ಬೆಂಗಳೂರು : ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕದ ನಾಲ್ಕು ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಶೇಕಡಾ 15ರಷ್ಟು ಏರಿಕೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಆ ಮೂಲಕ ಕರ್ನಾಟಕದ ಜನರಿಗೆ ಹೊಸ ವರ್ಷಕ್ಕೆ ಸರ್ಕಾರ ಬಿಗ್ ಶಾಕ್ ನೀಡಿದೆ. ಸಚಿವ ಸಂಪುಟ ಸಭೆ ಬಳಿಕ ಸರ್ಕಾರ ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆ.
ಈಗಾಗಲೇ ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಆಗಸ್ಟ್ನಲ್ಲಿ ನಾಲ್ಕು ಸಾರಿಗೆ ನಿಗಮಗಳು ಪ್ರಸ್ತಾವನೆ ಸಲ್ಲಿಸಿದ್ದವು. ಅದರ ಬೆನ್ನಲ್ಲೇ ಇಂದು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
• ಬಿಎಂಟಿಸಿ: ಈ ವರ್ಷ ಆಗಸ್ಟ್ನಲ್ಲಿ ಶೇಕಡಾ 42 ರಷ್ಟು ಟಿಕೆಟ್ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. 2014 ರಲ್ಲಿ ಟಿಕೆಟ್ ದರ ಹೆಚ್ಚಳ ಆಗಿತ್ತು ಮತ್ತೆ ಹೆಚ್ಚಳ ಆಗಿರಲಿಲ್ಲ.
• ಕೆಎಸ್ಆರ್ಟಿಸಿ: ಶೇಕಡಾ 25 ರಿಂದ 30 ರಷ್ಟು ಟಿಕೆಟ್ ದರ ಹೆಚ್ಚಳಕ್ಕೆ ಆಗಸ್ಟ್ನಲ್ಲಿ ಪ್ರಸ್ತಾವನೆ ಸಲ್ಲಿಸಿತ್ತು. 2020ರ ಫೆಬ್ರುವರಿಯಲ್ಲಿ ಕೆಎಸ್ಆರ್ಟಿಸಿ ಟಿಕೆಟ್ ದರ ಹೆಚ್ಚಳ ಮಾಡಲಾಗಿತ್ತು, ಬಳಿಕ ಮತ್ತೆ ಹೆಚ್ಚಳ ಮಾಡಿಲ್ಲ.
• ಕೆಡಬ್ಲ್ಯೂಆರ್ಟಿಸಿ: ಶೇಕಡಾ 30 ರಷ್ಟು ಟಿಕೆಟ್ ದರ ಹೆಚ್ಚಳಕ್ಕೆ ಆಗಸ್ಟ್ನಲ್ಲಿ ಪ್ರಸ್ತಾವನೆ ಸಲ್ಲಿಸಿತ್ತು. 2020 ರ ಫೆಬ್ರುವರಿಯಲ್ಲಿ ಕೊನೆಯದಾಗಿ ಕೆಡಬ್ಲ್ಯೂಆರ್ಟಿಸಿ ಟಿಕೆಟ್ ದರ ಹೆಚ್ಚಳ ಮಾಡಲಾಗಿತ್ತು.
• ಕೆಕೆಆರ್ಟಿಸಿ: ಶೇಕಡಾ 25 ರಿಂದ 30 ರಷ್ಟು ಟಿಕೆಟ್ ದರ ಹೆಚ್ಚಳಕ್ಕೆ ಆಗಸ್ಟ್ನಲ್ಲೇ ಪ್ರಸ್ತಾವನೆ ಸಲ್ಲಿಸಿತ್ತು. 2020ರ ಫೆಬ್ರುವರಿಯಲ್ಲಿ ಕೆಕೆಆರ್ಟಿಸಿ ಟಿಕೆಟ್ ದರ ಹೆಚ್ಚಳ ಮಾಡಿದ್ದು ಬಿಟ್ಟರೆ ಮತ್ತೆ ಮಾಡಿಲ್ಲ.
ಸದ್ಯ ರಾಜ್ಯದಲ್ಲಿ ಡಿಸೇಲ್ ಬೆಲೆ 88.99 ರೂ. ಇದ್ದ, 2020 ರಲ್ಲಿ ರಾಜ್ಯದಲ್ಲಿ 68 ರೂ ಡಿಸೇಲ್ ಇತ್ತು. ಅದು 2014 ರಲ್ಲಿ ರಾಜ್ಯದಲ್ಲಿ 54 ರಿಂದ 55 ರೂ. ಇತ್ತು.
ಟಿಕೆಟ್ ದರ ಏರಿಕೆ ಸಾರ್ವಜನಿಕರು ಆಕ್ರೋಶ
ಸಚಿವ ಸಂಪುಟ ಟಿಕೆಟ್ ದರ ಏರಿಕೆ ಮಾಡುತ್ತಿದ್ದಂತೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿ ಜನರಿಂದ ಆಕ್ರೋಶ ಹೊರಹಾಕಿದ್ದಾರೆ. ಬಸ್ ದರ ಹೆಚ್ಚಳ ಎನ್ನುತ್ತೀರಾ, ಆದರೆ ಬಸ್ ಇಲ್ಲದೆ ನಿಂತು ಸಾಕಾಗಿದೆ ಎನ್ನುತ್ತಿದ್ದಾರೆ. ಯಾವುದೇ ಕಾರಣಕ್ಕೂ ದರ ಹೆಚ್ಚಳ ಮಾಡಬಾರದು. ಮಹಿಳೆಯರಿಗೆ ಉಚಿತ ಅಂದ್ರೆ, ನಮಗೂ ಉಚಿತ ಮಾಡಿ. ಅವರಿಗೊಂದು ನ್ಯಾಯ, ನಮಗೊಂದು ನ್ಯಾಯನಾ? ಮಾಡುವುದಿದ್ದರೆ ಎಲ್ಲರಿಗೂ ಒಂದೇ ಮಾಡಿ ಎಂದು ಹೇಳಿದ್ದಾರೆ.
ಪ್ರೀತಿಸಿದ ಹುಡುಗಿ ಕೈಕೊಟ್ಟಿದ್ದಕ್ಕೆ ಪ್ರಾ* ಕಳೆದುಕೊಂಡ ಯುವಕ!
ಬಾಣಸವಾಡಿ :- ಪ್ರೀತಿಸಿದ ಹುಡುಗಿ ದೂರವಾಗಿದಕ್ಕೆ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸತೀಶ್ ಕುಮಾರ್(25) ವರ್ಷದ ಯುವಕ ಆತ್ಮಹತ್ಯೆಗೆ ಒಳಗಾಗಿರುವ ವ್ಯಕ್ತಿಯಾಗಿದ್ದಾನೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಸತೀಶ್ ಕಾಲೇಜಿನಿಂದಲೆ ಯುವತಿಯೋರ್ವಳನ್ನ ಪ್ರೀತಿಸುತ್ತಿದ್ದ, ಇಬ್ಬರು ಪರಸ್ಪರ ಪ್ರೀತಿಸಿ ಒಟ್ಟಿಗೆ ಓಡಾಡಿದ್ರು ಆದ್ರೆ ಇತ್ತೀಚೆಗೆ…