ದಕ್ಷಿಣ ಕೊರಿಯಾ :- ಕಜಕಿಸ್ತಾನ್ ವಿಮಾನ ಪತನ ಘಟನೆ ಮಾಸುವ ಮುನ್ನವೇ ದಕ್ಷಿಣ ಕೊರಿಯಾದಲ್ಲಿ ಭೀಕರ ವಿಮಾನ ಪತನ ಸಂಭವಿಸಿದೆ. ಮುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಅಪಘಾತದಲ್ಲಿ ಕೊರಿಯಾದ ಜೆಜು ಏರ್ ಪ್ರೈಟ್ನ 179 ಪ್ರಯಾಣಿಕರು ದುರಂತ ಸಾವಿಗೀಡಾಗಿದ್ದಾರೆ. ಭಾನುವಾರ (ಡಿ.29) ಮುಂಜಾನೆ ಈ ಘಟನೆ ನಡೆದಿದೆ. ದಕ್ಷಿಣ ಕೊರಿಯಾದ ಇತಿಹಾಸದಲ್ಲೇ ಮಾರಣಾಂತಿಕ ವಾಯುಯಾನ ದುರಂತಗಳಲ್ಲಿ ಇದು * ಕೂಡ ಒಂದಾಗಿದೆ.
ಬೋಯಿಂಗ್ 737-800 ಸಂಖ್ಯೆಯ ವಿಮಾನವು ರನ್‌ವೇಯಿಂದ ಸ್ಕಿಡ್ ಆಗಿ ವೇಗವಾಗಿ ಗಾರ್ಡ್ ರೈಲ್‌ಗೆ ಅಪ್ಪಳಿಸಿದ ಪರಿಣಾಮ ದೊಡ್ಡದಾಗಿ ಬೆಂಕಿ ಹೊತ್ತಿಕೊಂಡು, ಇಡೀ ವಿಮಾನವೇ ಸುಟ್ಟು ಕರಕಲಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಮನಕಲಕಿದೆ. ಈ ಅಪಘಾತದಲ್ಲಿ ಇಬ್ಬರನ್ನು ರಕ್ಷಿಸಲಾಗಿದೆ. ವಿಮಾನದ ಲ್ಯಾಂಡಿಂಗ್ ಗೇರ್ ವಿಫಲವಾದ ಕಾರಣ ಪೈಲಟ್ “ಬೆಲ್ಲಿ ಲ್ಯಾಂಡಿಂಗ್” ಗೆ ಪ್ರಯತ್ನಿಸಿದಂತಿದೆ ವಿಮಾನದ ಅಡಿ ಭಾಗ ಅಂದರೆ ಹೊಟ್ಟೆಯು ರನ್‌ವೇನಲ್ಲಿ ಉಜ್ಜಿಕೊಂಡು ಹೋಗಿದೆ ತಾಂತ್ರಿಕ ದೋಷದಿಂದ ಲ್ಯಾಂಡಿಂಗ್ ಗೇರ್ ತೆರೆಯದ ಕಾರಣ ಪೈಲಟ್ ಈ ರೀತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಸಾಮಾನ್ಯ ಲ್ಯಾಂಡಿಂಗ್ ವಿಫಲವಾದ ನಂತರ ಪೈಲಟ್ ಕ್ಯಾಶ್ ಲ್ಯಾಂಡಿಂಗ್ ಮಾಡಲು ಪ್ರಯತ್ನಿಸಿದರು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇನ್ನು ವಿಮಾನಕ್ಕೆ ಪಕ್ಷಿಗಳ ಹಿಂಡು ಡಿಕ್ಕಿ ಹೊಡೆದಿರಬಹುದು ಎಂದು ಶಂಕಿಸಲಾಗಿದೆ ಪಕ್ಷಿಗಳು ಡಿಕ್ಕಿ ಹೊಡೆದ ನಂತರ ಒಂದರ ಹಿಂದೆ ಒಂದರಂತೆ ತಾಂತ್ರಿಕ ಸಮಸ್ಯೆಗಳು ಉದ್ಭವಿಸಿದವು ಲ್ಯಾಂಡಿಂಗ್ ಗೇರ್ ವೈಫಲ್ಯ ಮತ್ತು ಬೆಲ್ಲಿ ಲ್ಯಾಂಡಿಂಗ್ ಅಪಘಾತಕ್ಕೆ ಕಾರಣವಾಗಿದೆ.
ಇದೇ ಸಂದರ್ಭದಲ್ಲಿ ಅನೇಕ ನೆಟ್ಟಿಗರು ವಿಮಾನ ನಿಲ್ದಾಣದ ಅಧಿಕಾರಿಗಳ ವರ್ತನೆಗೆ ಕೋಪ ವ್ಯಕ್ತಪಡಿಸುತ್ತಿದ್ದಾರೆ. 3 ಕಿ.ಮೀ.ಗಿಂತ ಕಡಿಮೆ ಇರುವ ರನ್‌ವೇಯಲ್ಲಿ ಬೆಲ್ಲಿ ಲ್ಯಾಂಡಿಂಗ್ ನಡೆಯುವಾಗ ಅಗ್ನಿಶಾಮಕ ದಳದವರು ಏಕೆ ಸ್ಥಳದಲ್ಲಿ ಇರಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಮುವಾನ್ ಅಗ್ನಿಶಾಮಕ ಠಾಣೆಯ ಮುಖ್ಯಸ್ಮ ಲೀ ಜಿಯೋಂಗ್-ಹ್ಯುನ್ ಮಾಧ್ಯಮಗಳೊಂದಿಗೆ ಮಾತನಾಡಿದ್ದು ಕಟ್ಟ ಹವಾಮಾನವು ದುರಂತಕ್ಕೆ ಕಾರಣವಾಯಿತು ಎಂದು ಹೇಳಿದ್ದಾರೆ. ಆದಾಗ್ಯೂ ಜಂಟಿ ತನಿಖೆಯ ನಂತರ ನಾವು ನಿಖರವಾದ ಕಾರಣವನ್ನು ಪ್ರಕಟಿಸುತ್ತೇವೆ ಎಂದು ಹೇಳಿದ್ದಾರೆ. ಈ ಅಪಘಾತಕ್ಕೆ ಜೆಜು ಏರ್ ಫೈಟ್ ಸಂಸ್ಥೆ ಕ್ಷಮೆಯಾಚಿಸಿದೆ.
ಅಂದಹಾಗೆ ವಿಮಾನದಲ್ಲಿ 175 ಪ್ರಯಾಣಿಕರು ಮತ್ತು ಆರು ಸಿಬ್ಬಂದಿ ಇದ್ದರು. 173 ಪ್ರಯಾಣಿಕರು ದಕ್ಷಿಣ ಕೊರಿಯನ್ನರು ಮತ್ತು ಇಬ್ಬರು ಥಾಯ್ ಪ್ರಜೆಗಳು ಅಪಘಾತದಲ್ಲಿ ಇಬ್ಬರು ಬದುಕುಳಿದಿದ್ದಾರೆ. ಅವರಲ್ಲಿ ಒಬ್ಬ ಪ್ರಯಾಣಿಕ ಮತ್ತು ಇನ್ನೊಬ್ಬ ಸಿಬ್ಬಂದಿ. ವಿಮಾನವು ಸಂಪೂರ್ಣವಾಗಿ ನಾಶವಾಗಿದೆ ಎಂದು ಮುವಾನ್ ಅಗ್ನಿಶಾಮಕ ಕೇಂದ್ರದ ಮುಖ್ಯಸ್ಥ ಲೀ ಜಿಯೋಂಗ್-ಹೈಯಾನ್ ತಿಳಿಸಿದ್ದಾರೆ