ಮುದ್ದಾದ ಅವಳಿ ಮಕ್ಕಳ ಜೀವ ತೆಗೆದ ತಾಯಿ., ರಾಜಸ್ಥಾನದಲ್ಲಿ ಹೃದಯ ವಿದ್ರಾವಕ ಘಟನೆ.

ರಾಜಸ್ಥಾನದ ಸಿರೋಹಿ ಜಿಲ್ಲೆಯಿಂದ ಹೃದಯ ವಿದ್ರಾವಕ ಸುದ್ದಿ ಹೊರಬಿದ್ದಿದೆ. ಹಡೆದ ತಾಯಿ ಒಬ್ಬಳು ಪೈಶಾಚಿಕ ಕೃತ್ಯ ನಡೆಸಿದ್ದು, ಮುದ್ದಾದ ಅವಳಿ ಮಕ್ಕಳಿಗೆ ಮದ್ದು ನೀಡಿದ್ದಾಳೆ. ಬಳಿಕ ತನ್ನ ಬದುಕಿಗೂ ಫುಲ್ಸ್ಟಾಪ್ ಇಟ್ಟಿದ್ದಾಳೆ.
ಸಿರೋಹಿ ಜಿಲ್ಲೆಯ ಶಿವಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಶಿವಗಂಜ್ ಪ್ರದೇಶದಲ್ಲಿ ಕ್ರೂರಿ ತಾಯಿ ರೇಖಾ ವಾಸವಿದ್ದಳು. ಈಕೆಗೆ ಅವಳಿ ಗಂಡುಮಕ್ಕಳು ಜನಿಸಿದ್ದರು. ಮಕ್ಕಳಿಗೆ ಕೇವಲ 1.25 ವರ್ಷವಾಗಿತ್ತು. ವಾಸ್ತವಾಗಿ ಈಕೆಗೆ ಅವಳಿ ಮಕ್ಕಳು ಇಷ್ಟವಿರಲಿಲ್ಲ. ಇದೇ ಕಾರಣಕ್ಕೆ ಹಾಲಲ್ಲಿ ವಿಷ ಹಾಕಿ ಮಕ್ಕಳ ಕತೆ ಮುಗಿಸಿದ್ದಾಳೆ ಎಂದು ತಿಳಿಸಿದ್ದಾರೆ.

ಆರೋಪಿ ರೇಖಾಗೆ ಗಂಡ ಇದ್ದಾನೆ. ಆತನ ಹೆಸರು ಯೋಗೇಶ್. ತನ್ನ ಅವಳಿ ಮಕ್ಕಳಿಗೆ ಪೂರ್ವಾಂಶ್ ಮತ್ತು ಪೂರ್ವಿತ್ ಎಂದು ಹೆಸರಿಟ್ಟಿದ್ದಳು. ಬುಧವಾರ ಮಧ್ಯಾಹ್ನ ರೇಖಾ ಇಬ್ಬರು ಪುತ್ರರಿಗೆ ವಿಷ ಕೊಟ್ಟಿದ್ದಾಳೆ. ಜೊತೆಗೆ ತಾನೂ ವಿಷ ಸೇವಿಸಿದ್ದಾಳೆ.
ವಿಷ ಸೇವನೆ ಬಳಿಕ ರೇಖಾಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಗೆ ಆಗಮಿಸಿದ್ದ ಪೊಲೀಸರು ಆಕೆಯಿಂದ ಹೇಳಿಕೆ ಪಡೆದುಕೊಂಡಿದ್ದಾರೆ. ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಕೆಯೂ ಇದೀಗ ಬದುಕಿನ ಜರ್ನಿ ಮುಗಿಸಿದ್ದಾಳೆ. ಮಕ್ಕಳು, ಪತ್ನಿಯನ್ನು ಕಳೆದುಕೊಂಡ ಯೋಗೇಶ್ ಕಂಗಾಲಾಗಿದ್ದಾನೆ.

Related Posts

ಕುಡಿದ ಮತ್ತಿನಲ್ಲಿ ಪತಿಗೆ ಆ್ಯ*ಡ್ ಎರಚಿದ ಪತ್ನಿ; ನೊಂದ ಪತಿ ಪೊಲೀಸರಿಗೆ ದೂರು.

ಭೋಪಾಲ್ :- ಕುಡಿದ ಅಮಲಿನಲ್ಲಿ ಗಂಡ ಹೆಂಡತಿಗೆ ಹೊಡೆಯುವುದು, ಗಂಡ ದಿನವೂ ಕುಡಿದು ಬಂದು ಹೊಡೆಯುತ್ತಾನೆ ಎಂದು ಹೆಂಡತಿ ಪೊಲೀಸರಿಗೆ ದೂರು ನೀಡುವುದು ಸಾಮಾನ್ಯ. ಆದರೆ, ಇಲ್ಲೊಬ್ಬಳು ಮಹಿಳೆ ತಾನೇ ಕಂಠಪೂರ್ತಿ ಕುಡಿದು ಗಂಡನಿಗೆ ಇನ್ನಿಲ್ಲದಷ್ಟು ಹಿಂಸೆ ನೀಡಿದ್ದಾಳೆ. ಕುಡುಕಿ ಹೆಂಡತಿಯ…

ರಣವೀರ್ ಸಿಂಗ್ ಕನ್ನಡದಲ್ಲಿ ದೀಪಿಕಾಗೆ ಪ್ರಪೋಸ್ !

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರ ಪ್ರೇಮಕಥೆ, ವಿವಾಹ ಮತ್ತು ಮಗುವಿನ ಬಗ್ಗೆ ಈ ಸ್ಟೋರಿಯಲ್ಲಿ ಚರ್ಚೆ ಆಗುತ್ತಿದೆ. ರಣವೀರ್ ಅವರು ದೀಪಿಕಾಗೆ ಕನ್ನಡದಲ್ಲಿ ಪ್ರಪೋಸ್ ಮಾಡಿದ ವಿಡಿಯೋ ವೈರಲ್ ಆಗಿದೆ. ಅವರ ಪ್ರೀತಿಯ ಆರಂಭ, ಮದುವೆ ಮತ್ತು ಈಗ…

Leave a Reply

Your email address will not be published. Required fields are marked *

You Missed

ಕುಡಿದ ಮತ್ತಿನಲ್ಲಿ ಪತಿಗೆ ಆ್ಯ*ಡ್ ಎರಚಿದ ಪತ್ನಿ; ನೊಂದ ಪತಿ ಪೊಲೀಸರಿಗೆ ದೂರು.

ಕುಡಿದ ಮತ್ತಿನಲ್ಲಿ ಪತಿಗೆ ಆ್ಯ*ಡ್ ಎರಚಿದ ಪತ್ನಿ; ನೊಂದ ಪತಿ ಪೊಲೀಸರಿಗೆ ದೂರು.

ರಣವೀರ್ ಸಿಂಗ್ ಕನ್ನಡದಲ್ಲಿ ದೀಪಿಕಾಗೆ ಪ್ರಪೋಸ್ !

ರಣವೀರ್ ಸಿಂಗ್ ಕನ್ನಡದಲ್ಲಿ ದೀಪಿಕಾಗೆ  ಪ್ರಪೋಸ್ !

ಕೆಜಿಗಟ್ಟಲೇ ಬಂಗಾರ ಧರಿಸಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಭಕ್ತ!

ಕೆಜಿಗಟ್ಟಲೇ ಬಂಗಾರ ಧರಿಸಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಭಕ್ತ!

ಪ್ರೀತಿಸಿದ ಹುಡುಗಿ ಕೈಕೊಟ್ಟಿದ್ದಕ್ಕೆ ಪ್ರಾ* ಕಳೆದುಕೊಂಡ ಯುವಕ!

ಪ್ರೀತಿಸಿದ ಹುಡುಗಿ ಕೈಕೊಟ್ಟಿದ್ದಕ್ಕೆ ಪ್ರಾ* ಕಳೆದುಕೊಂಡ ಯುವಕ!

5 ಸಾವಿರ ರೂಪಾಯಿ ನೋಟಿನ ಬಗ್ಗೆ RBI ಹೇಳಿದ್ದಿಷ್ಟು !

5 ಸಾವಿರ ರೂಪಾಯಿ ನೋಟಿನ ಬಗ್ಗೆ RBI ಹೇಳಿದ್ದಿಷ್ಟು !

ಗರ್ಲ್ಸ್‌ ಹಾಸ್ಟೆಲ್‌ನಲ್ಲಿ ಹಿಡನ್‌ ಕ್ಯಾಮೆರಾ ; 300 ಕ್ಕೂ ಹೆಚ್ಚು ವಿಡಿಯೋ ಸೆರೆ ?

ಗರ್ಲ್ಸ್‌ ಹಾಸ್ಟೆಲ್‌ನಲ್ಲಿ ಹಿಡನ್‌ ಕ್ಯಾಮೆರಾ ; 300 ಕ್ಕೂ ಹೆಚ್ಚು ವಿಡಿಯೋ ಸೆರೆ ?