ಲೈಂಗಿಕ ದೌರ್ಜನ್ಯ ವಿರುದ್ಧ ಚಾಟಿಯಿಂದ ಹೊಡೆದುಕೊಂಡು ವಿನೂತನವಾಗಿ ಪ್ರತಿಭಟನೆ ಮಾಡಿದ ಅಣ್ಣಾಮಲೈ..!

ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಚಾಟಿಯಿಂದ ತಮಗೆ ಹೊಡೆದುಕೊಳ್ಳುವ ಮೂಲಕ ಹೆಣ್ಣುಮಕ್ಕಳ ಲೈಂಗಿಕ ದೌರ್ಜನ್ಯ ವಿರುದ್ಧ ಪ್ರತಿಭಟಿಸಿದರು. ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಅಣ್ಣಮಲೈ ಭೀಷ್ಮ ಶಪತ ಕೈಗೊಂಡಿದ್ದು. ಡಿಎಂಕೆ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ಚಪ್ಪಲಿ ಧರಿಸುವುದಿಲ್ಲ ಎಂದು ಶಪಥ ಮಾಡಿದ್ದಾರೆ.
ಇಂದು ಬೆಳಗ್ಗೆ ಅವರ ನಿವಾಸದ ಮುಂದೆ ಚಾಟಿಯಿಂದ ಹೊಡೆದುಕೊಂಡು ತಮಗೆ ತಾವೇ ನೋವು ಮಾಡಿಕೊಂಡಿದ್ದಾರೆ. ಅಣ್ಣಾ ಯೂನಿರ್ವಸಿಟಿಯಲ್ಲಿ ಓದುತ್ತಿದ್ದ ಇಂಜಿನಿಯರಿಂಗ್ ವಿಧ್ಯಾರ್ಥಿನಿಯ ಮೇಲೆ ಕಾಲೇಜು ಕ್ಯಾಂಪಸ್ನಲ್ಲಿ ಅತ್ಯಾಚಾರ ನಡೆದಿದೆ. ಇದರ ವಿರುದ್ಧ ವಿಧ್ಯಾರ್ಥಿನಿ ಪೊಲೀಸರಿಗೆ ದೂರನ್ನು ನೀಡಿದ್ದರು.

ಪೊಲೀಸರು ಜ್ಞಾನಶೇಖರನ್ ಎಂಬಾತನನ್ನು ಬಂಧಿಸಿದ್ದರು. ಈತ ಯುವತಿಯ ಖಾಸಗಿ ವಿಡೀಯೋ ಚಿತ್ರಿಕರಿಸಿಕೊಂಡು ಬ್ಲಾಕ್ಮೇಲ್ ಮಾಡಿ ಯುವತಿ ಮೇಲೆ ಅತ್ಯಾಚಾರ ಎಸಗಿದ್ದನು ಎಂಬ ಆರೋಪವಿದೆ. ಆರೋಪಿಯ ಮೇಲೆ 2011ರಲ್ಲಿಯೂ ಇದೇ ರೀತಿಯ ಪ್ರಕರಣ ದಾಖಲಾಗಿದ್ದು. ಈತನ ವಿರುದ್ದ ಸುಮಾರು 17 ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಆದರೂ ಈ ಆರೋಪಿ ಸ್ವತಂತ್ರ್ಯವಾಗಿ ಓಡಾಡುತ್ತಿದ್ದಾನೆ.
ಡಿಎಂಕೆ ಸರ್ಕಾರದ ಆಡಳಿತದಲ್ಲಿ ವಿದ್ಯಾರ್ಥಿನಿಯರಿಗೆ ಭದ್ರತೆ ಇಲ್ಲ ಎಂದು ಆರೋಪಿಸಿ ತಮಿಳುನಾಡು ಬಿಜೆಪಿ ಮತ್ತು ಎಐಎಡಿಎಂಕೆ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಜೊತೆಗೆ 48 ದಿನಗಳ ಸುದೀರ್ಘ ಉಪವಾಸ ಕೈಗೊಂಡಿರುವ ಅಣ್ಣಾಮಲೈ , ಆರು ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುತ್ತೇನೆ ಎಂದು ಹೇಳಿದ್ದಾರೆ .

Related Posts

ಮನಮೋಹನ್ ಸಿಂಗ್ ಅವರ ಸಹಿ ಹಳೇಯ ನೋಟುಗಳಲ್ಲಿ ಕಾಣಬಹುದು..!!!

ದೇಶದ ಅತ್ಯಂತ ಮೇಧಾವಿ ಪ್ರಧಾನಿ, ಖ್ಯಾತ ಅರ್ಥಶಾಸ್ತ್ರಜ್ಞ ಡಾ. ಮನಮೋಹನ್ ಸಿಂಗ್ ನಿಧನಕ್ಕೆ ರಾಷ್ಟ್ರ ಕಂಬನಿ ಮಿಡಿಯುತ್ತಿದೆ. ಎರಡು ಬಾರಿ ದೇಶದ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರ ಯೋಜನೆಗಳು ಇಂದಿಗೂ ಮುಂದುವರೆದಿವೆ. ತಮ್ಮ ಆಡಳಿತಾವಧಿಯಲ್ಲಿ ಅನೇಕ ಸುಧಾರಣೆಗಳನ್ನು ಮನಮೋಹನ್ ಸಿಂಗ್ ತಂದಿದ್ದಾರೆ.…

ಭಾರತ ಕಂಡ ಪ್ರಾಮಾಣಿಕ ಪ್ರಧಾನಿ ಅವರ ಬದುಕು , ನಮ್ಮೆಗೆಲ್ಲ ಪ್ರೇರಣೆ ಕರ್ನಾಟಕದ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದು ಮನಮೋಹನ್ ಸಿಂಗ್ ಪ್ರಶಂಸಿದ್ದನ್ನು ಸ್ಮರಿಸಿದ ಸಿಎಂ…

ಬೆಳಗಾವಿ :- ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಬದುಕು , ಆರ್ಥಿಕ ನೀತಿಗಳು ನಮ್ಮೆಗೆಲ್ಲ ಪ್ರೇರಣೆ. ಶ್ರೇಷ್ಠ ಆರ್ಥಿಕ ತಜ್ಞರಾಗಿದ್ದ ಅವರು, 2013-18 ರವರೆಗೆ ಕರ್ನಾಟಕದ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದು ಬಣ್ಣಿಸಿದ್ದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಮರಿಸಿದರು. ಇಂದು ಬೆಳಗಾವಿಯಲ್ಲಿ…

Leave a Reply

Your email address will not be published. Required fields are marked *

You Missed

ಜಿಟಿ ಜಿಟಿ ಮಳೆಯಿಂದಾಗಿ ಬೆಂಗಳೂರು ಕೂಲ್.. ಕೂಲ್!

ಜಿಟಿ ಜಿಟಿ ಮಳೆಯಿಂದಾಗಿ ಬೆಂಗಳೂರು ಕೂಲ್.. ಕೂಲ್!

ಮನಮೋಹನ್ ಸಿಂಗ್ ಅವರ ಸಹಿ ಹಳೇಯ ನೋಟುಗಳಲ್ಲಿ ಕಾಣಬಹುದು..!!!

ಮನಮೋಹನ್ ಸಿಂಗ್ ಅವರ ಸಹಿ ಹಳೇಯ ನೋಟುಗಳಲ್ಲಿ ಕಾಣಬಹುದು..!!!

ಭಾರತ ಕಂಡ ಪ್ರಾಮಾಣಿಕ ಪ್ರಧಾನಿ ಅವರ ಬದುಕು , ನಮ್ಮೆಗೆಲ್ಲ ಪ್ರೇರಣೆ ಕರ್ನಾಟಕದ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದು ಮನಮೋಹನ್ ಸಿಂಗ್ ಪ್ರಶಂಸಿದ್ದನ್ನು ಸ್ಮರಿಸಿದ ಸಿಎಂ…

ಭಾರತ ಕಂಡ ಪ್ರಾಮಾಣಿಕ ಪ್ರಧಾನಿ ಅವರ ಬದುಕು , ನಮ್ಮೆಗೆಲ್ಲ ಪ್ರೇರಣೆ ಕರ್ನಾಟಕದ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದು ಮನಮೋಹನ್ ಸಿಂಗ್  ಪ್ರಶಂಸಿದ್ದನ್ನು ಸ್ಮರಿಸಿದ ಸಿಎಂ…

ಪೊಲೀಸರ ವಾಟ್ಸ್ಆ್ಯಪ್, ಮೊಬೈಲ್ ಹ್ಯಾಕ್: ಬೆಂಗಳೂರಿನ ಪೊಲೀಸರನ್ನೂ ಬಿಡದ ಸೈಬರ್ ವಂಚಕರು!

ಪೊಲೀಸರ ವಾಟ್ಸ್ಆ್ಯಪ್, ಮೊಬೈಲ್ ಹ್ಯಾಕ್: ಬೆಂಗಳೂರಿನ ಪೊಲೀಸರನ್ನೂ ಬಿಡದ ಸೈಬರ್ ವಂಚಕರು!

₹86 ಲಕ್ಷ ಮೌಲ್ಯದ ಗಾಂಜಾ ಜಪ್ತಿ : ಹೊಸ ವರ್ಷಾಕ್ಕೆ ಅನ್ಯ ರಾಜ್ಯಗಳಿಂದ ಗಾಂಜಾ ಸಾಗಾಟ!!!