ಭಾರತದ ಪೆಟ್ರೋಲಿಯಂ ಉತ್ಪನ್ನಗಳ ಬೇಡಿಕೆ ಶೇ 4ರಷ್ಟು ಹೆಚ್ಚಳ: ಹೊರ ಬಿತ್ತು ಫಿಚ್ ರೇಟಿಂಗ್ಸ್ ವರದಿ.

ನವದೆಹಲಿ : ಮಾರ್ಚ್ 31, 2025 ಕ್ಕೆ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿಯಂಥ ಪೆಟ್ರೋಲಿಯಂ ಉತ್ಪನ್ನಗಳ ಬೇಡಿಕೆ ಶೇಕಡಾ 3 ರಿಂದ 4 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಫಿಚ್ ರೇಟಿಂಗ್ಸ್ ವರದಿ ತಿಳಿಸಿದೆ. ಗ್ರಾಹಕ ವಲಯ, ಕೈಗಾರಿಕಾ ವಲಯ ಮತ್ತು ಮೂಲಸೌಕರ್ಯ ವಲಯಗಳಲ್ಲಿ ಹೆಚ್ಚಿದ ಬಳಕೆಯಿಂದಾಗಿ ಬೇಡಿಕೆ ಹೆಚ್ಚಾಗಲಿದೆ ಎಂದು ರೇಟಿಂಗ್ ಏಜೆನ್ಸಿ ವರದಿಯಲ್ಲಿ ತಿಳಿಸಿದೆ.
ಇಂಧನ ಉತ್ಪಾದನೆಯಲ್ಲಿನ ಕುಸಿತ, ಸ್ಥಳೀಯವಾಗಿ ಅತಿಯಾದ ಇಂಧನ ಪೂರೈಕೆ ಮತ್ತು ವಿಭಿನ್ನ ಕಚ್ಚಾ ತೈಲಗಳ ನಡುವಿನ ಬೆಲೆ ವ್ಯತ್ಯಾಸಗಳು ಕಡಿಮೆಯಾಗಿರುವುದರಿಂದ ಭಾರತದ ತೈಲ ಮಾರುಕಟ್ಟೆ ಕಂಪನಿಗಳ (ಒಎಂಸಿ) ಸಂಸ್ಕರಣಾ ಲಾಭಗಳು ಹಣಕಾಸು ವರ್ಷ 2025 ರ ಮಧ್ಯದಲ್ಲಿ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಬ್ರೆಂಟ್ ಕಚ್ಚಾ ತೈಲ ಬೆಲೆಗಳು ಕಡಿಮೆಯಾಗಿರುವುದರಿಂದ ಈ ಕಂಪನಿಗಳ ಮಾರುಕಟ್ಟೆ ಲಾಭವು ಹಣಕಾಸು ವರ್ಷ 2024 ಕ್ಕಿಂತ ಉತ್ತಮವಾಗಿರಲಿದೆ.
“ಬ್ರೆಂಟ್ ಕಚ್ಚಾ ತೈಲ ಬೆಲೆಗಳು ಕಡಿಮೆಯಾಗಿರುವುದು ತೈಲ ಮಾರುಕಟ್ಟೆ ಕಂಪನಿಗಳ ಸಂಸ್ಕರಣಾ ಲಾಭ ಕುಸಿತವನ್ನು ಒಂದಿಷ್ಟು ಕಡಿಮೆ ಮಾಡಲಿದೆ. ಆದಾಗ್ಯೂ, ಎಚ್ಪಿಸಿಎಲ್-ಮಿತ್ತಲ್ ಎನರ್ಜಿ ಲಿಮಿಟೆಡ್ (ಎಚ್ಎಂಇಎಲ್, ಬಿಬಿ + / ಸ್ಟೇಬಲ್) ನಂತಹ ಶುದ್ಧ ಸಂಸ್ಕರಣಾಗಾರಗಳ ಲಾಭದಾಯಕತೆಯ ಮೇಲೆ ಹೆಚ್ಚಿನ ಪ್ರತಿಕೂಲ ಪರಿಣಾಮ ಉಂಟಾಗಲಿದೆ. ಸ್ಥಳೀಯವಾಗಿ ಅತಿಯಾದ ಇಂಧನ ಪೂರೈಕೆ ಪ್ರಮಾಣ ಕಡಿಮೆಯಾಗುವುದರಿಂದ ಮತ್ತು ಬ್ರೆಂಟ್ ಕಚ್ಚಾ ತೈಲ ಬೆಲೆಗಳು ಫಿಚ್ನ ಊಹೆಗೆ ಅನುಗುಣವಾಗಿ ಕುಸಿಯುವುದರಿಂದ, ಹಣಕಾಸು ವರ್ಷ 2026 ರಲ್ಲಿ ಸಂಸ್ಕರಣಾ ಲಾಭಗಳು ತಮ್ಮ ಮಧ್ಯ-ಚಕ್ರದ ಮಟ್ಟಕ್ಕೆ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ. ಆದರೆ ಇದೇ ಸಂದರ್ಭದಲ್ಲಿ ಮಾರ್ಕೆಟಿಂಗ್ ಲಾಭಗಳು ಉತ್ತಮವಾಗಿರಲಿವೆ. ರಿಫೈನಿಂಗ್ ಲಾಭಗಳಲ್ಲಿ ಕ್ರಮೇಣ ಸಾಮಾನ್ಯೀಕರಣದಿಂದಾಗಿ ಹಣಕಾಸು ವರ್ಷ 2025 ರಲ್ಲಿ ಎಚ್ಎಂಇಎಲ್ನ ಕಡಿಮೆ ರೇಟಿಂಗ್ ಪ್ರಮಾಣವು 2026 ರಲ್ಲಿ ಸುಧಾರಿಸಲಿದೆ” ಎಂದು ವರದಿ ತಿಳಿಸಿದೆ.
ಭಾರತದ ತೈಲ ಮತ್ತು ಅನಿಲ ಉತ್ಪಾದನೆಯ ಪ್ರಮಾಣವು 2025ರ ಹಣಕಾಸು ವರ್ಷದಲ್ಲಿ ಬಹುತೇಕ ಒಂದೇ ರೀತಿಯಾಗಿರುವ ನಿರೀಕ್ಷೆಯಿದೆ. ಹಳೆಯ ನಿಕ್ಷೇಪಗಳಲ್ಲಿ ನೈಸರ್ಗಿಕ ಅನಿಲದ ಉತ್ಪಾದನೆಯ ಕುಸಿತ ತಡೆಗಟ್ಟುವ ಸಲುವಾಗಿ ಉತ್ಪಾದನೆ ಹೆಚ್ಚಿಸಲು ಮತ್ತು ಪ್ರತ್ಯೇಕ ನಿಕ್ಷೇಪಗಳನ್ನು ಪತ್ತೆ ಮಾಡುವುದಕ್ಕಾಗಿ ಹೊಸ ತಂತ್ರಜ್ಞಾನದ ಮೇಲೆ ಹಣ ಹೂಡಿಕೆ ಮಾಡಲು ಮುಂಚೂಣಿ ಕಂಪನಿಗಳು ಹೆಣಗಾಡುತ್ತಿರುವುದರಿಂದ ಭಾರತದ ಕಚ್ಚಾ ತೈಲ ಉತ್ಪಾದನೆಯು 2025 ರ ಹಣಕಾಸು ವರ್ಷದಲ್ಲಿ ಶೇಕಡಾ 2 ರಿಂದ 3 ರಷ್ಟು ಕುಸಿಯಲಿದೆ ಎಂದು ವರದಿ ಹೇಳಿದೆ.

Related Posts

ದತ್ತು ಪಡೆದ ಮಗನನ್ನೇ ಮದುವೆಯಾದ ತಾಯಿ!

ನವದೆಹಲಿ:-ಮಕ್ಕಳಿಲ್ಲದ ದಂಪತಿ ಸಂಬಂಧಿಕರ ಮಕ್ಕಳನ್ನು ಅಥವಾ ಅನಾಥರನ್ನು ದತ್ತು ತೆಗೆದುಕೊಂಡು ‘ಅವರನ್ನು ಬೆಳೆಸುತ್ತಾರೆ. ಒಳ್ಳೆಯ ಸಂಬಂಧ ನೋಡಿ ಬೆಳೆಸಿ ಮದುವೆ ಮಾಡುತ್ತಾರೆ. ಆದರೆ ಯುವತಿಯೊಬ್ಬಳು ತಾನು ಬಾಲ್ಕದಿಂದ ಬೆಳೆಸಿದ ಮಗುವನ್ನು ಅವನು ಯುವಕನಾಗಿದ್ದಾಗ ಮದುವೆಯಾದಳು. ತಾಯಿ ತನ್ನ ಮಲಮಗನನ್ನು ಮದುವೆಯಾಗುವುದನ್ನು ನೀವು…

ಇಂಧನ ದರ ಕೊಂಚ ಇಳಿಕೆ; ಇಲ್ಲಿದೆ ಸಂಪೂರ್ಣ ಮಾಹಿತಿ.

ಮಹಾರಾಷ್ಟ್ರ : ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಜನವರಿ 08, ಬುಧವಾರದ ಪೆಟ್ರೋಲ್, ಡೀಸೆಲ್ ದರಗಳನ್ನು ಬಿಡುಗಡೆ ಮಾಡಿವೆ. ನವದೆಹಲಿಯಲ್ಲಿ ಡೀಸೆಲ್ ಬೆಲೆ ಲೀಟರ್ಗೆ 87.67 ರೂ. ಮುಂಬೈನಲ್ಲಿ ಡೀಸೆಲ್ ಬೆಲೆ ಲೀಟರ್ಗೆ 90.03 ರೂ. ಕೋಲ್ಕತ್ತಾದಲ್ಲಿ ಡೀಸೆಲ್ ಬೆಲೆ ಲೀಟರ್ಗೆ…

Leave a Reply

Your email address will not be published. Required fields are marked *

You Missed

ಹೆಂಡತಿ ಬದುಕಿರುವಾಗಲೇ ಇನ್ನೊಂದು ಮದುವೆಯ ಯತ್ನ;ಪೋಷಕರಿಂದ ಬ*ಯಾದ ಯುವಕ.

ಹೆಂಡತಿ ಬದುಕಿರುವಾಗಲೇ ಇನ್ನೊಂದು ಮದುವೆಯ ಯತ್ನ;ಪೋಷಕರಿಂದ ಬ*ಯಾದ ಯುವಕ.

ದತ್ತು ಪಡೆದ ಮಗನನ್ನೇ ಮದುವೆಯಾದ ತಾಯಿ!

ದತ್ತು ಪಡೆದ ಮಗನನ್ನೇ ಮದುವೆಯಾದ ತಾಯಿ!

ಬೀಚ್ಗೆ ಹೋಗಿದ್ದ ಮೂವರು ಸಮುದ್ರಪಾಲು, ಓರ್ವ ರಕ್ಷಣೆ : ಮಂಗಳೂರಿನಲ್ಲಿ ಘಟನೆ

ಬೀಚ್ಗೆ ಹೋಗಿದ್ದ ಮೂವರು ಸಮುದ್ರಪಾಲು, ಓರ್ವ ರಕ್ಷಣೆ : ಮಂಗಳೂರಿನಲ್ಲಿ ಘಟನೆ

ಜನ ಸಾಮಾನ್ಯರಿಗೆ ಭಯ ಮುಕ್ತ ವಾತಾವರಣ ನಿರ್ಮಿಸಿ: ಪೊಲೀಸರಿಗೆ ಸಿಎಂ‌ ಸೂಚನೆ.

ಜನ ಸಾಮಾನ್ಯರಿಗೆ ಭಯ ಮುಕ್ತ ವಾತಾವರಣ ನಿರ್ಮಿಸಿ: ಪೊಲೀಸರಿಗೆ ಸಿಎಂ‌ ಸೂಚನೆ.

ಇಂಧನ ದರ ಕೊಂಚ ಇಳಿಕೆ; ಇಲ್ಲಿದೆ ಸಂಪೂರ್ಣ ಮಾಹಿತಿ.

ಇಂಧನ ದರ ಕೊಂಚ ಇಳಿಕೆ; ಇಲ್ಲಿದೆ ಸಂಪೂರ್ಣ ಮಾಹಿತಿ.

2025ನೇ ಇಸವಿಯಲ್ಲಿ ಮದುವೆಗೆ ಯಾವ್ಯಾವ ದಿನ ಶುಭ ಮುಹೂರ್ತ; ಇಲ್ಲಿದೆ ಸಂಪೂರ್ಣ ಪಟ್ಟಿ..!

2025ನೇ ಇಸವಿಯಲ್ಲಿ ಮದುವೆಗೆ ಯಾವ್ಯಾವ ದಿನ ಶುಭ ಮುಹೂರ್ತ; ಇಲ್ಲಿದೆ ಸಂಪೂರ್ಣ ಪಟ್ಟಿ..!