ಕರ್ನಾಟಕದ ಸಾಕಮ್ಮ ಹಿಮಾಚಲದಲ್ಲಿ ಪತ್ತೆ: 20 ವರ್ಷಗಳ ಬಳಿಕ ರಾಜ್ಯಕ್ಕೆ ಕರೆತರುತ್ತಿದೆ ಅಧಿಕಾರಿಗಳ ತಂಡ .

ಹಿಮಾಚಲ ಪ್ರದೇಶ: 20 ವರ್ಷಗಳ ನಂತರ ಕರ್ನಾಟಕದ ಮಹಿಳೆ ಹಿಮಾಚಲ ರಾಜ್ಯದಲ್ಲಿ ಪತ್ತೆಯಾಗಿದ್ದಾರೆ. ಇದು ಸಿನಿಮಾ ಕಥೆಯಲ್ಲ. ಹಿಮಾಚಲ ಸರ್ಕಾರದ ಅಧಿಕಾರಿಯೊಬ್ಬರ ಸತತ ಪ್ರಯತ್ನ ಇಂದು ಆ ವೃದ್ಧೆಯನ್ನು ತನ್ನ ಕೊನೆಗಾಲದಲ್ಲಿ ಕುಟುಂಬವನ್ನು ಸೇರುವಂತೆ ಮಾಡಿದೆ. ಮಹಿಳೆಯ ಪುಣ್ಯವೋ, ಆಕೆಯ ಮಕ್ಕಳ ಭಾಗ್ಯವೋ ಸದ್ಯ ನಿನ್ನೆ ಕರ್ನಾಟಕದ ತನ್ನ ಮನೆಗೆ ಮಹಿಳೆ ಸುರಕ್ಷಿತವಾಗಿ ಸೇರಿಕೊಂಡಿದ್ದಾರೆ.
ಈ ಮಹಿಳೆಯ ಹೆಸರು ಸಾಕಮ್ಮ. ಮೊದಲೇ ಹೇಳಿದಂತೆ 20 ವರ್ಷಗಳ ಹಿಂದೆ ತನ್ನ ಮನೆ, ಪತಿ, ಮಕ್ಕಳಿಂದ ದೂರವಾಗಿದ್ದರು. ಇಷ್ಟು ದೀರ್ಘ ಸಮಯದ ನಂತರ ಮಹಿಳೆ ಪತ್ತೆಯಾಗಿದ್ದರೂ ಹೇಗೆ? ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ.
ಡಿಸೆಂಬರ್ 18 ರಂದು ಮಂಡಿಯ ಎಡಿಸಿ ರೋಹಿತ್ ರಾಥೋಡ್ ಅವರು ಜಿಲ್ಲೆಯ ವೃದ್ಧಾಶ್ರಮವಾದ ಭಂಗ್ರೋಟುಗೆ ತಪಾಸಣೆಗೆ ಎಂದು ಬಂದಿದ್ದರು. ಅಲ್ಲಿ ವೃದ್ಧಾಶ್ರಮದ ದಾಖಲೆಗಳಲ್ಲಿ ಸಾಕಮ್ಮ ಎಂಬ ಒಬ್ಬ ವೃದ್ಧಯನ್ನು ಕಂಡಿದ್ದಾರೆ.

ಈ ವೇಳೆ ಮಹಿಳೆ ಮೂಲತಃ ಕರ್ನಾಟಕದವರಾಗಿದ್ದು, ಹಿಂದಿ ಮಾತನಾಡುವುದಿಲ್ಲ ಎಂದು ತಿಳಿದು ಬಂದಿದೆ. ತಕ್ಷಣ ಅಧಿಕಾರಿ ಜಿಲ್ಲೆಯ ಇತರ ಅಧಿಕಾರಿಗಳೊಂದಿಗೆ ಮಾತನಾಡಿ ಸಾಕಮ್ಮನನ್ನು ಆಕೆಯ ಮನೆಗೆ ಕಳುಹಿಸಲು ಕಾರ್ಯಾಚರಣೆ ನಡೆಸಿದ್ದಾರೆ. ಮೊದಲು ಹಿಮಾಚಲದಲ್ಲಿನ ಕರ್ನಾಟಕದ ಅಧಿಕಾರಿಗಳ ಸಹಾಯ ಪಡೆದು ಸಾಕಮ್ಮನ ಜೊತೆ ಮಾತನಾಡುವಂತೆ ಮಾಡಿದ್ದಾರೆ.
ಕರ್ನಾಟಕದ ನಿವಾಸಿಯಾದ ಹಿಮಾಚಲದ ಕಂಗ್ರಾ ಜಿಲ್ಲೆಯ ಪಾಲಂಪೂರ್ನ ಎಸ್ಡಿಎಂ ನೇತ್ರಾ ಮೈತಿ ಸಾಕಮ್ಮನೊಂದಿಗೆ ದೂರವಾಣಿ ಮೂಲಕ ಕನ್ನಡದಲ್ಲಿ ಮಾತನಾಡಿ, ಆಕೆಯ ಮನೆಯ ಮಾಹಿತಿ ಸಂಗ್ರಹಿಸಿದ್ದಾರೆ. ನಂತರ ಮಂಡಿ ಜಿಲ್ಲೆಯಲ್ಲಿ ನಿಯೋಜನೆಗೊಂಡಿದ್ದ ಐಪಿಎಸ್ ಪ್ರೊಬೇಷನರ್ ಅಧಿಕಾರಿ ರವಿ ನಂದನ್ ಅವರನ್ನು ವೃದ್ಧಾಶ್ರಮಕ್ಕೆ ಕಳುಹಿಸುವ ಮೂಲಕ ಮತ್ತೊಮ್ಮೆ ಸಾಕಮ್ಮ ಅವರನ್ನು ಮಾತನಾಡಿಸಿದ್ದಾರೆ. ಈ ಮಹಿಳೆಯ ವಿಡಿಯೋವನ್ನು ಮಾಡಿ ಕರ್ನಾಟಕದ ಅಧಿಕಾರಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಬಳಿಕ ಹಿಮಾಚಲ ಪ್ರದೇಶ ಮತ್ತು ಕರ್ನಾಟಕದ ಅಧಿಕಾರಿಗಳ ಪ್ರಯತ್ನದಿಂದ ಸಾಕಮ್ಮನ ಕುಟುಂಬ ಪತ್ತೆಯಾಗಿದೆ. ಸಾಕಮ್ಮ ಕರ್ನಾಟಕದ ವಿಜಯನಗರ ಜಿಲ್ಲೆಯ ಡಣಾಯಕನಕೆರೆ ಗ್ರಾಮದ ನಿವಾಸಿಯೆಂದು ತಿಳಿದು ಬಂತು. ನಿಖರ ಮಾಹಿತಿ ಬಳಿಕ ಕರ್ನಾಟಕದ ಅಧಿಕಾರಿಗಳ ತಂಡವು ಸಾಕಮ್ಮನನ್ನು ಅವರ ಮನೆಗೆ ಕರೆದೊಯ್ಯಲು ಹಿಮಾಚಲಕ್ಕೆ ಆಗಮಿಸಿತು.
ಮಂಡಿ ಜಿಲ್ಲಾಧಿಕಾರಿ ಅಪೂರ್ವ ದೇವಗನ್ ಮಾತನಾಡಿ, “ವೃದ್ಧಾಶ್ರಮ, ಅನಾಥಾಶ್ರಮಗಳನ್ನು ಕಾಲಕಾಲಕ್ಕೆ ತಪಾಸಣೆ ಮಾಡಲಾಗುತ್ತಿದ್ದು, ಇತ್ತೀಚೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಅವರಿಂದ ಭಂಗ್ರೋಟು ಅನಾಥಾಶ್ರಮವನ್ನು ಪರಿಶೀಲನೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಅವರು ಕರ್ನಾಟಕದ ಮಹಿಳೆಯೊಂದಿಗೆ ಮಾತನಾಡಿದ್ದಾರೆ. ಆದರೆ ಅವರ ವಿಳಾಸ ಗೊತ್ತಾಗಿರಲಿಲ್ಲ . ನಂತರ ಜಿಲ್ಲಾಡಳಿತ ಕರ್ನಾಟಕದ ಅಧಿಕಾರಿಗಳ ಜೊತೆ ಸೇರಿ ವೃದ್ಧೆಯನ್ನ ಮನೆಗೆ ಕಳುಹಿಸಲು ಪ್ರಯತ್ನ ಮಾಡಿದೆವು, ಅದು ಕೊನೆಗೆ ಯಶಸ್ವಿಯಾಗಿದೆ” ಎಂದು ತಿಳಿಸಿದ್ದಾರೆ.

Related Posts

ಅಮೆರಿಕದ ಮಿಯಾಮಿಯಲ್ಲಿ ಶಿವರಾಜ್ ಕುಮಾರ್ ಯಶಸ್ವಿ ಶಸ್ತ್ರಚಿಕಿತ್ಸೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಅಮೆರಿಕದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಶಿವರಾಜ್ಕುಮಾರ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಇದನ್ನು ಹಂಚಿಕೊಳ್ಳಲು ಬಹಳ ಸಂತಸವಾಗುತ್ತಿದೆ ಎಂದು ಪತ್ನಿ ಗೀತಾ ಶಿವರಾಜ್ಕುಮಾರ್ ಹಾಗೂ ಬಾಮೈದ ಮಧು ಬಂಗಾರಪ್ಪ ಅವರು ವಿಡಿಯೋ ಮೂಲಕ…

ಕರ್ನಾಟಕದ ಮೂವರು ಯೋಧರು ಕಾಶ್ಮೀರ ಸೇನಾ ವಾಹನ ಅಪಘಾತದಲ್ಲಿ ನಿಧನ.

ಬೆಳಗಾವಿ: ಜಮ್ಮು ಕಾಶ್ಮೀರದಲ್ಲಿ ಸಂಭವಿಸಿದ ಸೇನಾ ವಾಹನ ಅಪಘಾತದಲ್ಲಿ ಕರ್ನಾಟಕ ಮೂಲದ ಸೈನಿಕರು ಕೂಡ ಸಾವನ್ನಪ್ಪಿದ್ದಾರೆ. ಮಂಗಳವಾರ ಪೂಂಚ್ ಜಿಲ್ಲೆಯ ಮೆಂಧರ್ನ ಬಲ್ನೋಯಿ ಪ್ರದೇಶದ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಬಳಿ ವಾಹನ ಕಂದಕಕ್ಕೆ ಉರುಳಿಬಿದ್ದು ಐವರು ಯೋಧರು ಸಾವನ್ನಪ್ಪಿ, ಐವರು…

Leave a Reply

Your email address will not be published. Required fields are marked *

You Missed

ಅಮೆರಿಕದ ಮಿಯಾಮಿಯಲ್ಲಿ ಶಿವರಾಜ್ ಕುಮಾರ್ ಯಶಸ್ವಿ ಶಸ್ತ್ರಚಿಕಿತ್ಸೆ.

ಅಮೆರಿಕದ ಮಿಯಾಮಿಯಲ್ಲಿ ಶಿವರಾಜ್ ಕುಮಾರ್ ಯಶಸ್ವಿ ಶಸ್ತ್ರಚಿಕಿತ್ಸೆ.

ಕರ್ನಾಟಕದ ಸಾಕಮ್ಮ ಹಿಮಾಚಲದಲ್ಲಿ ಪತ್ತೆ: 20 ವರ್ಷಗಳ ಬಳಿಕ ರಾಜ್ಯಕ್ಕೆ ಕರೆತರುತ್ತಿದೆ ಅಧಿಕಾರಿಗಳ ತಂಡ .

ಕರ್ನಾಟಕದ ಸಾಕಮ್ಮ  ಹಿಮಾಚಲದಲ್ಲಿ ಪತ್ತೆ: 20 ವರ್ಷಗಳ ಬಳಿಕ ರಾಜ್ಯಕ್ಕೆ ಕರೆತರುತ್ತಿದೆ ಅಧಿಕಾರಿಗಳ ತಂಡ .

ಕರ್ನಾಟಕದ ಮೂವರು ಯೋಧರು ಕಾಶ್ಮೀರ ಸೇನಾ ವಾಹನ ಅಪಘಾತದಲ್ಲಿ ನಿಧನ.

ಕರ್ನಾಟಕದ ಮೂವರು ಯೋಧರು ಕಾಶ್ಮೀರ ಸೇನಾ ವಾಹನ ಅಪಘಾತದಲ್ಲಿ ನಿಧನ.

ವಿಶ್ವದ ಅತ್ಯಂತ ದುಬಾರಿ ಮಾನವ ಹಲ್ಲು; ಸರ್ ಐಸಾಕ್ ನ್ಯೂಟನ್ ಹಲ್ಲುಗಳ ಬೆಲೆ 30 ಲಕ್ಷ ರೂ!!

ವಿಶ್ವದ ಅತ್ಯಂತ ದುಬಾರಿ ಮಾನವ ಹಲ್ಲು; ಸರ್ ಐಸಾಕ್ ನ್ಯೂಟನ್ ಹಲ್ಲುಗಳ ಬೆಲೆ  30 ಲಕ್ಷ ರೂ!!

ಮಕ್ಕಳನ್ನು ದತ್ತು ಪಡೆದು ಲೈಂಗಿಕವಾಗಿ ದುರುಪಯೋಗ : ಸಲಿಂಗಕಾಮಿ ಜೋಡಿಗೆ 100 ವರ್ಷ ಜೈಲು ಶಿಕ್ಷೆ;

ಮಕ್ಕಳನ್ನು ದತ್ತು ಪಡೆದು ಲೈಂಗಿಕವಾಗಿ ದುರುಪಯೋಗ : ಸಲಿಂಗಕಾಮಿ ಜೋಡಿಗೆ 100 ವರ್ಷ ಜೈಲು ಶಿಕ್ಷೆ;

ಬೆಳಗಾವಿಯಿಂದ ಬೆಂಗಳೂರಿಗೆ ಸಿ.ಟಿ ರವಿ ಶಿಫ್ಟ್…

ಬೆಳಗಾವಿಯಿಂದ ಬೆಂಗಳೂರಿಗೆ ಸಿ.ಟಿ ರವಿ ಶಿಫ್ಟ್…