ಇಂದೋರ್: ಮಧ್ಯಪ್ರದೇಶದ ಎರಡನೇ ಅತಿದೊಡ್ಡ ನಗರ ಮತ್ತು ಆ ರಾಜ್ಯದ ವಾಣಿಜ್ಯ ರಾಜಧಾನಿಯಾದ ಇಂದೋರ್ ನಗರದಲ್ಲಿ ಜನವರಿ 1, 2025ರಿಂದ ಭಿಕ್ಷೆ ಬೇಡುವ ಭಿಕ್ಷುಕರಿಗೆ ಮತ್ತು ಭಿಕ್ಷೆ ನೀಡುವ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸುವುದು ಸೇರಿದಂತೆ ಇತರೆ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಇಂದೋರ್ ಜಿಲ್ಲಾಡಳಿತ ಪ್ರಕಟಿಸಿದೆ.
ಈ ನಡುವೆ ಇಂದೋರ್ನಲ್ಲಿ ಭಿಕ್ಷುಕಿಯೊಬ್ಬಳು ಪತ್ತೆಯಾಗಿದ್ದು, ಆಕೆಯನ್ನು ತನಿಖೆ ನಡೆಸಿದಾಗ, ಆಕೆಯ ಬಳಿ ಇದ್ದ ಹಣ ಕಂಡು ಅಧಿಕಾರಿಗಳು ಶಾಕ್ ಆಗಿದ್ದಾರೆ.
ಇಂದೋರ್ನ ಹೈಕೋರ್ಟಿನ ಅನತಿ ದೂರದಲ್ಲಿರುವ ಮಸೀದಿಯ ಹೊರಗೆ ಕುಳಿತು ಭಿಕ್ಷೆ ಬೇಡುತ್ತಿದ್ದ ಭಿಕ್ಷುಕಿಯೊಬ್ಬಳನ್ನು ವಶಕ್ಕೆ ಪಡೆಯಲಾಗಿದ್ದು,ಆಕೆಯ ಬಳಿ ಇದ್ದ ಪ್ಲಾಸ್ಟಿಕ್ ಚೀಲ ಪರಿಶೀಲಿಸಲಾಗಿದೆ. ಭಿಕ್ಷುಕಿಯ ಬ್ಯಾಗ್ನಲ್ಲಿ ಸುಮಾರು 30-40 ಪರ್ಸ್ಗಳು ಪತ್ತೆಯಾಗಿದ್ದು, ಅದರಲ್ಲಿ ಸುಮಾರು 75 ಸಾವಿರ ರೂ. ಇರುವುದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಭಿಕ್ಷುಕಿ ಮಸೀದಿಯ ಬಳಿ ಬಹಳ ಸಮಯದಿಂದ ಭಿಕ್ಷೆ ಬೇಡುತ್ತಿರುವುದು ತಿಳಿದುಬಂದಿದೆ. ನಂತರ ಆಕೆಯನ್ನು ಅಲ್ಲಿಂದ ಉಜ್ಜಯಿನಿಯ ಆಶ್ರಮಕ್ಕೆ ಸ್ಥಳಾಂತರಿಸಲಾಗಿದೆ.
ಮಹಿಳೆಯೊಂದಿಗೆ ಮತ್ತೊಬ್ಬ ಭಿಕ್ಷುಕನನ್ನೂ ವಶಕ್ಕೆ ಪಡೆದ ಸರ್ಕಾರಿ ತಂಡ ಆತನಿಂದ 20 ಸಾವಿರ ರೂ. ವಶಪಡಿಸಿಕೊಂಡಿದ್ದಾರೆ. ತಾನು ಪ್ರತಿದಿನ ಬೇರೆ ಬೇರೆ ಪ್ರದೇಶದಿಂದ ಇಂದೋರ್ಗೆ ಭಿಕ್ಷೆ ಬೇಡಲು ಬರುತ್ತಿದ್ದೆ ಎಂದು ಒಪ್ಪಿಕೊಂಡಿದ್ದಾನೆ. ಜನವರಿ 1ರ ನಂತರ ನಗರದಲ್ಲಿ ಯಾರೇ ಭಿಕ್ಷಾಟನೆ ಮಾಡುತ್ತಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರಿ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
8ರ ಬಾಲೆ ಅ*ಚಾರ ವಿರೋಧಿಸಿದ್ದಕ್ಕೆ ಕೊ* ಮಾಡಿದ್ದ ಆರೋಪಿಗೆ ಗುಂಡೇಟು.
ವಾರಾಣಸಿ:- ವಾರಾಣಸಿಯ ಶಾಲೆಯೊಂದರ ಬಳಿಕ ಗೋಣಿಚೀಲದಲ್ಲಿ 8 ವರ್ಷದ ಬಾಲಕಿಯ ಅರೆಬೆತ್ತಲೆ ಶವ ಪತ್ತೆಯಾಗಿತ್ತು. ಅತ್ಯಾಚಾರವನ್ನು ವಿರೋಧಿಸಿದ್ದಕ್ಕೆ ಆರೋಪಿ ಬಾಲಕಿಯನ್ನು ಕೊಂದು, ಗೋಣಿಚೀಲದಲ್ಲಿ ತುಂಬಿ ಎಸೆದು ಪರಾರಿಯಾಗಿದ್ದ. ಆರೋಪಿ ಇರ್ಷಾದ್ಗೆ ಗುಂಡು ಹಾರಿಸಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ವಾರಾಣಸಿಯ ಸುಜಾಬಾದ್ ಪ್ರದೇಶದಲ್ಲಿ…