ಮಗನಿಗೆ ಖೈದಿ ರೀತಿ ಡ್ರೆಸ್ ಹಾಕಿ ಫೋಟೋಶೂಟ್ ಮಾಡಿಸಿದ ದರ್ಶನ್ ಅಭಿಮಾನಿ
ಇತ್ತ ದರ್ಶನ್ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಹುಚ್ಚು ಅಭಿಮಾನವನ್ನು ತೋರಿಸುತ್ತಿದ್ದಾರೆ. ನಟನಿಗಾಗಿ ಅಭಿಮಾನಿ ಹೆತ್ತ ಮಗುವನ್ನೇ ಖೈದಿ ಮಾಡಿದ್ದಾನೆ.
ದರ್ಶನ್ ಜೈಲು ಸೇರಿದಾಗಿನಿಂದಲೂ ಅವರು ಹತಾಶೆಗೊಂಡಿದ್ದಾರೆ. ಈ ಕಾರಣದಿಂದಲೇ ಜೈಲಿನ ಎದುರು ಫ್ಯಾನ್ಸ್ ನೆರೆಯುತ್ತಿದ್ದಾರೆ. ಅವರನ್ನು ಕೋರ್ಟ್ಗೆ ಕರೆದೊಯ್ಯುವಾಗ ಶೂಟಿಂಗ್ ನಡೆಯುತ್ತಿದೆಯೇನೋ ಎಂಬ ರೀತಿಯಲ್ಲಿ ‘ಡಿ ಬಾಸ್’ ಎನ್ನುವ ಘೋಷಣೆಗಳನ್ನು ಫ್ಯಾನ್ಸ್ ಕೂಗುತ್ತಿದ್ದಾರೆ. ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ನಾನಾ ರೀತಿಯಲ್ಲಿ ತಮ್ಮ ಅಭಿಮಾನ ತೋರಿಸುತ್ತಿದ್ದಾರೆ. ಈ ಮಧ್ಯೆ ದರ್ಶನ್ ಮೇಲಿನ ಹುಚ್ಚು ಅಭಿಮಾನ ಮಿತಿ ಮೀರಿದೆ. ನಟನಿಗಾಗಿ ಅಭಿಮಾನಿ ಹೆತ್ತ ಮಗುವನ್ನೇ ಖೈದಿ ಮಾಡಿದ್ದಾನೆ. ಈ ಫೋಟೋ ವೈರಲ್ ಆಗುತ್ತಿದೆ.https://www.instagram.com/p/C83qTB0I6Yg/?utm_source=ig_web_copy_link&igsh=MzRlODBiNWFlZA==