ದಕ್ಷಿಣ ಭಾರತದ ಪ್ರಸಿದ್ಧ ನಟಿ ಸಾಯಿ ಪಲ್ಲವಿ ಅವರು 2 ಕೋಟಿ ರೂಪಾಯಿ ಮೌಲ್ಯದ ಒಂದು ಫೇರ್ನೆಸ್ ಕ್ರೀಮ್ ಜಾಹೀರಾತನ್ನು ತಿರಸ್ಕರಿಸಿದ್ದಾರೆ. ಅವರ ಈ ನಿರ್ಧಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇದಲ್ಲದೆ, ಅವರು ಬಾಲಿವುಡ್ನಲ್ಲಿ ತಮ್ಮ ಅಭಿನಯ ಪ್ರವೇಶಕ್ಕೆ ಸಿದ್ಧರಾಗಿದ್ದಾರೆ. ವೈದ್ಯಕೀಯ ಪದವೀಧರೆಯೂ ಆಗಿರುವ ಸಾಯಿ ಪಲ್ಲವಿ ಅವರ ಸರಳತೆ ಮತ್ತು ತತ್ವಗಳಿಗೆ ಈ ಘಟನೆ ಸಾಕ್ಷಿಯಾಗಿದೆ. ಅವರ ಮುಂದಿನ ಚಿತ್ರ ‘ರಾಮಾಯಣ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ದಕ್ಷಿಣ ಭಾರತದ ನಟಿ ಸಾಯಿ ಪಲ್ಲವಿ ಅವರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದವರು. ಅವರಿಗೆ ಹಲವು ಆಫರ್ಗಳು ಬಂದಿದ್ದವು. ಈ ಪೈಕಿ ಅವರು ಅಳೆದು ತೂಗಿ ಕೆಲವು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಈ ಸುಂದರ ನಟಿ ವೈದ್ಯೆ ಕೂಡ ಹೌದು. ಅವರು ಎಂಬಿಬಿಎಸ್ ಕೂಡ ಓದಿದ್ದಾರೆ. ಸೌತ್ ನಂತರ ಬಾಲಿವುಡ್ನಲ್ಲಿ ಸದ್ದು ಮಾಡಲು ಸಾಯಿ ಪಲ್ಲವಿ ಸಜ್ಜಾಗಿದ್ದಾರೆ. ಈ ಮಧ್ಯೆ ಸಾಯಿ ಪಲ್ಲವಿ ಅವರ ಒಂದು ಅಪರೂಪದ ವಿಚಾರ ರಿವೀಲ್ ಆಗಿದೆ. ಅವರು ಬರೋಬ್ಬರಿ 2 ಕೋಟಿ ರೂಪಾಯಿ ಜಾಹೀರಾತನ್ನು ರಿಜೆಕ್ಟ್ ಮಾಡಿದ್ದರು ಎಂಬುದು ವಿಶೇಷ.
‘ಜಾಹೀರಾತುಗಳಿಂದ ಬಂದ ಹಣವನ್ನು ಏನು ಮಾಡೋದು. ನಾನು ಮನೆಗೆ ಹೋಗಿ ಮೂರು ಚಪಾತಿ ತಿನ್ನುತ್ತೇನೆ ಅಷ್ಟೆ. ನನಗೆ ದೊಡ್ಡ ಆಸೆಗಳಿಲ್ಲ’ ಎಂದು ಸಾಯಿ ಪಲ್ಲವಿ ಹೇಳಿದ್ದರು. ಈ ಮೂಲಕ ಅವರು ಎಲ್ಲ ವಿಚಾರಗಳಿಗೆ ಸ್ಪಷ್ಟನೆ ನೀಡಿದ್ದರು. ಸಾಯಿ ಪಲ್ಲವಿಗೆ ಫೇರ್ನೆಸ್ ಕ್ರೀಂ ಜಾಹೀರಾತಿಗೆ 2 ಕೋಟಿ ರೂ. ಸಿಕ್ಕಿತ್ತು. ಆದರೆ, ಇದನ್ನು ನಟಿ ತಿರಸ್ಕರಿಸಿದ್ದಾರೆ.
ಸದ್ಯ ಸಾಯಿ ಪಲ್ಲವಿ ಅವರು ‘ರಾಮಾಯಣ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಇದೆ. 2026ರಲ್ಲಿ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ.
ರಾಜ್ಯದಲ್ಲಿ 7 ದಿನ ಶೋಕಾಚಾರಣೆ; ಇಂದು ಸರ್ಕಾರಿ ರಜೆ ಘೋಷಣೆ
ಭಾರತದ ಮಾಜಿ ಪ್ರಧಾನಿ, ಅರ್ಥಶಾಸ್ತ್ರಜ್ಞ, ಹಿರಿಯ ಕಾಂಗ್ರೆಸ್ ನಾಯಕ ಮನಮೋಹನ್ ಸಿಂಗ್ ಅವರು ಗುರುವಾರ ದೆಹಲಿಯಲ್ಲಿ ವಿಧಿವಶರಾಗಿದ್ದಾರೆ. ಅವರ ನಿಧನ ಹಿನ್ನೆಲೆ ಕರ್ನಾಟಕ ಸರ್ಕಾರ ರಾಜ್ಯದಲ್ಲಿ 7 ದಿನಗಳ ಕಾಲ ಶೋಕಾಚರಣೆ ಮತ್ತು ಇಂದು ಸರ್ಕಾರಿ ರಜೆ ಘೋಷಣೆ ಮಾಡಿ ಆದೇಶ…