ಕೋಲಾರ, : ಖಾದ್ರಿಪುರ ಮೂಲದ ವಸೀಂ, ಆಲಿಯಾ ಆಗಿ ಬದಲಾಗಿ ಇನ್ನೇನು ಒಂದು ವರ್ಷ ತುಂಬುತಿತ್ತು. ಅವನಲ್ಲ ಅವಳಾಗಿ ಡಿಸಂಬರ್ 17ಕ್ಕೆ ಒಂದು ವರ್ಷ ಪೂರೈಸುತ್ತಿರುವುದರಿಂದ ವಸೀಂ ಆಲಿಯಾಸ್ ಅಲಿಯಾ ಎನ್ನುವ ಮಂಗಳಮುಖಿ ಸರ್ಜನ್ ಮಾತಾ ಪೂಜೆ ಆಯೋಜಿಸಿದ್ದಳು. ಆದ್ರೆ, ದುರಂತ ಅಂದ್ರೆ ಆಲಿಯಾ ದುರಂತ ಅಂತ್ಯಕಂಡಿದ್ದಾಳೆ. ಹೌದು.. ಕೋಲಾರ ನಗರದ ಕೀಲುಕೋಟೆ ರೈಲ್ವೇ ಹಳಿಯಲ್ಲಿ ಆಲಿಯಾಳ ಮೃತದೇಹ ಪತ್ತೆಯಾಗಿದೆ. ಅಚ್ಚರಿ ಅಂದ್ರೆ ಆಲಿಯಾಳ ಪಕ್ಕದಲ್ಲೇ ಯುವಕನೋರ್ವನ ಶವ ಸಹ ಸಿಕ್ಕಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಖಾದ್ರಿಪುರ ಮೂಲದ ವಸೀಂ ಅಲಿಯಾಸ್ ಆಲಿಯಾ(28) ಸಾವನ್ನಪ್ಪಿದ ಮಂಗಳಮುಖಿ ಪಕ್ಕದಲ್ಲೇ ಮತ್ತೋಬ್ಬ ಅಯಾಜ್ ಎನ್ನುವ ಮೆಕಾನಿಕ್ ಮೃತದೇಹ ಪತ್ತೆಯಾಗಿದೆ. ಇಬ್ಬರ ಶವಗಳು ಅಕ್ಕಪಕ್ಕದಲ್ಲೇ ಬಿದ್ದಿದ್ದು, ಸ್ಥಳದಲ್ಲೇ ಬೀಯರ್ ಬಾಟಲಿ, ಮದ್ಯದ ಪ್ಯಾಕೇಟ್, ಕಬಾಬ್, ವಿಮಲ್ ಗುಟ್ಕಾ ಪ್ಯಾಕೇಟ್ ಸೇರಿದಂತೆ ಆಲಿಯಾಳ ಕಲೆಕ್ಷನ್ ಆಗಿದ್ದ ಹಣ ಸಹ ರೈಲ್ವೇ ಹಳಿಯಲ್ಲಿ ಬಿದ್ದಿದೆ. ಹೀಗಾಗಿ ಇಬ್ಬರು ಎಣ್ಣೆ ಮತ್ತಿನಲ್ಲಿದ್ದಾಗ ರೈಲು ಗುದ್ದಿಕೊಂಡು ಹೋಗಿರಬಹುದು ಎಂದು ಶಂಕಿಸಲಾಗಿದೆ. ಆದ್ರೆ, ಇಬ್ಬರ ಸಾವಿಗೆ ನಿಖರ ಕಾರಣ ಮಾತ್ರ ತಿಳಿದುಬಂದಿಲ್ಲ.
ರಾತ್ರಿ ರೈಲ್ವೇ ಹಳಿ ಮೇಲೆ ಆಲಿಯಾ ಹಾಗೂ ಅಯಾಜ್ ಇಬ್ಬರು ಕೆಲಕಾಲ ಛತ್ರಿ ಹಿಡಿದುಕೊಂಡು ಕುಳಿತಿದ್ದಾರೆ. ಬಳಿಕ ಚೆನ್ನಾಗಿ ಕುಡಿದು ಮೈಮರೆತಿದ್ದಾರೆ. ಈ ವೇಳೆ ರೈಲು ಗುದ್ದಿಕೊಂಡು ಹೋಗಿರಬಹುದು ಎಂದು ಎನ್ನಲಾಗಿದೆ. ಸದ್ಯ ಅಕ್ಕಪಕ್ಕದಲ್ಲೇ ಇಬ್ಬರ ಶವಗಳು ಪತ್ತೆಯಾಗಿದ್ದು ಅನುಮಾನಕ್ಕೆ ಕಾರಣವಾಗಿದೆ. ಇಬ್ಬರು ರೈಲಿಗೆ ಸಿಲುಕಿ ಸಾವನ್ನಪ್ಪಿದ್ರಾ? ಅಥವಾ ತಾವೇ ರೈಲಿಗೆ ತಲೆಕೊಟ್ಟ ಆತ್ಮಹತ್ಯೆ ಮಾಡಿಕೊಂಡ್ರಾ? ಇಲ್ಲ ಇದೇನು ಕೊಲೆಯೋ? ಇನ್ನು ಆಲಿಯಾ ಹಾಗೂ ಅಯಾಜ್ ಹೇಗೆ ಪರಿಚಯ ಆಯ್ತು ಹೀಗೆ ಹತ್ತು ಹಲವು ಅನುಮಾನಗಳು ಕಾಡುತ್ತಿದ್ದು, ಏನಾಗಿದೆ ಎನ್ನುವುದೇ ನಿಗೂಢವಾಗಿದೆ.
15 ವರ್ಷಗಳಿಂದ ಮಂಗಳಮುಖಿಯರ ಸಮರ ಸಂಗಮ ಗ್ರೂಪ್ ನಲ್ಲಿದ್ದ ವಸೀಂ, ಆಲಿಯಾ ಆಗಿ ಬದಲಾಗಿ ಡಿಸೆಂಬರ್ 17ಕ್ಕೆ 1 ವರ್ಷ ಪೂರೈಸಲಿದೆ. ಹಾಗಾಗಿ ಮಂಗಳವಾರ ಸರ್ಜರಿ ಮಾತಾ ಪೂಜೆ ಮಾಡುಲು ಎಲ್ಲಾ ಏರ್ಪಾಟುಗಳನ್ನು ಮಾಡಿಕೊಳ್ಳಲಾಗಿತ್ತಂತೆ. ಅದಕ್ಕೆ ಆಲಿಯಾ ಹತ್ತಿರದ ಸ್ನೇಹಿತರಿಗೆ ಆಹ್ವಾನ ಮಾಡಿದ್ದಳು ಎನ್ನಲಾಗಿದೆ.
ಸಮರ ಸಂಗಮ ಮುಖ್ಯಸ್ಥೆ ಸಮೀರಾ ಜೊತೆಗೆ ಎರಡು ದಿನಗಳ ಹಿಂದೆ ಬೆಂಗಳೂರಿಗೆ ತೆರಳಿ ಚಿಕಿತ್ಸೆ ಪಡೆದು ಸರ್ಜರಿ ಮಾತಾ ಪೂಜೆಗೂ ಬೇಕಾದ ಸಿದ್ದತೆಗಳನ್ನ ಮಾಡಿಕೊಳ್ಳಲಾಗಿತ್ತು. ಎಂದಿನಂತೆ ಕೋಲಾರ ಬಸ್ ನಿಲ್ದಾಣಕ್ಕೆ ಭಿಕ್ಷಾಟನೆಗೆ ಹೋದ ಆಲಿಯಾ ವಾಪಸ್ ಮನೆಗೆ ಬಂದಿಲ್ಲ.
ಲಿಂಗ ಪರಿವರ್ತನೆ ಮಾಡಿಕೊಂಡಿದ್ರು ಸಹ ಆಲಿಯಾಗೆ ಕುಟುಂಬ ಪೋಷಣೆ ಜವಬ್ದಾರಿ ಇತ್ತು. ಹಾಗಾಗಿ ಆಲಿಯಾ ತಮ್ಮ ಸ್ನೇಹಿತರೊಂದಿಗೆ ಇರದೆ ಖಾದ್ರಿಪುರದ ತಂದೆ-ತಾಯಿ ಹಾಗೂ ಅಕ್ಕನೊಂದಿಗೆ ಹೆಚ್ಚಾಗಿ ಇರುತ್ತಿದ್ದಳು. ಆದ್ರೆ ಆಲಿಯಾ ಹೀಗೆ ಶವವಾಗಿ ಪತ್ತೆಯಾಗಿರುವುದು ಕುಟುಂಬಸ್ಥರಿಗೆ ದಿಕ್ಕುತೋಚದಂತಾಗಿದೆ. ಸಂಜೆ ಮನೆಗೆ ಬರುವುದಾಗಿ ಹೇಳಿ ಹೋಗಿದ್ದ ಆಲಿಯಾ ಮನೆಗೆ ಬಂದಿಲ್ಲ .ಬೆಳಗ್ಗೆ ನೋಡಿದ್ರೆ ಹೆಣವಾಗಿದ್ದಾಳೆ ಎನ್ನುವುದು ಅಕ್ಕ ಹಾಗೂ ಸ್ನೇಹಿತೆ ವಾಸಖಿ ಮಾತು. ಇನ್ನು ಬಂಗಾರಪೇಟೆ ರೈಲ್ವೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.
ಒಟ್ಟಾರೆ ರೈಲ್ವೇ ಹಳಿಯಲ್ಲಿ ಮಂಗಳಮುಖಿ ಆಲಿಯಾ ಜೊತೆಗೆ ಅಯಾಜ್ ಸಹ ಮೃತಪಟ್ಟಿದ್ದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ನಿಜಕ್ಕೂ ಅಲ್ಲಿ ಏನಾಗಿದೆ, ಕಳೆದ ರಾತ್ರಿ ಕುಡಿದ ಮತ್ತಿನಲ್ಲಿ ರೈಲು ಡಿಕ್ಕಿಯಾಗಿ ಮೃತಪಟ್ಟಿದ್ದಾರಾ, ಇಲ್ಲ ಬೇರೆ ಏನಾದ್ರು ಆಗಿದ್ಯಾ ಎನ್ನುವುದ ಮಾತ್ರ ತನಿಖೆಯಿಂದಷ್ಟೇ ತಿಳಿದುಬರಬೇಕಿದೆ.
ಬೆಳಗಾವಿಯಿಂದ ಬೆಂಗಳೂರಿಗೆ ಸಿ.ಟಿ ರವಿ ಶಿಫ್ಟ್…
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣದಲ್ಲಿ ಬಿಜೆಪಿ ಎಂಎಲ್ಸಿ ಸಿ.ಟಿ ರವಿ ಅವರನ್ನು ಪೊಲೀಸರು ಇಂದು ಬೆಳಗಾವಿ ಜೆಎಂಎಫ್ಸಿ ಕೋರ್ಟ್ಗೆ ಹಾಜರುಪಡಿಸಿದರು. ಸಿ.ಟಿ ರವಿ ವಿರುದ್ಧದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಸ್ಪರ್ಶಾ ಡಿಸೋಜಾ ಅವರು, ಸಿ.ಟಿ.ರವಿ…