾಲು ಸರಬರಾಜು ಮಾಡುವ ಮೂಲಕ ಕಳೆದ ವರ್ಷ 33 ಲಕ್ಷ ರೂ. ಸಂಪಾದನೆ ಮಾಡುವ ಮೂಲಕ ಕುಟುಂಬದ ಆರ್ಥಿಕ ಸ್ಥಿತಿ ಉತ್ತಮಪಡಿಸಿಕೊಂಡಿದ್ದು ಮಾತ್ರವಲ್ಲದೆ, ದಕ್ಷಿಣ ಡೈರಿ ಶೃಂಗ ಸಭೆಯಲ್ಲಿ ಪ್ರಶಸ್ತಿ ಪಡೆಯುವ ಮೂಲಕ ಮಂಡ್ಯ ಜಿಲ್ಲೆಗೆ ಮಾತ್ರವಲ್ಲದೆ ಇಡೀ ರಾಜ್ಯಕ್ಕೆ ಹೆಮ್ಮೆ ಎನಿಸಿದ್ದಾರೆ.

Related Posts

ದಳಪತಿ ವಿಜಯ್ ನಟನೆಯ ಕೊನೆಯ ಚಿತ್ರಕ್ಕೆ… ಮೊದಲ ಚಿತ್ರದ ಟೈಟಲ್!

ದಳಪತಿ ವಿಜಯ್ ಅವರ ಹೊಸ ಚಿತ್ರಕ್ಕೆ ‘ನಾಲೈಯ ತೀರ್ಪು’ ಎಂದು ಹೆಸರಿಡಲಾಗಿದೆ. ಇದು ಅವರ ಮೊದಲ ಚಿತ್ರದ ಹೆಸರೇ ಆಗಿದೆ. ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ ನಿರ್ಮಿಸುತ್ತಿದ್ದು, ಪೂಜಾ ಹೆಗ್ಡೆ ಮತ್ತು ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 250-275 ಕೋಟಿ…

ಸುತ್ತೂರು ಜಾತ್ರೆ : ಅನ್ನ ದಾಸೋಹಕ್ಕೆ ಚಾಲನೆ ನೀಡಿದ ಸುತ್ತೂರು ಶ್ರೀಗಳು

ಜನವರಿ 26 ರಿಂದ 31ರ ವರೆಗೆ 6 ದಿನಗಳ ಕಾಲ ನಡೆಯಲಿರುವ ಶಿವರಾತ್ರಿಶ್ವರ ಶಿವಯೋಗಿಯವರ ಜಾತ್ರಾ ಮಹೋತ್ಸದ ಅಂಗವಾಗಿ ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಗದ್ದುಗೆಗೆ ಪೂಜೆ ಸಲ್ಲಿಸಿ, ನಂತರ ಅನ್ನ ದಾಸೋಹಕ್ಕೆ ಚಾಲನೆ ನೀಡಿದರು. ನಾಳೆಯಿಂದ 6 ದಿನಗಳ ಕಾಲ…

Leave a Reply

Your email address will not be published. Required fields are marked *

You Missed

ದಳಪತಿ ವಿಜಯ್ ನಟನೆಯ ಕೊನೆಯ ಚಿತ್ರಕ್ಕೆ… ಮೊದಲ ಚಿತ್ರದ ಟೈಟಲ್!

ದಳಪತಿ ವಿಜಯ್ ನಟನೆಯ ಕೊನೆಯ ಚಿತ್ರಕ್ಕೆ… ಮೊದಲ ಚಿತ್ರದ ಟೈಟಲ್!

ಸುತ್ತೂರು ಜಾತ್ರೆ : ಅನ್ನ ದಾಸೋಹಕ್ಕೆ ಚಾಲನೆ ನೀಡಿದ ಸುತ್ತೂರು ಶ್ರೀಗಳು

ಸುತ್ತೂರು ಜಾತ್ರೆ : ಅನ್ನ ದಾಸೋಹಕ್ಕೆ ಚಾಲನೆ ನೀಡಿದ ಸುತ್ತೂರು ಶ್ರೀಗಳು

‘ಬಿಗ್ ಬಾಸ್ ಕನ್ನಡ ಸೀಸನ್ 11 ರ ಫಿನಾಲೆ ವೇದಿಕೆಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟ ಕಿಚ್ಚ.

‘ಬಿಗ್ ಬಾಸ್ ಕನ್ನಡ ಸೀಸನ್ 11 ರ ಫಿನಾಲೆ ವೇದಿಕೆಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟ ಕಿಚ್ಚ.

ಕನ್ನಡ ಬಿಗ್ ಬಾಸ್ ಸೀಸನ್ 11ರ ಮಾಜಿ ಸ್ಪರ್ಧಿ ಲಾಯರ್ ಜಗದೀಶ್ ಬಂಧನ.

ಕನ್ನಡ ಬಿಗ್ ಬಾಸ್ ಸೀಸನ್ 11ರ ಮಾಜಿ ಸ್ಪರ್ಧಿ ಲಾಯರ್ ಜಗದೀಶ್ ಬಂಧನ.