ಮೈಸೂರಿನ ಮೊದಲ ಮಹಿಳಾ ಲಯನ್ಸ್ ಕ್ಲಬ್ ಗೆ ಅಧ್ಯಕ್ಷೆಯಾಗಿ ಮೀನಾಕುಮಾರಿ ಪದಗ್ರಹಣ

ಮೈಸೂರಿನ ಲಯನ್ಸ್ ಕ್ಲಬ್ ಗಂಗೋತ್ರಿಯಲ್ಲಿ ವಿಶಿಷ್ಟ ರೀತಿಯಲ್ಲಿ ಪದಗ್ರಹಣ ಸಮಾರಂಭ ನೆರವೇರಿ ಎಲ್ಲರ ಪ್ರಸಂಶೆಗೆ ಪಾತ್ರವಾಯಿತು..
ಯಾವತ್ತೂ ಸಾಮಾಜಿಕ ಕಾರ್ಯಗಳಿಗೆ ತನ್ನನ್ನು ಗುರುತಿಸಿಕೊಂಡು ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಹೆಸರು ಮಾಡುತ್ತಿರುವ ಲಯನ್ಸ್ ಕ್ಲಬ್ ಸಂಸ್ಥೆ ಅನನ್ಯ ಸೇವೆ ಒದಗಿಸುತ್ತಿದೆ.. ಹಳ್ಳಿಯಿಂದ ಹಿಡಿದು ಮಹಾನಗರ ತನಕ ಶೋಷಿತ ದಮನಿತ ಅನಾಥ ಮಹಿಳೆಯರಿಗೆ ಮಕ್ಕಳಿಗೆ ಸಹಾಯ ಸಹಕಾರ ಆರೋಗ್ಯ ಸೇವೆ ನೀಡುತ್ತಾ ಬಂದಿದೆ..

ಮೈಸೂರಿನ ಮೊದಲ ಮಹಿಳಾ ಲಯನ್ಸ್ ಕ್ಲಬ್ ಅನ್ನೋ ಪ್ರಖ್ಯಾತಿ ಪಡೆದಿರುವ ಗಂಗೋತ್ರಿ ಶಾಖೆಯಿಂದ ಸಾಕಷ್ಟು ಸಾಮಾಜಿಕ ಕಾರ್ಯ ನಿರ್ವಹಿಸುತ್ತಿದ್ದಾರೆ.. ಕ್ಲಬ್ ನ ಮಹಿಳೆಯರು ಮುಂದಾಗಿ ದೇಣಿಗೆ ಸಂಗ್ರಹಿಸಿ ಶ್ರವಣ ಶಸ್ತ್ರಚಿಕಿತ್ಸೆ,ಕಾಡಿನ ಅಂಗನವಾಡಿಗಳ ಆದುನಿಕ ಸ್ಪರ್ಶ ಮಕ್ಕಳಿಗೆ ಪಾಟೊಪಕರಣ ಶಾಲೆಗಳಿಗೆ ಸುಣ್ಣ ಬಣ್ಣ,ಮಕ್ಕಳಿಗೆ ಸಮವಸ್ತ್ರ ವಿತರಣೆ ಮಾಡಿ ಮಹಿಳಾಮಣಿಗಳು ಭೇಷ್ ಅನಿಸಿಕೊಂಡಿದ್ದಾರೆ..

ಮೊನ್ನೆ ನಡೆದ ಪದಗ್ರಹಣ ಸಮಾರಂಭ ಅರ್ಥಪೂರ್ಣವಾಗಿತ್ತು..ಸಭೆಯಲ್ಲಿ ಕೇವಲ ಹೊಸ ಅಧ್ಯಕ್ಷರ ಪದವಿ ಗ್ರಹಣ ಅಷ್ಟೇ ಆಗದೆ ಜೊತೆಗೆ ಹಲವು ಜನ ಮೆಚ್ಚುಗೆಯ ಕಾರ್ಯ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು..

ಮೈಸೂರಿನ ಸ. ಹಿ. ಪ್ರಾ. ಶಾಲೆ. ಬೊಂತಗಹಳ್ಳಿಯ ವಿದ್ಯಾರ್ಥಿಗಳಿಗೆ ಹಾಗೂ ಸ್ಥಳೀಯ ವಿದ್ಯಾರ್ಥಿಗಳಿಗೆ ಸುಮಾರು 20ಸಾವಿರ ರೂಪಾಯಿ ಮೌಲ್ಯದ ಸ್ಟೇಷನರಿ ಕಿಟ್ಸ್, ಸ್ಕೂಲ್ ಬಾಗ್ಸ್ ಮತ್ತು ಸ್ವೀಟರ್ಸ್ ಗಳನ್ನು ನೀಡಲಾಯಿತು..ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಕ್ಯಾತನಹಳ್ಳಿಯ ಗುರುಕುಲಾಶ್ರಮದ ಮಕ್ಕಳಿಗೆ ಸ್ಕೂಲ್ ಶುಗಳನ್ನು ವಿತರಿಸಲಾಯಿತು..ಇದಷ್ಟೇ ಅಲ್ಲದೇ ಇಂಟರ್ನ್ಯಾಷನಲ್ ವೈದ್ಯರ ದಿನ ಹಿನ್ನೆಲೆಯಲ್ಲಿ ಮೈಸೂರಿನ ಖ್ಯಾತ ವೈದ್ಯರಾದ ಡಾ.ಮುದ್ದಾಸೀರ್ ಅಜೀಜ್ ಖಾನ್ ಮತ್ತು ಡ್ಯಾಕ್ಟರ್.ಕೆ ಮಮತಾ ಅವರನ್ನು ಗಂಗೋತ್ರಿ ಶಾಖೆಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕಾರ್ಯದರ್ಶಿ ಅನುರಾಧ ಖಜಾಂಚಿ ಉಮರಾಣಿ ಉಪಸ್ಥಿತರಿದ್ದರು..

ಮೈಸೂರು ಗಂಗೋತ್ರಿ ಲಯನ್ಸ್ ಸಂಸ್ಥೆಯ ನೂತನ ಅಧ್ಯಕ್ಷೆಯಾಗಿ ಮೀನಾಕುಮಾರಿ ಕೆಟಿ ಅವರ ಪದಗ್ರಹಣ ಸಮಾರಂಭವನ್ನು, ಇಂಟರ್ನ್ಯಾಷನಲ್ ಡೈರೆಕ್ಟರ್ ಎಂಡೋರ್ಸಿ ರಾಮಚಂದ್ರನ್ ರವರು ನೆರವೇರಿಸಿದರು. ಎಂಸಿಸಿ ಡಾಕ್ಟರ್ ಕೃಷ್ಣೇಗೌಡರು, ಪಿಡಿಜಿ -ಉಂಖಿ ಕೋಆರ್ಡಿನೇಟರ ಲಯನ್ ದೇವೇಗೌಡರು, ಮೊದಲ ಉಪ ರಾಜ್ಯಪಾಲ ಲಯನ್ ರಾಜಶೇಖರ್ ರವರು ಹಾಗೂ ಸಂಸ್ಥೆಯ ಸದಸ್ಯರು,ಸಂಸ್ಥೆಯ ಸೇವಾ ಕಾರ್ಯದಲ್ಲಿ ಭಾಗವಹಿಸಿದ್ದರು..

ಮಂಡ್ಯಜಿಲ್ಲೆಯ ಕೆನ್ನಾಳು ಗ್ರಾಮದ ಮೀನಾಕುಮಾರಿ ಹಲವು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡವರು..ಕೋವಿಡ್ ಸಮಯದಲ್ಲಿ ಮಂಡ್ಯ ಜಿಲ್ಲಾಡಳಿತಕ್ಕೆ ಸರ್ವಜಿಕನವಾಗಿ ಮೊದಲು 100 ಫುಡ್ ಕಿಟ್ ನೀಡಿ ಸರಕಾರದಿಂದ ಪ್ರಶಂಸೆಗೆ ಪಾತ್ರರಾಗಿದ್ದರು..ನೂರಾರು ಅನಾಥ ಮಕ್ಕಳಿಗೆ ಸಹಾಯ ಮಾಡಿ ಅವರ ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಕೈ ಹೊಡಿಸಿದವರು..ಹಲವು ಮಾಧ್ಯಮ ಸಂಸ್ಥೆಗಳಿಂದ ಸಾಧಕಿ ಪ್ರಶಸ್ತಿಗೆ ಭಾಜನರಾಗಿದ್ದರು..ಈಗ ಮೀನಾಕುಮಾರಿ ಮೈಸೂರಿನ ಮೊದಲ ಮಹಿಳಾ ಲಯನ್ಸ್ ಕ್ಲಬ್ ಗಂಗೋತ್ರಿ ಯ ಅಧ್ಯಕ್ಷೆಯಾಗಿ ಪದಗ್ರಹಣ ಮಾಡಿದ್ದಾರೆ..

  • Related Posts

    ತಿರುಪತಿಯ ಪ್ರಸಾದದಲ್ಲಿ ಹುಳುಗಳು ಪತ್ತೆ

    ತಿರುಪತಿಯ ಪ್ರಸಾದದಲ್ಲಿ ಹುಳುಗಳು ಸಿಕ್ಕಿವೆ ಎಂದು ಭಕ್ತರು ಆರೋಪಿಸಿದ್ದಾರೆ. ದೇವಾಲಯವನ್ನು ನೋಡಿಕೊಳ್ಳುವ ಟ್ರಸ್ಟ್ ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ಈ ಆರೋಪವನ್ನು ತಳ್ಳಿಹಾಕಿದೆ. ಇದು ಸ್ವೀಕಾರಾರ್ಹವಲ್ಲ ಮತ್ತು ಟಿಟಿಡಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ತೋರುತ್ತಿದೆ ಎಂದು ಭಕ್ತರೊಬ್ಬರು ಹೇಳಿದ್ದಾರೆ. ಇದಕ್ಕೆ ಕಾರಣರಾದವರ…

    ದಳಪತಿ ವಿಜಯ್ ಕೊನೆಯ ಸಿನಿಮಾದ ಮುಹೂರ್ತ

    Leave a Reply

    Your email address will not be published. Required fields are marked *

    You Missed

    ಬೆಳಗಾವಿಯಿಂದ ಬೆಂಗಳೂರಿಗೆ ಸಿ.ಟಿ ರವಿ ಶಿಫ್ಟ್…

    ಬೆಳಗಾವಿಯಿಂದ ಬೆಂಗಳೂರಿಗೆ ಸಿ.ಟಿ ರವಿ ಶಿಫ್ಟ್…

    ಪಾರ್ಸೆಲ್ನಲ್ಲಿ ಇತ್ತು ಮಾನವನ ಶ*: ಬೆಚ್ಚಿಬಿದ್ದ ಮಹಿಳೆ!

    ಪಾರ್ಸೆಲ್ನಲ್ಲಿ ಇತ್ತು ಮಾನವನ ಶ*: ಬೆಚ್ಚಿಬಿದ್ದ ಮಹಿಳೆ!

    87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ..

    87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ..

    ಯಾವ ಹೆಣ್ಣುಮಕ್ಕಳೂ ಇಂತಹ ಆರೋಪಗಳ ಬಗ್ಗೆ ಸುಳ್ಳು ದೂರು ಕೊಡೋದಿಲ್ಲ : ಸಿಎಂ ಸಿದ್ದರಾಮಯ್ಯ

    ಯಾವ ಹೆಣ್ಣುಮಕ್ಕಳೂ ಇಂತಹ ಆರೋಪಗಳ ಬಗ್ಗೆ ಸುಳ್ಳು ದೂರು ಕೊಡೋದಿಲ್ಲ : ಸಿಎಂ ಸಿದ್ದರಾಮಯ್ಯ

    ಸಾರಿಗೆ ಇಲಾಖೆಯಿಂದ ವೈಟ್ ಬೋರ್ಡ್ ಟ್ರಾವೆಲ್ಸ್ ಮಾಲೀಕರಿಗೆ ಬಿಗ್ ಶಾಕ್.

    ಸಾರಿಗೆ ಇಲಾಖೆಯಿಂದ ವೈಟ್ ಬೋರ್ಡ್ ಟ್ರಾವೆಲ್ಸ್ ಮಾಲೀಕರಿಗೆ ಬಿಗ್ ಶಾಕ್.

    ಎಷ್ಟೇ ರೇಡ್ ಮಾಡಿದ್ರೂ ಅದೇ ರಾಗ ಅದೇ ಹಾಡು : ಪರಪ್ಪನ ಅಗ್ರಹಾರ ಜೈಲಿನಲ್ಲಿ‌ ಮತ್ತೆ ಮೊಬೈಲ್ ಸೌಂಡ್!

    ಎಷ್ಟೇ ರೇಡ್ ಮಾಡಿದ್ರೂ ಅದೇ ರಾಗ ಅದೇ ಹಾಡು : ಪರಪ್ಪನ ಅಗ್ರಹಾರ ಜೈಲಿನಲ್ಲಿ‌ ಮತ್ತೆ ಮೊಬೈಲ್ ಸೌಂಡ್!