RCBಗೆ ದಿನೇಶ್ ಕಾರ್ತಿಕ್ ಕಮ್‌ಬ್ಯಾಕ್! | RCB ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿ ದಿನೇಶ್ ಕಾರ್ತಿಕ್ ನೇಮಕ!
ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿರುವ ಡಿಕೆ ಇದೀಗ ಕೋಚ್ ಹುದ್ದೆಯೊಂದಿಗೆ ಹೊಸ ಇನಿಂಗ್ಸ್ ಆರಂಭಿಸುವ ಇರಾದೆಯಲ್ಲಿದ್ದಾರೆ. ಅದರಂತೆ ತಮ್ಮ ಹೊಸ ಇನಿಂಗ್ಸ್ ಅನ್ನು ಆರ್ಸಿಬಿಯೊಂದಿಗೆ ಆರಂಭಿಸುತ್ತಿರುವುದು ವಿಶೇಷ.
ಈ ಬಾರಿಯ IPLನೊಂದಿಗೆ ಇಂಡಿಯನ್ ಪ್ರೀಮಿಯರ್ ಲೀಗ್ಗೆ ವಿದಾಯ ಹೇಳಿದ್ದ ದಿನೇಶ್ ಕಾರ್ತಿಕ್ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ರಿ ಎಂಟ್ರಿ ಕೊಟ್ಟಿದ್ದಾರೆ. ಆದರೆ ಈ ಬಾರಿ ಆಟಗಾರನಾಗಿ ಅಲ್ಲ. ಬದಲಾಗಿ ಬ್ಯಾಟಿಂಗ್ ಕೋಚ್ ಆಗಿ ನೇಮಕವಾಗಿದ್ದಾರೆ.
ಐಪಿಎಲ್ 2024 ಟೂರ್ನಿಯಲ್ಲಿ ಉತ್ತಮ ಪ್ರದರ್ಸನ ನೀಡಿ ನಾಕ್‌ಔಟ್ ಹಂತಕ್ಕೆ ಕಾಲಿಟ್ಟಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕ್ವಾಲಿಫೈಯರ್ 2 ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಎದುರು ನಿರಾಶೆ ಅನುಭವಿಸಿ ಸ್ಪರ್ಧೆಯಿಂದ ಹೊರಬಿದ್ದಿತ್ತು. ಇದರ ಬೆನ್ನಲ್ಲೇ 39 ವರ್ಷದ ಅನುಭವಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಸನ್ಯಾಸತ್ವ ತೆಗೆದುಕೊಂಡರು. ಅಂದಹಾಗೆ ಕ್ರಿಕೆಟ್ ಕಾಮೆಂಟರಿಯಲ್ಲಿ ಅಪಾರ ಆಸಕ್ತಿ ಹೊಂದಿರುವ ಡಿ.ಕೆ ಅವರನ್ನು ಮುಂದಿನ ದಿನಗಳಲ್ಲಿ ಕಾಮೆಂಟೇಟರ್ ಆಗಿ ಕಾಣಬಹುದು ಎಂದು ಅಭಿಮಾನಿಗಳು ನಿರೀಕ್ಷೆ ಮಾಡಿದ್ದರು. ಆದರೆ ತಮಿಳುನಾಡು ಮೂಲದ ಸ್ಟಾರ್ ಕ್ರಿಕೆಟರ್ ಇದೀಗ ಕೋಚಿಂಗ್ ವೃತ್ತಿಬದುಕು ಶುರು ಮಾಡಲು ಮುಂದಾಗಿದ್ದಾರೆ.