ಮೈಸೂರಿನ ಪೊಲೀಸ್ ಪೇದೆಯೊಬ್ಬರ ಪುತ್ರ ನೇಣು ಬಿಗಿದುಕೊಂಡು ಆತ್ಮಹತ್ಯೆ.
ಪೊಲೀಸ್ ಪಬ್ಲಿಕ್ ಶಾಲೆಯ ಐದನೇ ತರಗತಿ ವಿದ್ಯಾರ್ಥಿ ಕುಶಾಲ್ ಆತ್ಮಹತ್ಯೆ. 11 ವರ್ಷ ಪ್ರಾಯ. ತಂದೆ ಪೊಲೀಸ್ ಪೇದೆ, ತಾಯಿ ಲಕ್ಷ್ಮಿ ಅವರು ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ಯೋಗ ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆ. ಇಂದು ಮದ್ಯಾಹ್ನ ಎರಡೂವರೆಗೆ ಶಾಲೆ ಮುಗಿಸಿಕೊಂಡು ಮನೆಗೆ ಹೋಗಿ ನೇಣು ಬಿಗಿದುಕೊಂಡು ಸಾವು. ತಾಯಿ ಲಕ್ಷ್ಮಿ ಇಸ್ಕಾನ್ ದೇವಾಲಯಕ್ಕೆ ಹೋಗಿದ್ದರು. ತಂದೆ ಕೆಲಸಕ್ಕೆ ಹೋಗಿದ್ದರು. ತಾಯಿಯ ದುಪ್ಪಟ್ಟದಲ್ಲಿ ಇಂದು ನೇಣು ಹಾಕಿಕೊಂಡು ಸಾವು, ನಾಳೆ ಮರಣೋತ್ತರ ಪರೀಕ್ಷೆ ಬಳಿಕ ಪೋಷಕರಿಗೆ ಮೃತದೇಹ ಹಸ್ತಾಂತರ.
ತಾಯಿ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ. ನಂತರ ತಾಯಿಯೇ ಮಗನನ್ನು ಕುಣಿಕೆಯಿಂದ ಇಳಿಸಿ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ, ವೈದ್ಯರು ಸಾವಿಗೀಡಾಗಿರುವ ಬಗ್ಗೆ ತಿಳಿಸಿದ್ದಾರೆ. ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು. ಬುಧವಾರ ಅಂತ್ಯಕ್ರಿಯೆ ನಡೆಯಲಿದೆ.