ಕನ್ನಡದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ‘ಕೆವಿಎನ್’ ನಿರ್ಮಿಸುತ್ತಿರುವ, ತಮಿಳು ಸೂಪರ್ ಸ್ಟಾರ್ ದಳಪತಿ ವಿಜಯ್ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ ”ದಳಪತಿ 69”. ಈ ಚಿತ್ರದಲ್ಲಿ ಕರಾವಳಿ ಬೆಡಗಿ ಪೂಜಾ ಹೆಗ್ಡೆ ಪ್ರಮುಖ ಪಾತ್ರ ವಹಿಸಲಿದ್ದಾರೆ.
ತಮಿಳು ಸೂಪರ್ ಸ್ಟಾರ್ ದಳಪತಿ ವಿಜಯ್ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ ”ದಳಪತಿ 69”. ತಾತ್ಕಾಲಿಕ ಶೀರ್ಷಿಕೆಯ ಈ ಸಿನಿಮಾ ನಟನ ಕೊನೆ ಚಿತ್ರ. ಅಲ್ಲದೇ, ಕನ್ನಡದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿರುವ ಹಿನ್ನೆಲೆ ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ. ಈ ಚಿತ್ರಕ್ಕೀಗ ಕರುನಾಡಿನ ಕರಾವಳಿ ಬೆಡಗಿ ಪೂಜಾ ಹೆಗ್ಡೆ ಎಂಟ್ರಿಯಾಗಿದೆ.
ಚಿತ್ರ ನಿರ್ಮಾಪಕರು ಇಂದು ತಮ್ಮ ತಂಡಕ್ಕೆ ಪೂಜಾ ಹೆಗ್ಡೆ ಅವರ ಸೇರ್ಪಡೆಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಬಹುನಿರೀಕ್ಷಿತ ಚಿತ್ರದ ಹಿಂದಿರುವ ಕನ್ನಡದ ಪ್ರಸಿದ್ಧ ಚಲನಚಿತ್ರ ನಿರ್ಮಾಣ ಸಂಸ್ಥೆಯಾದ ”ಕೆವಿಎನ್ ಪ್ರೊಡಕ್ಷನ್ಸ್” ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ವೊಂದನ್ನು ಶೇರ್ ಮಾಡುವ ಮೂಲಕ ಕರಾವಳಿ ಬೆಡಗಿಯ ಎಂಟ್ರಿ ಘೋಷಿಸಿದ್ದಾರೆ.