ಮಂಗಳ ಮುಖಿಯರ ಟಾರ್ಚರ್ ಗೆ ಅಪ್ರಾಪ್ತ ಬಾಲಕ ಬಲಿ
ಮಂಗಳಮುಖಿಯರ ಕಿರುಕುಳಕ್ಕೆ ಮನನೊಂದ ಅಪ್ರಾಪ್ತ ವಯಸ್ಸಿನ ಬಾಲಕ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಹುಣಸೂರು ತಾಲೂಕಿನ ಹೆಜ್ಜೂರು ಗ್ರಾಮದಲ್ಲಿ ನಡೆದಿದೆ.ರಾಹುಲ್ ಮೌರ್ಯ(17) ಮೃತದುರ್ದೈವಿ.ಘಟನೆ ಬಗ್ಗೆ ಸೂಕ್ತ ತೆನಿಖೆ ನಡೆಸುವಂತೆ ತಂದೆ ಕುಮಾರ್ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಹುಣಸೂರಿನ ಕಿರಜಾಜಿ ಸರ್ಕಲ್ ಬಳಿ ಎಳೆನೀರು ವ್ಯಾಪಾರ ಮಾಡುತ್ತಿದ್ದ ರಾಹುಲ್ ಮೌರ್ಯ ಮಂಗಳಮುಖಿಯ ಜೊತೆ ಆಗಾಗ ಮಾತನಾಡುತ್ತ ಸ್ನೇಹ ಬೆಳೆಸಿದ್ದ.ನಾಲ್ಕು ತಿಂಗಳ ಹಿಂದೆ ರಾಹುಲ್ ಮೌರ್ಯ ನಾಪತ್ತೆಯಾಗಿದ್ದಾನೆ.ಆಗಾಗ ತನ್ನ ತಾಯಿ ಜೊತೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ರಾಹುಲ್ ಮೌರ್ಯ ತಾನು ಇರುವ ಸ್ಥಳ ತಿಳಿಸಿಲ್ಲ.ಜೂನ್ 21 ರಂದು ರಾಹುಲ್ ಮೌರ್ಯ ಹೆಜ್ಜೂರು ಗ್ರಾಮದ ತನ್ನ ದೊಡ್ಡಮ್ಮನ ಮನೆಗೆ ಹಿಂದಿರುಗಿದ್ದಾನೆ.ಜೂನ್ 23 ರಂದು ಕೆಲವು ಮಂಗಳಮುಖಿಯರು ಕಿರಜಾಜಿಯಲ್ಲಿರುವ ರಾಹುಲ್ ಮೌರ್ಯ ಮನೆಗೆ ಬಂದು ಕುಟುಂಬಸ್ಥರ ಜೊತೆ ಜಗಳವಾಡಿ ಕೂಗಾಡಿದ್ದಾರೆ.ನಮ್ಮ ಹುಡುಗಿಯೊಬ್ಬಳನ್ನ ಕರೆದೊಯ್ದಿದ್ದಾನೆಂದು ಆರೋಪಿಸಿ ಕಿರುಚಾಡಿ ಹೋಗಿದ್ದಾರೆ.ಅದೇ ಸಂಜೆ 5 ಗಂಟೆಗೆ ಹೆಜ್ಜೂರು ಗ್ರಾಮದ ಜಮೀನಿನಲ್ಲಿರುವ ಬಿದಿರುಶೆಡ್ ನಲ್ಲಿ ರಾಹುಲ್ ಮೌರ್ಯ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.ಘಟನೆಯಿಂದ ಮನನೊಂದು ಮಗ ಆತ್ಮಹತ್ಯೆಗೆ ಶರಣಾಗಿದ್ದಾನೆಂದು ತಂದೆ ಕುಮಾರ್ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಸೂಕ್ತ ತನಿಖೆ ನಡೆಸಿ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ…