ಒಂದೇ ಕುಟುಂಬದ ನಾಲ್ವರು ಆತ್ಮಹ* ; ತಿರುವಣ್ಣಾಮಲೈಯ ಬಾಡಿಗೆಗಿದ್ದ ಫಾರ್ಮ್ಹೌಸ್ನಲ್ಲಿ ಘಟನೆ.

ತಮಿಳುನಾಡು : ತಿರುವಣ್ಣಾಮಲೈ ಗಿರಿವಾಲಂ ಪಾಥ್ನಲ್ಲಿರುವ ತೋಟದ ಮನೆಯಲ್ಲಿ ಬಾಡಿಗೆಗೆ ತಂಗಿದ್ದ ಚೆನ್ನೈ ಮೂಲದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ನಡೆದಿದೆ.
ತಿರುವಣ್ಣಾಮಲೈ ಗಿರಿವಾಲಂ ಪಾಥ್ನಲ್ಲಿ ಅನೇಕ ವಸತಿ ನಿಲಯಗಳು, ಅಪಾರ್ಟ್ಮೆಂಟ್ಗಳು ಹಾಗೂ ಫಾರ್ಮ್ಹೌಸ್ಗಳಿವೆ. ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಅಣ್ಣಾಮಲೈ ದೇವರ ದರ್ಶನಕ್ಕೆ ಬರುವ ಭಕ್ತರು ಇಲ್ಲಿ ತೋಟದ ಮನೆಗಳನ್ನು ಬಾಡಿಗೆ ಪಡೆಯುವುದು ಸಾಮಾನ್ಯ. ಹೀಗೆ ಡಿ.26ರಂದು ಚೆನ್ನೈನ ವ್ಯಾಸರಪಾಡಿಯ ಈ ನಾಲ್ವರು ಆನ್ಲೈನ್ ಮೂಲಕ ಗಿರಿವಾಲಂ ಪಾಥ್ನಲ್ಲಿರುವ ಫಾರ್ಮ್ ಹೌಸ್ ಬುಕ್ ಮಾಡಿದ್ದು, ಶುಕ್ರವಾರ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ತೋಟದ ಮನೆಗೆ ಚೆಕ್ಇನ್ ಆಗಿದ್ದರು.

ಶನಿವಾರ ಬೆಳಗ್ಗೆ ಫಾರ್ಮ್ಹೌಸ್ ಸಿಬ್ಬಂದಿ ಅವರು ತಂಗಿದ್ದ ಕೊಠಡಿಯ ಬಾಗಿಲು ತಟ್ಟಿದ್ದು, ಎಷ್ಟೋ ಸಮಯವಾದರೂ ಬಾಗಿಲು ತೆರೆದಿರಲಿಲ್ಲ. ಎಷ್ಟೋ ಹೊತ್ತು ಬಡಿದರೂ ಬಾಗಿಲು ತೆರೆಯದ ಕಾರಣ ಬುಕ್ಕಿಂಗ್ ವೇಳೆ ನೀಡಿದ್ದ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿದ್ದರು. ಫೋನ್ ರಿಂಗಾಗುತ್ತಲೇ ಇತ್ತು. ಆದರೆ ಯಾರೂ ಕರೆ ಸ್ವೀಕರಿಸಲಿಲ್ಲ. ಬಳಿಕ ಕೊಠಡಿಯ ಕಿಟಕಿಯಿಂದ ನೋಡಿದಾಗ ನಾಲ್ವರು ಪ್ರಜ್ಞೆಹೀನ ಸ್ಥಿತಿಯಲ್ಲಿ ಮಲಗಿರುವ ಹಾಗೆ ಬಂದಿತ್ತು. ಇದರಿಂದ ಗಾಬರಿಗೊಂಡ ಫಾರ್ಮ್ ಹೌಸ್ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ನೀಡುತ್ತಿದ್ದಂತೆ ತಿರುವಣ್ಣಾಮಲೈ ಜಿಲ್ಲಾ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಸತೀಶ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಅವರು ತಂಗಿದ್ದ ಕೊಠಡಿಯ ಬೀಗ ಒಡೆದು ಒಳಗೆ ಹೋಗಿದ್ದಾರೆ.

ಮಾಧ್ಯಮಗಳ ಜೊತೆಗೆ ಮಾತನಾಡಿದ ಜಿಲ್ಲಾ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಸತೀಶ್ ಕುಮಾರ್, “ಕೊಠಡಿಯ ಬಾಗಿಲು ಒಡೆದು ಒಳಗೆ ಹೋಗಿ ನೋಡಿದಾಗ ನಾಲ್ವರೂ ಶವವಾಗಿ ಪತ್ತೆಯಾಗಿದ್ದಾರೆ. ಮೃತರನ್ನು ರುಕ್ಮಿಣಿ ಪ್ರಿಯಾ (45), ಮಹಾಕಾಳ ವ್ಯಾಸ (55), ಮುಕುಂದ್ ಆಕಾಶ್ ಕುಮಾರ್ (17) ಮತ್ತು ಜಲಂಧರಿ (20) ಎಂದು ಗುರುತಿಸಲಾಗಿದೆ. ನಾಲ್ವರೂ ಶಿವಗಂಗೈ ಜಿಲ್ಲೆಯವರಾಗಿದ್ದು, ಚೆನ್ನೈನಲ್ಲಿ ನೆಲೆಸಿದ್ದಾರೆ. ಚೆನ್ನೈನಿಂದ ತಿರುವಣ್ಣಾಮಲೈಗೆ ಬಂದಿದ್ದರು. ನಾಲ್ವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ತಿರುವಣ್ಣಾಮಲೈ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಿದ್ದೇವೆ” ಎಂದು ತಿಳಿಸಿದರು.
“ಅವರು ತಂಗಿದ್ದ ಕೊಠಡಿಯಲ್ಲಿ ಡೆತ್ ನೋಟ್ ಹಾಗೂ ವಿಡಿಯೋ ದೊರೆತಿದೆ. ಅದರಲ್ಲಿರುವ ಮಾಹಿತಿ ಪ್ರಕಾರ ತಿರುವಣ್ಣಾಮಲೈನಲ್ಲಿ ಸಾವನ್ನಪ್ಪಿದರೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆಯಿಂದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ. ಅವರ ಸಂಬಂಧಿಕರು ಹಾಗೂ ಸ್ನೇಹಿತರನ್ನು ಕೂಡ ಈ ಕುರಿತು ವಿಚಾರಣೆ ನಡೆಸಲಾಗುವುದು” ಎಂದು ಮಾಹಿತಿ ನೀಡಿದರು.

Related Posts

ನಿರ್ಮಿತಿ ಕೇಂದ್ರದ ಇಂಜಿನಿಯರ್ ಲಾಡ್ಜ್ನಲ್ಲಿ ಆ*ಹತ್ಯೆ, ಸಾ*ನ ಬಗ್ಗೆ ಸಾಕಷ್ಟು ಅನುಮಾನ.

ಗದಗ : ನಿರ್ಮಿತಿ ಕೇಂದ್ರದ ಇಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗನ ಪಲ್ಲವಿ ಲಾಡ್ಜ್ನಲ್ಲಿ ನಡೆದಿದೆ. ಗದಗ ನಗರದ ನಿವಾಸಿಯಾಗಿರುವ ಶಂಕರಗೌಡ ಪಾಟೀಲ್ (54) ಆತ್ಮಹತ್ಯೆ ಮಾಡಿಕೊಂಡಿರುವ ಇಂಜಿನಿಯರ್. ಇಂದು (ಡಿಸೆಂ 03) ಬೆಳಗ್ಗೆ 7.30ಕ್ಕೆ ಮನೆಯಿಂದ ಹೊರಬಂದಿದ್ದ ಶಂಕರಗೌಡ ಪಾಟೀಲ್…

ಕೋವಿಡ್-19 ನಂತರ HMPV ಹೊಸ ವೈರಸ್ ಆತಂಕ…!!

ಕೋವಿಡ್ ವೈರಸ್ ಜಗತ್ತನ್ನು ಕಾಡಿದ ಐದು ವರ್ಷಗಳ ಬಳಿಕ ಇದೀಗ ಚೀನಾದಲ್ಲಿ ಮತ್ತೊಂದು ವೈರಸ್ ವೇಗವಾಗಿ ಹರಡುತ್ತಿರುವ ಕುರಿತು ವರದಿಯಾಗಿದೆ. ಅದುವೇ, ‘ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್’ (human metapneumo virus or HMPV) ಈ ವರ್ಷ ಆರಂಭದಲ್ಲಿ ಚೀನಾದಲ್ಲಿ ಕಾಣಿಸಿಕೊಂಡಿರುವ ಹೊಸ…

Leave a Reply

Your email address will not be published. Required fields are marked *

You Missed

ನಿರ್ಮಿತಿ ಕೇಂದ್ರದ ಇಂಜಿನಿಯರ್ ಲಾಡ್ಜ್ನಲ್ಲಿ ಆ*ಹತ್ಯೆ, ಸಾ*ನ ಬಗ್ಗೆ ಸಾಕಷ್ಟು ಅನುಮಾನ.

ನಿರ್ಮಿತಿ ಕೇಂದ್ರದ ಇಂಜಿನಿಯರ್ ಲಾಡ್ಜ್ನಲ್ಲಿ  ಆ*ಹತ್ಯೆ, ಸಾ*ನ ಬಗ್ಗೆ ಸಾಕಷ್ಟು ಅನುಮಾನ.

ಕೋವಿಡ್-19 ನಂತರ HMPV ಹೊಸ ವೈರಸ್ ಆತಂಕ…!!

ಕೋವಿಡ್-19 ನಂತರ HMPV ಹೊಸ ವೈರಸ್  ಆತಂಕ…!!

ಮುದ್ದಾದ ಅವಳಿ ಮಕ್ಕಳ ಜೀವ ತೆಗೆದ ತಾಯಿ., ರಾಜಸ್ಥಾನದಲ್ಲಿ ಹೃದಯ ವಿದ್ರಾವಕ ಘಟನೆ.

ಮುದ್ದಾದ ಅವಳಿ ಮಕ್ಕಳ ಜೀವ ತೆಗೆದ ತಾಯಿ., ರಾಜಸ್ಥಾನದಲ್ಲಿ ಹೃದಯ ವಿದ್ರಾವಕ  ಘಟನೆ.

11 ವರ್ಷದ ಮಗಳಿಂದ ತಂದೆಯ ಅಂತ್ಯಸಂಸ್ಕಾರ.

11 ವರ್ಷದ ಮಗಳಿಂದ ತಂದೆಯ ಅಂತ್ಯಸಂಸ್ಕಾರ.

ಬಸ್‌ ಪ್ರಯಾಣ ದರ ಶೇ 15ರಷ್ಟು ಏರಿಕೆ : ಕರ್ನಾಟಕದ ಜನರಿಗೆ ಬಿಗ್ ಶಾಕ್.

ಬಸ್‌ ಪ್ರಯಾಣ ದರ ಶೇ 15ರಷ್ಟು ಏರಿಕೆ : ಕರ್ನಾಟಕದ ಜನರಿಗೆ ಬಿಗ್ ಶಾಕ್.

ಕೆರೆಗೆ ಬಿದ್ದ ಕಾರು ; ಇಬ್ಬರು ಸಾ*, ಓರ್ವ ಬಚಾವ್ .

ಕೆರೆಗೆ ಬಿದ್ದ ಕಾರು ;  ಇಬ್ಬರು ಸಾ*, ಓರ್ವ ಬಚಾವ್ .