ಮೈಸೂರು: ಕೆ.ಆರ್.ನಗರದ ವಿಜಯನಗರ ಬಡಾವಣೆಯ ನಿವಾಸಿ, ಸಮಾಜ ಸೇವಕ ಮತ್ತು ರಾಷ್ಟ್ರಮಟ್ಟದ ಅಬ್ದುಲ್ ಕಲಾಂ ಪ್ರಶಸ್ತಿ ವಿಜೇತ ವಿನಯಕುಮಾರ.ಟಿ.ಎನ್‌ರವರ ನಿರಂತರ ಸೇವೆಯನ್ನು ಗುರುತಿಸಿ, ತಮಿಳುನಾಡು ಹೊಸೂರಿನ ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ಯುನಿವರ್ಸಿಟಿಯ ೯ನೇ ವರ್ಷದ ಘಟಿಕೋತ್ಸವ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ.
ವಿನಯಕುಮಾರ ಅವರು ಸುಮಾರು ೯ ವರ್ಷಗಳಿಂದ ಸಮಾಜ ಸೇವೆಯಲ್ಲಿ ಸಕ್ರಿಯರಾಗಿದ್ದು, ಈಗಾಗಲೇ ಇವರ ಸಮಾಜ ಸೇವೆಗೆ ಹಲವು ರಾಷ್ಟ್ರಮಟ್ಟದ ಹಾಗೂ ರಾಜ್ಯಮಟ್ಟದ ಪ್ರಶಸ್ತಿಗಳು ಕೂಡ ಲಭಿಸಿವೆ.
ಡಾಕ್ಟರೇಟ್ ಪಡೆದ ನಂತರ ಮಾತನಾಡಿದ ಅವರು, ಈ ಪ್ರಶಸ್ತಿಯನ್ನು ಪಡೆಯಲು ನಡೆದಾಡುವ ದೇವರಾದ ನನ್ನ ಆರಾಧ್ಯದೈವ ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳು. ನನ್ನ ತಂದೆ ತಾಯಿ, ಸಹೋದರ ಹಾಗೂ ನನ್ನ ಗುರುಗಳು, ಸ್ನೇಹಿತರಾದ ವಿವೇಕ್.ಎ ಕಿರುಚಿತ್ರ ನಿರ್ದೇಶಕರು ಮತ್ತು ನಿರ್ಮಾಪಕರು, ಚಿಕ್ಕಣ್ಣ(ಪೊಲೀಸ್ ಇಲಾಖೆ), ಚೇತನ್.ಡಿ.ಆರ್, ರಮೇಶ.ಜಿ.ಎ ಹಾಗೂ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಎಲ್ಲರೂ ಕೂಡ ಸಹಕರಿಸಿದ್ದಾರೆ ಅವರಿಗೆ ಈ ಪ್ರಶಸ್ತಿಯನ್ನು ಅರ್ಪಿಸುತ್ತಿದ್ದೇನೆ ಎಂದರು.
ಇವರು ನಿವಾಸಿ ಸುಮಿತ್ರ ಮತ್ತು ಟಿ.ಜೆ.ನಾರಾಯಣಶೆಟ್ಟಿ, (ಮುಖ್ಯ ಶಿಕ್ಷಕರು) ದಂಪತಿಯ ಪುತ್ರ.
ಭಿಕ್ಷುಕಿಯ ಚೀಲದೊಳಗೆ 75000 ರೂ. ನಗದು ಪತ್ತೆ.
ಇಂದೋರ್: ಮಧ್ಯಪ್ರದೇಶದ ಎರಡನೇ ಅತಿದೊಡ್ಡ ನಗರ ಮತ್ತು ಆ ರಾಜ್ಯದ ವಾಣಿಜ್ಯ ರಾಜಧಾನಿಯಾದ ಇಂದೋರ್ ನಗರದಲ್ಲಿ ಜನವರಿ 1, 2025ರಿಂದ ಭಿಕ್ಷೆ ಬೇಡುವ ಭಿಕ್ಷುಕರಿಗೆ ಮತ್ತು ಭಿಕ್ಷೆ ನೀಡುವ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸುವುದು ಸೇರಿದಂತೆ ಇತರೆ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ…