ದಕ್ಷಿಣ ಭಾರತದ ಪ್ರಸಿದ್ಧ ನಟಿ ಸಾಯಿ ಪಲ್ಲವಿ ಅವರು 2 ಕೋಟಿ ರೂಪಾಯಿ ಮೌಲ್ಯದ ಒಂದು ಫೇರ್ನೆಸ್ ಕ್ರೀಮ್ ಜಾಹೀರಾತನ್ನು ತಿರಸ್ಕರಿಸಿದ್ದಾರೆ. ಅವರ ಈ ನಿರ್ಧಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇದಲ್ಲದೆ, ಅವರು ಬಾಲಿವುಡ್ನಲ್ಲಿ ತಮ್ಮ ಅಭಿನಯ ಪ್ರವೇಶಕ್ಕೆ ಸಿದ್ಧರಾಗಿದ್ದಾರೆ. ವೈದ್ಯಕೀಯ ಪದವೀಧರೆಯೂ ಆಗಿರುವ ಸಾಯಿ ಪಲ್ಲವಿ ಅವರ ಸರಳತೆ ಮತ್ತು ತತ್ವಗಳಿಗೆ ಈ ಘಟನೆ ಸಾಕ್ಷಿಯಾಗಿದೆ. ಅವರ ಮುಂದಿನ ಚಿತ್ರ ‘ರಾಮಾಯಣ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ದಕ್ಷಿಣ ಭಾರತದ ನಟಿ ಸಾಯಿ ಪಲ್ಲವಿ ಅವರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದವರು. ಅವರಿಗೆ ಹಲವು ಆಫರ್ಗಳು ಬಂದಿದ್ದವು. ಈ ಪೈಕಿ ಅವರು ಅಳೆದು ತೂಗಿ ಕೆಲವು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಈ ಸುಂದರ ನಟಿ ವೈದ್ಯೆ ಕೂಡ ಹೌದು. ಅವರು ಎಂಬಿಬಿಎಸ್ ಕೂಡ ಓದಿದ್ದಾರೆ. ಸೌತ್ ನಂತರ ಬಾಲಿವುಡ್ನಲ್ಲಿ ಸದ್ದು ಮಾಡಲು ಸಾಯಿ ಪಲ್ಲವಿ ಸಜ್ಜಾಗಿದ್ದಾರೆ. ಈ ಮಧ್ಯೆ ಸಾಯಿ ಪಲ್ಲವಿ ಅವರ ಒಂದು ಅಪರೂಪದ ವಿಚಾರ ರಿವೀಲ್ ಆಗಿದೆ. ಅವರು ಬರೋಬ್ಬರಿ 2 ಕೋಟಿ ರೂಪಾಯಿ ಜಾಹೀರಾತನ್ನು ರಿಜೆಕ್ಟ್ ಮಾಡಿದ್ದರು ಎಂಬುದು ವಿಶೇಷ.
‘ಜಾಹೀರಾತುಗಳಿಂದ ಬಂದ ಹಣವನ್ನು ಏನು ಮಾಡೋದು. ನಾನು ಮನೆಗೆ ಹೋಗಿ ಮೂರು ಚಪಾತಿ ತಿನ್ನುತ್ತೇನೆ ಅಷ್ಟೆ. ನನಗೆ ದೊಡ್ಡ ಆಸೆಗಳಿಲ್ಲ’ ಎಂದು ಸಾಯಿ ಪಲ್ಲವಿ ಹೇಳಿದ್ದರು. ಈ ಮೂಲಕ ಅವರು ಎಲ್ಲ ವಿಚಾರಗಳಿಗೆ ಸ್ಪಷ್ಟನೆ ನೀಡಿದ್ದರು. ಸಾಯಿ ಪಲ್ಲವಿಗೆ ಫೇರ್ನೆಸ್ ಕ್ರೀಂ ಜಾಹೀರಾತಿಗೆ 2 ಕೋಟಿ ರೂ. ಸಿಕ್ಕಿತ್ತು. ಆದರೆ, ಇದನ್ನು ನಟಿ ತಿರಸ್ಕರಿಸಿದ್ದಾರೆ.
ಸದ್ಯ ಸಾಯಿ ಪಲ್ಲವಿ ಅವರು ‘ರಾಮಾಯಣ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಇದೆ. 2026ರಲ್ಲಿ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ.
ಮನಮೋಹನ್ ಸಿಂಗ್ ಅವರ ಸಹಿ ಹಳೇಯ ನೋಟುಗಳಲ್ಲಿ ಕಾಣಬಹುದು..!!!
ದೇಶದ ಅತ್ಯಂತ ಮೇಧಾವಿ ಪ್ರಧಾನಿ, ಖ್ಯಾತ ಅರ್ಥಶಾಸ್ತ್ರಜ್ಞ ಡಾ. ಮನಮೋಹನ್ ಸಿಂಗ್ ನಿಧನಕ್ಕೆ ರಾಷ್ಟ್ರ ಕಂಬನಿ ಮಿಡಿಯುತ್ತಿದೆ. ಎರಡು ಬಾರಿ ದೇಶದ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರ ಯೋಜನೆಗಳು ಇಂದಿಗೂ ಮುಂದುವರೆದಿವೆ. ತಮ್ಮ ಆಡಳಿತಾವಧಿಯಲ್ಲಿ ಅನೇಕ ಸುಧಾರಣೆಗಳನ್ನು ಮನಮೋಹನ್ ಸಿಂಗ್ ತಂದಿದ್ದಾರೆ.…